ಯುವವಾಹಿನಿ(ರಿ) ಕೇಂದ್ರ ಸಮಿತಿ ಮಂಗಳೂರು * ಯುವವಾಹಿನಿ(ರಿ) ಉಡುಪಿ ಘಟಕ

ಯುವವಾಹಿನಿ ಅಕ್ಷರ ಪುರಸ್ಕಾರ ; ಸಾಟಿ ಇಲ್ಲದ ಸಾಧನೆಯ ಕು| ಏಳ್ಮುಡಿ ವರ್ಷಾ ಪಿ.

IAS ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದು, IISC ಬೆಂಗಳೂರಿನಲ್ಲಿ ಕಲಿಯುವುದು ಇದು ಹೆಚ್ಚಿನ ಜನರಿಗೆ ನನಸಾಗದ ಕನಸು. ಯುವ ಜನರಿಗಂತೂ ಇದು ಕನಸಿನ ಲೋಕದ ಸಾಧನೆ. ಸುಲಭದಲ್ಲಿ ನಿಲುಕುವಂಥದಲ್ಲ. ಆದರೆ ಇಂದು ಬಿಲ್ಲವ ಸಮುದಾಯ ಇಡೀ ಅಭಿಮಾನಪಡತಕ್ಕ ಸಾಧನೆಯ ಹಾದಿಯಲ್ಲಿದೆ. ಬಿಲ್ಲವ ಕುವರಿ ಪುತ್ತೂರಿನ ಏಳ್ಮುಡಿ ಮನೆ ಶ್ರೀ ರಮೇಶ್ ಪೂಜಾರಿ ಶ್ರೀಮತಿ ಯಶೋಧ ದಂಪತಿಗಳ ಸುಪುತ್ರಿ ಕು| ವರ್ಷಾ ಪಿ.

ಪಿ.ಯು.ಸಿಯಲ್ಲಿ ಎಲ್ಲ 4 ಐಚ್ಚಿಕ ವಿಷಯಗಳಲ್ಲಿ 100% (ಒಟ್ಟು 600/591) ಅಂಕ ಗಳಿಸಿ ಕರ್ನಾಟಕದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಇಂಜಿನಿಯರಿಂಗ್ ವಿಭಾಗಕ್ಕೆ ರಾಜ್ಯಕ್ಕೆ 244ನೇ ರ್‍ಯಾಂಕ್, ವೈದ್ಯಕೀಯ ವಿಭಾಗದಲ್ಲಿ ರಾಜ್ಯಕ್ಕೆ 202ನೆ ರ್‍ಯಾಂಕ್ ಗಳಿಸಿ, ISMHನಲ್ಲಿ 96ನೇ ರ್‍ಯಾಂಕ್, B.Sc ಕೃಷಿಯಲ್ಲಿ 41ನೇ ರ್‍ಯಾಂಕ್ ಪಡೆದ ಮಹೋನ್ನತ ಸಾಧನೆ ಮೆರೆದ ವರ್ಷ ನಮ್ಮ ಸಮುದಾಯಕ್ಕೆ ಇಡೀ ಅವಿಭಜಿತ ದ.ಕ ಜಿಲ್ಲೆಗೆ ಹರ್ಷಧಾರೆಯ ಸಿಂಚನವನ್ನು, ಸಂತಸದ ಸಂಚಲನವನ್ನುಂಟು ಮಾಡಿದ್ದಾರೆ.

ಒಂದೋ ಐ.ಎ.ಎಸ್ ಅಧಿಕಾರಿಯಾಗಬೇಕು ಇಲ್ಲವೇ Indian Institute of Scienceನಲ್ಲಿ ವಿಜ್ಞಾನಿಯಾಗಬೇಕೆಂಬ ಹಂಬಲದಿಂದ ಇವರು ಸದ್ಯಕ್ಕೆ ಬೆಂಗಳೂರಿನ Indian Institute of Scienceನಲ್ಲಿ ಕಲಿಯುತ್ತಿದ್ದಾರೆ. ಓIಖಿಏ,NITK, BMS(Bangalore)ನಂತಹ ಪ್ರತಿಷ್ಠಿತ ರಾಷ್ಟ್ರಮಟ್ಟದ ವೃತ್ತಿ ಶಿಕ್ಷಣದ ಸಂಸ್ಥೆಗಳಿಗೆ ಅರ್ಹತೆ ಪಡೆದಿದ್ದರೂ IISCಯಲ್ಲಿ ವಿದ್ಯಾಭ್ಯಾಸ ಮಂದುವರಿಸಿ ಅದರೊಂದಿಗೆ ತನ್ನ ಕನಸಿನ IAS ಹುದ್ದೆಗೆ ಬೇಕಾದ ತಯಾರಿಯನ್ನೂ ಮಾಡಿಕೊಂಡಿದ್ದಾರೆ ಕು| ವರ್ಷಾ ಪಿ.

ಅಖಿಲ ಭಾರತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ KVPYಯಲ್ಲಿ ರಾಷ್ಟ್ರಮಟ್ಟದಲ್ಲಿ 577ನೇ ರ್‍ಯಾಂಕ್ ಗಳಿಸಿದ ವರ್ಷಾ ಅವರು ಭಾರತೀಯ ವಿಜ್ಞಾನ ಸಂಸ್ಥೆ- Indian Institute of Science(TATA Institute)ನಲ್ಲಿ ವ್ಯಾಸಂಗಕ್ಕೆ ಅರ್ಹತೆ ಪಡೆದು ಇದೀಗ ಅಲ್ಲೇ ತನ್ನ ಸಾಧನೆಯನ್ನು ಮುಂದುವರೆಸಿದ್ದಾರೆ.

ಕನ್ನಡ ಮಾಧ್ಯಮದ ಬಗ್ಗೆ ಕೀಳರಿಮೆ ಉಳ್ಳವರಿಗೆ ಕು| ವರ್ಷಾ ಅವರು 1 ರಿಂದ 7ನೇ ತರಗತಿಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿನಿ ಎಂಬುದು ಗಮನಿಸತಕ್ಕ ವಿಚಾರ. SSLCಯಲ್ಲಿ 625 ಕ್ಕೆ 614 ಅಂಕ ಗಳಿಸಿ ತಾಲೂಕಿನಲ್ಲಿ 2 ವರ್ಷದ ಹಿಂದೆ ಪ್ರಥಮ ಸ್ಥಾನವನ್ನು ಕು| ವರ್ಷಾರವರು ಗಳಿಸಿರುವುದನ್ನು ಇಲ್ಲಿ ಗಮನಿಸಬಹುದು.

ಮುಂದಿನ ದಿನಗಳಲ್ಲಿ ಕು| ವರ್ಷಾ ಅವರ ಸಾಧನೆ ಇದೇ ರೀತಿ ಮುಂದುವರಿಯಲಿ, ಆಕೆಯ IAS ಅಧಿಕಾರಿಯಾಗುವ ಕನಸು ನನಸಾಗಲಿ, ಆ ಮೂಲಕ ಬಿಲ್ಲವ ಸಮುದಾಯಕ್ಕೆ ಇನ್ನೊರ್ವ IAS ಅಧಿಕಾರಿ ಸಿಗಲಿ ಎಂಬುದು ಯುವವಾಹಿನಿಯ ಎಲ್ಲ ಸದಸ್ಯರ, ಪದಾಧಿಕಾರಿಗಳ ಆಶಯ. ಅದರೊಂದಿಗೆ ವಿಶೇಷ ಅಕ್ಷರ ಪುರಸ್ಕಾರದೊಂದಿಗೆ ಅಭಿನಂದನೆ.

All the best Varsha, we are proud of your achievements.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!