ಬೆಳ್ತಂಗಡಿ : ಯುವವಾಹಿನಿ (ರಿ) ಬೆಳ್ತಂಗಡಿ ಘಟಕ, ಯುವವಾಹಿನಿ ಮಹಿಳಾ ಸಂಚಾಲನಾ ಸಮಿತಿ ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ “ಮನಸ್ಸು ಅಂತರಾಳದ ಅವಲೋಕನ” ಕಾರ್ಯಕ್ರಮ 15-09-2024 ರಂದು ಶ್ರೀ ಗುರುನಾರಾಯಣ ಸ್ವಾಮಿ ಸಭಾಭವನ ಬೆಳ್ತಂಗಡಿಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಯಾಟಕರು ಉದ್ಯಮಿಗಳು ಅನ್ನಪೂರ್ಣ ಮೆಟಲ್ ಬೆಳ್ತಂಗಡಿ ರಕ್ಷಾ ರಾಫ್ಲೇಶ್ ರವರು ಪ್ರಸ್ತುತ ಕಾಲಘಟ್ಟದಲ್ಲಿ ಯುವ ಜನತೆಗೆ ಇಂತಹ ಕಾರ್ಯಕ್ರಮ ಅತ್ಯಂತ ಅಗತ್ಯ ಇದೆ. ಯುವವಾಹಿನಿ ಇಂತಹ ಹಲವಾರು ಸಮಾಜಮುಖಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ. ಇನ್ನಷ್ಟು ಸಮಾಜಕ್ಕೆ, ಯುವ ಜನತೆಗೆ ಉಪಯೋಗ ಆಗುವಂತಹ ಕೆಲಸಗಳು ಘಟಕ ಮತ್ತು ಮಹಿಳಾ ಸಂಚಾಲನಾ ಸಮಿತಿಯಿಂದ ನಡೆಯಲಿ ಎಂದು ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಹರ್ಷಿತಾ ಎಂ. ವಿ, ಶೈಕ್ಷಣಿಕ ಆಪ್ತ ಸಮಾಲೋಚಕರು ಕೇಂದ್ರೀಯ ವಿದ್ಯಾಲಯ ಉಡುಪಿ, ಇವರು ಮಾಹಿತಿ ನೀಡುತ್ತಾ ಮಕ್ಕಳು ಮತ್ತು ಮಹಿಳೆಯರ ಮೇಲಾಗಿರುವ ದೌರ್ಜನ್ಯದ ಹಲವಾರು ನೈಜ ಘಟನೆಗಳನ್ನು ತಾನು ನಿರ್ವಹಣೆ ಮಾಡಿರುವ ತನ್ನ ಅನುಭವಗಳನ್ನು ಹಂಚಿಕೊಂಡರು.
ಪೋಷಕರು ಮಕ್ಕಳನ್ನುಅವರ ಮುಂದಿನ ಬದುಕು, ಭವಿಷ್ಯ ಭದ್ರತೆಯಿಂದ ಕೂಡಿರುವಂತೆ ಗಟ್ಟಿಗೊಳಿಸಬೇಕು. ತಲೆಯಲ್ಲಿ ಯುಕ್ತಿ ಮನಸ್ನಲ್ಲಿ ಭಕ್ತಿ ತೋಳಿನಲ್ಲಿ ಶಕ್ತಿ ಬೆಳೆಸಿಕೊಳ್ಳುವಂತೆ ಮಕ್ಕಳನ್ನು ನಾವು ಬೆಳೆಸಬೇಕು, ಹಾಗೂ ಸಾಮಾಜಿಕ ಜಾಲತಾಣದ ಒಳಿತು ಕೆಡುಕುಗಳ ಬಗ್ಗೆ ಅರಿತುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದ ಘಟಕದ ಅಧ್ಯಕ್ಷರು ಸದಾಶಿವ ಊರ ಇಂತಹ ಜಾಗ್ಯತಿ ಕಾರ್ಯಕ್ರಮಗಳಿಂದ ಮಾತ್ರ ಜನತೆ ಜಾಗೃತರಾಗಿ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.
ವೇದಿಕೆಯಲ್ಲಿ ಘಟಕದ ಸ್ಥಾಪಕ ಅಧ್ಯಕ್ಷ ರಾಕೇಶ್ ಕುಮಾರ್ ಮೂಡುಕೋಡಿ, ಮಹಿಳಾ ಸಂಚಾಲನ ಸಮಿತಿ ಸಂಚಾಲಕಿ ಪನಿತಾ ಜನಾರ್ಧನ್, ಘಟಕದ ಮಹಿಳಾ ನಿರ್ದೇಶಕಿ ಲೀಲಾವತಿ ವಸಂತ ಪೂಜಾರಿ ಉಪಸ್ಥಿತರಿದ್ದರು.
ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಸುಜಾತ ಅಣ್ಣಿ ಪೂಜಾರಿ ಪ್ರಸ್ತಾವಿಕ ಮಾತಾನಾಡಿದರು.
ಸುಧಾಮಣಿ ಆರ್ ಸ್ವಾಗತಿಸಿದರು.
ಕನ್ನಿಕಾ ಕಾರ್ಯಕ್ರಮ ನಿರೂಪಿಸಿದರು.