ಯುವವಾಹಿನಿ ಬಂಟ್ವಾಳ ಘಟಕದ ಪದಗ್ರಹಣ

ಎಸ್ ಎಸ್ ಎಲ್ ಸಿ, ಪಿಯುಸಿ ಸಾಧಕರಿಗೆ ಪುರಸ್ಕಾರ
2019 ನೇ ಸಾಲಿನ‌ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಅಂಕ‌ ಗಳಿಸಿದ 34 ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ತವರುಮನೆಯ ಸನ್ಮಾನ : ಬಿ.ತಮ್ಮಯ
ಯುವವಾಹಿನಿ ಸಲಹೆಗಾರ, ತುಳುಲಿಪಿ ಶಿಕ್ಷಕ, ಸಾಹಿತಿ ಬಿ.ತಮ್ಮಯ ಅವರ ಸಾಮಾಜಿಕ ಹಾಗೂ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಸನ್ಮಾನಿಸಲಾಯಿತು, ಯುವವಾಹಿನಿ ಬಂಟ್ವಾಳ ಘಟಕದ ಸನ್ಮಾನವು ತವರುಮನೆಯ ಸನ್ಮಾನದಂತೆ ಅತ್ಯಂತ ಶ್ರೇಷ್ಠವಾದ ಸನ್ಮಾನ ಈ ಸನ್ಮಾನವು ಅಚ್ಚಳಿಯದೆ ನೆನಪಿನ ಬುತ್ತಿಯಲ್ಲಿ ಶಾಶ್ವತವಾಗಿ ಉಳಿಯಲಿದೆ ಎಂದು ಸನ್ಮಾನಕ್ಕೆ ಉತ್ತರಿಸಿದ ತಮ್ಮಯರು ತಿಳಿಸಿದರು.

ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ವಿಜ್ಞಾನ ಪ್ರತಿಬೆ ಕೌಶಿಕ್ ‌ಬತ್ತನಾಡಿ ಇವರನ್ನು ಸನ್ಮಾನಿಸಲಾಯಿತು

ಬಂಟ್ವಾಳ ಘಟಕದ ಸಾಧನೆ ಶ್ಲಾಘನೀಯ : ಜಯಂತ ನಡುಬೈಲು
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲು ಅವರು ಬಿ.ಇಂದಿರೇಶ್ ನೇತ್ರತ್ವದ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ, ಬಂಟ್ವಾಳ ಘಟಕದ ಸಾಧನೆಯನ್ನು ಶ್ಲಾಘಿಸಿದರು.

ಎಲ್.ಐ.ಸಿ ನಿವೃತ್ತ ಅಸಿಸ್ಟೆಂಟ್ ಜನರಲ್ ಮೆನೇಜರ್ ಚಂದ್ರಕಾಂತ್ ಕುಮಾರ್, ಬಂಟ್ವಾಳ ಪ್ರಾದೇಶಿಕ ಸಾರಿಗೆ ಇಲಾಖಾ ಆಯುಕ್ತರಾದ ಚರಣ್, ಉದ್ಯಮಿ ಅಜಯ್, ಬಂಟ್ವಾಳ ಎಸ್.ವಿ.ಎಸ್ ವಿದ್ಯಾಗಿರಿ ಆಂಗ್ಲ ಮಾಧ್ಯಮ ಶಾಲಾ ಆಡಳಿತಾಧಿಕಾರಿ ಐತಪ್ಪ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು

2019-20 ನೇ ಸಾಲಿನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಇಂದಿರೇಶ್ ಮಿತ್ತಬೈಲು ಮಾತನಾಡಿ ಹಿರಿಯರ ಮಾರ್ಗದರ್ಶನ ,ಸದಸ್ಯರ ಸಹಕಾರದಿಂದ ಯುವವಾಹಿನಿ ಬಂಟ್ವಾಳ ಘಟಕವನ್ನು ಮುಂದಿನ‌ ಒಂದು ವರ್ಷದಲ್ಲಿ ಯಶಸ್ವಿಯಾಗಿ ಮುನ್ನಡೆಸುವ ಆತ್ಮವಿಶ್ವಾಸ ತನಗಿದೆ ಎಂದರು.
ಯುವವಾಹಿನಿಯ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಸಮಾಜದ ಗಣ್ಯರು ನೂತನ ತಂಡಕ್ಕೆ ಶುಭ ಹಾರೈಕೆ ಮಾಡಿದರು. ಸಭಾ ಕಾರ್ಯಕ್ರಮದ ಬಳಿಕ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಘಟಕದ ಮಾಜಿ ಅಧ್ಯಕ್ಷ ರಾಜೇಶ್ ಬಿ ಸ್ವಾಗತಿಸಿದರು, ಶ್ರೀಧರ ಅಮೀನ್ ಪ್ರಸ್ತಾವನೆ ಮಾಡಿದರು, ಕಾರ್ಯದರ್ಶಿ ಕಿರಣ್ ರಾಜ್ ಪೂಂಜರೆಕೋಡಿ 2018-19 ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು, ಗಣೇಶ್ ಪೂಂಜರೆಕೋಡಿ ಹಾಗೂ ಚೇತನ್ ಮುಂಡಾಜೆ ಸನ್ಮಾನಿತರನ್ನು ಪರಿಚಯಿಸಿದರು. ನೂತನ ಕಾರ್ಯದರ್ಶಿ ಪುರುಷೋತ್ತಮ ಧನ್ಯವಾದ ನೀಡಿದರು, ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!