ಮಂಗಳೂರು: ಯುವವಾಹಿನಿ(ರಿ) ಕೊಲ್ಯ ಘಟಕದ ವತಿಯಿಂದ ತಾ. 28-07-2024 ರ ಆದಿತ್ಯವಾರ ಬ್ರಹ್ಮ ಶ್ರೀ ನಾರಾಯಣ ಗುರು ಧ್ಯಾನ ಮಂದಿರದಲ್ಲಿ ವಾರದ ಪೂಜೆಯನ್ನು ನೆರವೇರಿಸಲಾಯಿತು.
ಘಟಕದ ಸದಸ್ಯರು ಮೊದಲು ಗುರು ಭಜನೆಯಲ್ಲಿ ಭಾಗವಹಿಸಿ ಗುರುವಿನ ಸ್ತುತಿ ಮಾಡಿದರು. ಭಜನೆ ನಂತರ ಮಂಗಳಾರತಿ ನೆರವೇರಿಸಿ ಘಟಕದ ಅಧ್ಯಕ್ಷರಾದ ಸುಧಾ ಸುರೇಶ್ ಘಟಕದ ಪರವಾಗಿ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಘಟಕದ ಕಾರ್ಯದರ್ಶಿ ಜಗಜೀವನ್ ಕೊಲ್ಯ, ಕೋಶಾಧಿಕಾರಿ ಲತೀಶ್ ಪಾಪುದಡಿ, ಸ್ಥಾಪಕ ಅಧ್ಯಕ್ಷರಾದ ಸುರೇಶ್ ಬಿ, ನಿಕಟಪೂರ್ವ ಅಧ್ಯಕ್ಷರಾದ ಲತೀಶ್ ಎಂ ಸಂಕೊಳಿಗೆ, ದ್ವಿತೀಯ ಉಪಾಧ್ಯಕ್ಷರಾದ ಜೀವನ್ ಕೊಲ್ಯ, ಮಾಜಿ ಅಧ್ಯಕ್ಷರಾದ ಕುಸುಮಾಕರ್ ಕುಂಪಲ, ಆನಂದ ಮಲಯಾಳ ಕೋಡಿ ಹಾಗೂ ನಿರ್ದೇಶಕರಾದ ಅಶ್ವಿತಾ ಕುಂಪಲ,ತ್ರಿವೇಣಿ ಕುಂಪಲ,ಕಸ್ತೂರಿ ವೇಣುಗೋಪಾಲ್ ,ಶಶಿಕಾಂತ್ ಪರ್ಯಾತ್ತೂರು,ಪ್ರಶಾಂತ್ ನೆಲ್ಲಿಸ್ಥಳ, ಸವಿತಾ ಸಂತೋಷ್ ಹಾಗೂ ಘಟಕದ ಸದಸ್ಯರು ಉಪಸ್ಥಿತರಿದ್ದರು.