ಕೊಲ್ಯ : ದಿನಾಂಕ21.7.19 ರಂದು ಯುವವಾಹಿನಿ (ರಿ)ಕೊಲ್ಯ ಘಟಕದ ವತಿಯಿಂದ ವನಮಹೋತ್ಸವವನ್ನುಆಚರಿಸಲಾಯಿತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸಿ ಇದಕ್ಕೆ ಚಾಲನೆ ಕೊಡಲಾಯಿತು ಘಟಕದ ಅಧ್ಯಕ್ಷರಾದ ಆನಂದ ಮಲಯಾಳ ಕೋಡಿ ಬಿಲ್ಲವ ಸೇವಾ ಸಮಾಜ (ರಿ) ಕೊಲ್ಯ ಇದರ ಅಧ್ಯಕ್ಷರಾದ ವೇಣುಗೋಪಾಲ್ ಕೊಲ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಅಮೀನ್ ಕೋಶಾಧಿಕಾರಿ ಯತೀಶ್ ಕೊಲ್ಯ ಸಂಘಟನಾ ಕಾರ್ಯ ದರ್ಶಿ ನಿತಿನ್ ಕರ್ಕೇರ ಮತ್ತು ನಿಕಟ ಪೂರ್ವ ಅಧ್ಯಕ್ಷರಾದ ಕುಸುಮಾಕರ್ ಕುಂಪಲ ಹಾಗೂ ಘಟಕದ ನಿರ್ದೇಶಕರು ಸದಸ್ಯರು ದೇವಸ್ಥಾನದ ಕುಟುಂಬಸ್ಥರು ಉಪಸ್ಥಿತಿ ಇದ್ದರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ನೆತ್ತಿಲ ಇದರ ವಠಾರದಲ್ಲಿ ಬಾದಾಮಿಗಿಡ ಶ್ರೀ ಚಂದನ ಗಿಡ ಹಾಗೆ ಮಹಿಳಾ ಸದಸ್ಯರಿಂದ ಧೂಪದ ಗಿಡವನ್ನು ವಠಾರದಲ್ಲಿ ನೆಡಲಾಯಿತು ತದನಂತರ ದೇವಸ್ಥಾನದ ಕುಟುಂಬಸ್ಥರು ಬೆಳಗಿನ ಉಪಹಾರವನ್ನು ಏರ್ಪಡಿಸಿದ್ದರು ಉಪಾಹಾರ ಸವಿದ ನಂತರ ನಮ್ಮ ಘಟಕದ ಉಪಾಧ್ಯಕ್ಷರಾದ ಲತೀಶ್ ಪಾಪು ದಡಿ ಅವರ ಹಿತ್ತಲಿನಲ್ಲಿ ಮೂಡಿಗೆರೆ ಘಟಕ ಪದಗ್ರಹಣ ಸಂದರ್ಭದಲ್ಲಿ ನೀಡಿರುವ ನೇರಳೆಗಿಡವನ್ನು ನೆಡಲಾಯಿತು ಉಪಾಧ್ಯಕ್ಷರ ಮನೆಯಲ್ಲಿಯೂ ಕೂಡ ಸದಸ್ಯರನ್ನು ಉಪಚರಿಸಿದರು ಹೀಗೆ ವನಮಹೋತ್ಸವ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು