ಕೊಲ್ಯ ; ಯುವವಾಹಿನಿ (ರಿ) ಕೊಲ್ಯ ಘಟಕ ಇದರ ವತಿಯಿಂದ ಚಿಕ್ಕಮಗಳೂರು ಪ್ರವಾಸ ಕೈಗೊಳ್ಳಲಾಯಿತು ಒಟ್ಟು 30 ಜನರ ತಂಡ ಈ ಪ್ರವಾಸದಲ್ಲಿ ಪಾಲ್ಗೊಂಡಿದ್ದರು ಈ ಪ್ರವಾಸದ ಸಂಪೂರ್ಣ ಜವಾಬ್ದಾರಿಯನ್ನು ನಿಕಟ ಪೂರ್ವ ಅಧ್ಯಕ್ಷರಾದ ಕುಸುಮಾಕರ್ ಕುಂಪಲ ಅವರಿಗೆ ವಹಿಸಲಾಯಿತು ಶನಿವಾರ ಬೆಳಗ್ಗೆ 5.00 ಗೆ ಸರಿಯಾಗಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ದಲ್ಲಿ ಪೂಜೆಯನ್ನು ಸಲ್ಲಿಸಿ ಹೊರಡಲಾಯಿತು ಚಾರ್ಮಾಡಿ ಘಾಟಿಯಲ್ಲಿ ಬೆಳಗಿನ ಉಪಹಾರ ಮಾಡಿದೆವು ಅಲ್ಲಿಂದ ಹೊರಟು ನಾವು ಸರಿಯಾಗಿ 10.30 ಕ್ಕೆ ದೇವಿ ಗಿರಿ ರೆಸಾರ್ಟ್ ತಲುಪಿದೆವು ರೆಸಾರ್ಟ್ ನಲ್ಲಿ ಸ್ವಲ್ಪ ಪ್ರೆಶ್ ಆಗಿ ಮೂರು ಜೀಪುಗಳಲ್ಲಿ ಮೂರು ತಂಡವಾಗಿ ಪ್ರಯಾಣಿಸಿತ್ತು ಮೊದಲಿಗೆ ಮುಳ್ಳಯ್ಯನಗಿರಿ ಹೊರಟೆವು ಅಲ್ಲಿ ಪ್ರಕೃತಿಯ ಸೌಂದರ್ಯವನ್ನು ವೀಕ್ಷಿಸುತ್ತಾ ಮಧ್ಯಾಹ್ನದ ಊಟವನ್ನು ಅಲ್ಲಿಯೇ ಮುಗಿಸಿ ನಂತರ ಅಲ್ಲಿಂದ ಹೊರಟು ದಬ ದಬೆ ಫಾಲ್ಸ್ ಅಲ್ಲಿಗೆ ಬಂದೆವು ಅಲ್ಲಿ ಕೂಡ ನಮ್ಮ ಸದಸ್ಯರು ತುಂಬಾ ಖುಷಿಯಾಗಿ ಪೋಟೊಗಳನ್ನು ತೆಗೆಯುತ್ತಾರೆ ಮತ್ತು ಅಲ್ಲಿಂದ ನಾವು ಆಟ ಆಡುತ್ತಾ ಮುಂದುವರಿದೆವು ಹಾಗೆ ಮುಂದಿನ ನಮ್ಮ ಪ್ರಯಾಣ ‘Z’ point ನಲ್ಲಿ ನಮ್ಮ ಸದಸ್ಯರು ತುಂಬಾ ಎತ್ತರವಾದ ಪ್ರದೇಶವಾದ್ದರಿಂದ ತುಂಬಾ ವೇಗವಾಗಿ ಗಾಳಿ ಬೀಸುತ್ತಿತು ನಮ್ಮ ಸದಸ್ಯರು ತುಂಬಾ ಖುಷಿಯಾಗಿ ಕುಣಿದು ಕುಪ್ಪಳಿಸಿದರು ತದನಂತರ ನಮ್ಮ ಸದಸ್ಯರು ಬಾಬಾಬುಡನ್ಗಿರಿಗೆ ಬಂದು ದತ್ತ ಪೀಠದಲ್ಲಿ ಪಾದುಕೆಯ ದರ್ಶನ ಪಡೆದರು ತದನಂತರ ನಾವು ರೆಸಾರ್ಟ್ ಗೆ ಪ್ರಯಾಣ ಬೆಳೆಸಿದೆವು ಅಲ್ಲಿ ಸಂಜೆಯ ಚಹಾ ಕಾಫಿ ಮುಗಿಸಿ ಫ್ರೆಶ್ ಆಗಿ ಸರಿಯಾಗಿ 8.30 ಕ್ಕೆ ಕೆಳಗೆ ಡೈನಿಂಗ್ ಹಾಲ್ ಹತ್ತಿರ ಬಂದೆವು ಅಲ್ಲಿ ನಮ್ಮ ಘಟಕದ ಸ್ಥಾಪಕ ಅಧ್ಯಕ್ಷರಾದ ಸುರೇಶ್. ಬಿ ಮತ್ತು ಸುಧಾ ಸುರೇಶ್ ಅವರ ಮದುವೆಯ ವಾರ್ಷಿಕೋತ್ಸವ ಆಚರಣೆಗೆ ತಯಾರಿಯಾಗಿದ್ದು ಎಲ್ಲ ಸದಸ್ಯರು ಬಂದು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಮತ್ತು ದಂಪತಿಗಳು ಕೇಕ್ ಕಟ್ ಮಾಡುವ ಮೂಲಕ ತಮ್ಮ ಮದುವೆಯ ವಾರ್ಷಿಕೋತ್ಸವವನ್ನು ಆಚರಿಸಿದರು ಸದಸ್ಯರು ಎಲ್ಲರೂ ದಂಪತಿಗಳನ್ನು ಅಭಿನಂದಿಸಿದರು ತದ ನಂತರ ಎಲ್ಲರ ಅಚ್ಚುಮೆಚ್ಚಿನ ಪಯರ್ ಕ್ಯಾಂಪ್ ಆಯೋಜಿಸಲಾಗಿತ್ತು ಇದರಲ್ಲಿ ಸದಸ್ಯರೆಲ್ಲರೂ ಕುಣಿದು ಕುಪ್ಪಳಿಸಿದರು ನಂತರ ರಾತ್ರಿಯ ಊಟ ಮುಗಿಸಿ ನಿದ್ದೆಗೆ ಜಾರಿದ್ದರು
ಮರುದಿನ ಬೆಳಿಗ್ಗೆ 5.00 ಗಂಟೆಗೆ ಸದಸ್ಯರು ಎದ್ದು ಯೋಗ ವಾಕಿಂಗ್ ಮೂಲಕ ತಮ್ಮ ದಿನಚರಿಯನ್ನು ಚಾಲನೆ ಮಾಡಿದರು ನಂತರ ಬೆಳಗಿನ ಉಪಹಾರ ಮುಗಿಸಿ ಯುವ ವಾಹಿನಿ (ರಿ)ಕೊಲ್ಯ ಘಟಕ ಇದರ ವತಿಯಿಂದ ರೆಸಾರ್ಟಿನ ಮಾಲಕರಿಗೆ ನೆನಪಿನ ಕಾಣಿಕೆ ನೀಡಲಾಯಿತು ಮತ್ತು ರೆಸಾರ್ಟ್ ನಿಂದ ಸರಿಯಾಗಿ ಬೆಳಿಗ್ಗೆ 9.30 ಕ್ಕೆ ಹೊರಟೆವು ಮತ್ತು ಸರಿಯಾಗಿ ಮೂಡಿಗೆರೆ ಚರ್ಚ್ ಹಾಲ್ ಗೆ ತಲುಪಿದೆವು ಇಲ್ಲಿ ಯುವವಾಹಿನಿ (ರಿ)ಮೂಡಿಗೆರೆ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡೆವು ತದನಂತರ ನಾವು ಊಟ ಮುಗಿಸಿ ದೇವರ ಮನೆಗೆ ಪ್ರಯಾಣ ಬೆಳೆಸಿದೆವು ಅಲ್ಲಿಗೆ ತಲುಪಿ ಅಲ್ಲಿಯ ಪ್ರಕೃತಿಯ ಸೌಂದರ್ಯವನ್ನು ವೀಕ್ಷಿಸುತ್ತಾ ನಾವು ನಮ್ಮ ತವರಿನ ಪ್ರಯಣ ಬೆಳೆಸಿದೆವು ಸರಿಯಾಗಿ 8.30 ಕ್ಕೆ ಸರಿಯಾಗಿ ನಮ್ಮ ಬಸ್ ಬಂದು ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರುಮಂದಿರಕ್ಕೆ ತಲುಪಿತು