ಯುವವಾಹಿನಿ (ರಿ.) ಬೆಂಗಳೂರು ಘಟಕದ ಭಾಂಧವ್ಯ – 2019

ಬೆಂಗಳೂರು : ದಿನಾಂಕ 16-06-2019 ರಂದು 45 ಸದಸ್ಯರು ಹಾಗೂ 6 ಮಕ್ಕಳು ಒಟ್ಟು 51 ಮಂದಿ ಒಂದು ದಿನದ ಪ್ರವಾಸಕ್ಕೆ ಡ್ರೀಮ್ ಲ್ಯಾಂಡ್ ರೆಸಾರ್ಟ್ ಗೊಲ್ಲಹಳ್ಳಿ, ಬೆಂಗಳೂರು ಇಲ್ಲಿಗೆ ಕೈಗೊಂಡಿದ್ದೇವು.ಈ ಕಾರ್ಯಕ್ರಮವು ನಿರೀಕ್ಷೆಗೆ ಮೀರಿ ಯಶಸ್ವಿ ಗೊಂಡಿತು.
ಬೆಳಿಗ್ಗೆ ಸರಿಯಾಗಿ 8.35ಕ್ಕೆ ಬೆಂಗಳೂರಿನಿಂದ ಬಸ್ನಿಂದ ಪ್ರಯಾಣಿಸಿ ಸರಿಯಾಗಿ 9.20 ಕ್ಕೆ ರೆಸಾರ್ಟ್ ತಲುಪಿದೆವು.ಬೆಳಗ್ಗಿನ ಉಪಹಾರ ಮಾಡಿ ಮುಂದಿನ ಆಟಗಳಲ್ಲಿ ತೊಡಗಿಸಿಕೊಂಡಿದ್ದೇವು. ಬೆಂಗಳೂರಿನ ಒತ್ತಡದ ಜೀವನದಲ್ಲಿ ಎಲ್ಲರೂ ಯುವವಾಹಿನಿ ಬಂಧು ಮಿತ್ರರು ಒಟ್ಟಾಗಿ ಒಂದು ದಿನ ಬಿಡುವು ಮಾಡಿಕೊಂಡು ಪ್ರವಾಸದಲ್ಲಿ ಪಾಲ್ಗೊಂಡು ಎಲ್ಲಾ ತರಹದ ಸಾಹಸಮಯ ಆಟಗಳು, ವಾಟರ್ ಪೂಲ್ ಗೇಮ್ಸ್, ಮಕ್ಕಳ ಆಟ, ರೈನ್ ಡಾನ್ಸ್ ಹಾಗೂ ಇಂಡೋರ್ ಗೇಮ್ಸ್ ನಲ್ಲಿ ಕಾಲ ಕಳೆದೆವು.
ಇದರ ಜೊತೆಗೆ ನಮ್ಮ ಘಟಕದ ಸದಸ್ಯರಾದ ಡಾ.ಸುರೇಶ್ ಚಿತ್ರಪೂ ನಿರ್ದೇಶನದ ಇಲ್ಲೋಕ್ಕೆಲ್ ತುಳು ಚಲನಚಿತ್ರದ ಒಂದು ದ್ವನಿ ಸುರುಳಿಯನ್ನು ಘಟಕದ ಅಧ್ಯಕ್ಷರಾದ ಸುಧೀರ್ ಎಸ್ ಪೂಜಾರಿ ಅವರು ಬಿಡುಗಡೆಗೊಳಿಸಿದರು. ಮಧ್ಯಾಹ್ನದ ಊಟ ಮತ್ತು ಸಂಜೆಯ ಪಲಾಹರ ಎಲ್ಲರಿಗೂ ಉಲ್ಲಾಸ ತಂದುಕೊಟ್ಟಿರುತ್ತದೆ.
ಈ ಕಾರ್ಯಕ್ರಮವು ಘಟಕದ ಅಧ್ಯಕ್ಷರಾದ ಸುಧೀರ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಂಚಾಲಕರಾಗಿ ಪ್ರಸಾದ್ ಪೂಜಾರಿ ಹಾಗೂ ವಿನಯ್ ಸುವರ್ಣ ಇವರು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ರಘು ಮಟ್ಟು , ರಾಘವೇಂದ್ರ ಪೂಜಾರಿ ಹಾಗೂ ಶರತ್ ಸುವರ್ಣ ಇವರಿಗೆ ಸಹಕಾರ ನೀಡಿದರು.

Leave a Reply

Your email address will not be published. Required fields are marked *

error: Content is protected !!