ಕುಪ್ಪೆಪದವು : ಒಂದು ದಿನದ ಪ್ರವಾಸ ಕಾರ್ಯಕ್ರಮವನ್ನು 28/07/2019 ರಂದು ಹಮ್ಮಿಕೊಳ್ಳಲಾಯಿತು. ಈ ಪ್ರವಾಸಕ್ಕೆ ಸುಮಾರು 52 ಕ್ಕಿಂತ ಹೆಚ್ಚು ಸದಸ್ಯರು ಪಾಲ್ಗೊಂಡಿದ್ದರು. ಎಲ್ಲಾ ಸದಸ್ಯರು ಮುಂಜಾನೆ 5.00 ಘಂಟೆಗೆ ಸರಿಯಾಗಿ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಸೇರಿದರು.
ಅಲ್ಲಿಂದ ನಮ್ಮ ಪ್ರಯಾಣ ಸಾಗಿದ ಹಾದಿ……ಸಿಗಂದೂರು ಚೌಡೇಶ್ವರಿ ದೇವಾಲಯ .ಜೋಗು ಜಲಪಾತ ಹೀಗೆ ಶಿವಮೊಗ್ಗ ಜಿಲ್ಲೆಯ ಪ್ರಕೃತಿಯ ಸೊಬಗನ್ನು ಸವಿಯುತ್ತಾ, ಬೇಡಿದ್ದನ್ನು ಕರುಣಿಸುವ ತಾಯಿಯ ದೇಗುಲ ದರ್ಶನ ಮತ್ತು ಜೀವನದಲ್ಲಿ ಒಮ್ಮೆ ನೋಡಲೇ ಬೇಕಾದ ಜೋಗುಜಲಪಾತದ ರಮಣೀಯ ದೃಶ್ಯ ವನ್ನು ವೀಕ್ಷಿಸಿ ರೋಮಾಂಚಿಸಿದೆವು. ಪ್ರಯಾಣದ ಉದ್ದಕ್ಕೂ ಹಾಸ್ಯ ಚಟಾಕಿಯೊಂದಿಗೆ, ಮಲೆನಾಡಿನ ಸೌಂದರ್ಯವನ್ನು ಆಸ್ವಾದಿಸುತ್ತಾ ರಾತ್ರಿ ನಮ್ಮ ನಮ್ಮ ಗೂಡನ್ನು ಸೇರಿದೆವು. ಈ ರೀತಿಯಾಗಿ ನಮ್ಮ ಘಟಕದ ಒಂದು ದಿನದ ಯಾತ್ರೆಯನ್ನು ಅರ್ಥಪೂರ್ಣವಾಗಿ ಯಶಸ್ವಿಗೊಳಿಸಿದೆವು.