ವೇಣೂರು: ಬಿಲ್ಲವ ಸಮಾಜದ ಭರವಸೆಯ ಸಂಘಟನೆಯಾಗಿ ಹೊರಹೊಮ್ಮಿದ ಯುವವಾಹಿನಿ, ಯುವಜನತೆಯ ಆಶಾಕಿರಣವಾಗಿ ಮೂಡಿಬರುತ್ತಿರುವುದು ಸಂತಸದ ವಿಚಾರ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ, ಗುರು ಬೆಳದಿಂಗಳು ಫೌಂಡೇಶನ್ ಅಧ್ಯಕ್ಷರಾದ ಪದ್ಮರಾಜ್ ಆರ್ ತಿಳಿಸಿದರು.
ಅವರು ದಿನಾಂಕ 2024 ನೇ ಜನವರಿ 25 ರಂದು ಕೊಕ್ರಾಡಿ ಬ್ರಹ್ಮಶ್ರೀ ನಾರಾಯಣಗುರು ಸಬಾಭವನದಲ್ಕಿ ಜರಗಿದ ಯುವವಾಹಿನಿ(ರಿ.) ವೇಣೂರು ಘಟಕದ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯರಾದ ಕೆ ಹರೀಶ್ ಕುಮಾರ್ ಕಾರ್ಯಕ್ರಮವನ್ನು ಉಧ್ಘಾಟಿಸಿ ಶುಭಹಾರೈಸಿದರು.
ಘಟಕದ ಅಧ್ಯಕ್ಷರಾದ ಹರಿಣಿ ಕರುಣಾಕರ ಪೂಜಾರಿ ಇವರು ಅಧ್ಯಕ್ಷತೆ ವಹಿಸಿದ್ದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿರವರು ಶುಭಕರ ಪೂಜಾರಿ ನೇತ್ರತ್ವದ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಬೆಳ್ತಂಗಡಿ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾದ ಜಯವಿಕ್ರಮ್ ಕಲ್ಲಾಪು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಿತಿನ್ ಮುಂಡೇವು, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ವೇಣೂರು ವಲಯದ ಅಧ್ಯಕ್ಷರಾದ ಹರೀಶ್ ಪೊಕ್ಕಿ, ಪ್ರಗತಿಪರ ಕೃಷಿಕರದ ಶ್ರೀಧರ್ ಪೂಜಾರಿ ಭೂತಡ್ಕ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಕೊಕ್ರಡಿಯ ಅಧ್ಯಕ್ಷರಾದ ಮಂಜಪ್ಪ ಪೂಜಾರಿ ಹಾಗೂ ನೂತನ ಅಧ್ಯಕ್ಷರಾದ ಶುಭಕರ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತಿರಿದ್ದರು.
ಘಟಕದ ನಿಕಟಪೂರ್ವ ಅಧ್ಯಕ್ಷರಾದ ಯೋಗೀಶ್ ಬಿಕ್ರೋಟ್ಟು ನೂತನ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಸಭೆಗೆ ಪರಿಚಯಿಸಿದರು.
ಸನ್ಮಾನ
ಯುವವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷರು ರಾಜೇಶ್ ಬಿ, ಕಂಬಳ ಯಜಮಾನರಾದ ಗಣೇಶ್ ನಾರಾಯಣ್ ಪಂಡಿತ್ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗಭೂಮಿ ಕಲಾವಿದ ರವಿಚಂದ್ರ ವಿ.ಸಾಲ್ಯಾನ್, ಕಂಬಳ ಓಟಗಾರರು ಸಾವ್ಯ ಗಂಗಯ್ಯ ಪೂಜಾರಿಯವರನ್ನು ಗೌರವಿಸಿ ಅಭಿನಂದಿಸಲಾಯಿತು.
ಆಸರೆ ಸೇವಾ ಯೋಜನೆ ಬೈಕ್ ಡಿಕ್ಕಿಯಾಗಿ ಕಾಲು ಮುರಿದುಕೊಂಡಿರುವ ಸಾವ್ಯಡೆಂಗಳು ನಿವಾಸಿ ಮಾಧವ್ ರವರಿಗೆ ಯುವವಾಹಿನಿ ಆಸರೆ ಯೋಜನೆಯ ಮೂಲಕ ಸಹಾಯಹಸ್ತ ನೀಡಲಾಯಿತು.
ಘಟಕದ ಸ್ಥಾಪಕ ಅಧ್ಯಕ್ಷರಾದ ನಿತೇಶ್ ಹೆಚ್ ಪ್ರಸ್ತಾವನೆಗೈದರು.
ಕಾರ್ಯದರ್ಶಿ ಸುಜಿತ್ ಬಜಿರೆ ವರದಿ ವಾಚಿಸಿದರು. ಉಪನ್ಯಾಸಕರಾದ ರಾಕೇಶ್ ಮೂಡುಕೋಡಿ ಮತ್ತು ಶಶಿಧರ್ ಕೊಕ್ರಡಿ ಕಾರ್ಯಕ್ರಮ ನಿರ್ವಹಿಸಿದರು.
ನೂತನ ಕಾರ್ಯದರ್ಶಿ ರಕ್ಷಿತ್ ಅಂಡಿಂಜೆ ಧನ್ಯವಾದಗೈದರು.