ಮಂಗಳೂರು : ಯುವವಾಹಿನಿಯ ಸಮಾಜಮುಖಿ ಕಾರ್ಯಗಳ ಪ್ರಚಾರದಲ್ಲಿ ಯುವಸಿಂಚನ ಹಾಗೂ ಯುವವಾಹಿನಿಯ ಸಾಮಾಜಿಕ ಜಾಲತಾಣವು ಮಹತ್ತರ ಪಾತ್ರ ವಹಿಸಿದೆ ಎಂದು ಯುವಸಿಂಚನ ಹಾಗೂ ಯುವವಾಹಿನಿ ಸಾಮಾಜಿಕ ಜಾಲತಾಣದ ಗೌರವ ಸಂಪಾದಕರಾದ ಹರೀಶ್ ಕೆ. ಪೂಜಾರಿ ತಿಳಿಸಿದರು
ಅವರು ಮಂಗಳೂರಿನ ಯುವವಾಹಿನಿ ಸಭಾಂಗಣದಲ್ಲಿ ದಿನಾಂಕ 08.01.2024 ರಂದು ಜರುಗಿದ ಯುವಸಿಂಚನ ಹಾಗೂ ಸಾಮಾಜಿಕ ಜಾಲತಾಣ ಸಂಪಾದಕೀಯ ಮಂಡಳಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸಂಪಾದಕೀಯ ಮಂಡಳಿಯ ಪಾತ್ರ ಹಾಗೂ ಜವಾಬ್ದಾರಿ ಬಗ್ಗೆ ಮಾಜಿ ಸಂಪಾದಕರಾದ ರಾಜೇಶ್ ಸುವರ್ಣ ಸಭೆಗೆ ಮಾಹಿತಿ ನೀಡಿದರು.
ಯುವಸಿಂಚನ ಕಾರ್ಯನಿರ್ವಾಹಕ ಸಂಪಾದಕರಾದ ಸತೀಶ್ ಕಿಲ್ಪಾಡಿ, ಸಾಮಾಜಿಕ ಜಾಲತಾಣ ಸಂಪಾದಕರಾದ ನವಾನಂದ ನೂತನ ಸದಸ್ಯರಿಗೆ ಸೂಕ್ತ ಸಲಹೆ ಸೂಚನೆ ನೀಡಿದರು.
ಪತ್ರಿಕಾ ಕಾರ್ಯದರ್ಶಿ ಧನುಷ್, ಪ್ರಚಾರ ನಿರ್ದೇಶಕರಾದ ಪ್ರಥ್ವೀರಾಜ್, ಸಂಪಾದಕೀಯ ಮಂಡಳಿಯ ಸದಸ್ಯರಾದ ಅರ್ಚನಾ ಎಂ.ಬಂಗೇರ, ಆದರ್ಶ್ ಸುವರ್ಣ, ಅಮಿತಾ ಗಣೇಶ್, ಮಯೂರ್ ಉಪಸ್ಥಿತರಿದ್ದರು.
ಸತೀಶ್ ಕಿಲ್ಪಾಡಿ ಸ್ವಾಗತಿಸಿದರು, ನವಾನಂದ ಧನ್ಯವಾದ ನೀಡಿದರು.