ಮಾಣಿ : ದಿನಾಂಕ 10.04.2022 ರಂದು ಯುವವಾಹಿನಿಯ ಚೈತನ್ಯ ತರಬೇತಿ ಕಾರ್ಯಾಗಾರದಲ್ಲಿ ಯುವವಾಹಿನಿಯ ಮುಖವಾಣಿ ಯುವಸಿಂಚನ ಪತ್ರಿಕೆಯ 2021-22 ಸಾಲಿನ ಪ್ರಥಮ ಪ್ರತಿಯನ್ನು ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ಮತ್ತು ಗಣ್ಯ ಅತಿಥಿಗಳು ಸೇರಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಲ್ಪಾಡಿ, ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ರಮೇಶ್ ಮುಜಲ, ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷರಾದ ಜಯಂತ ಬರಿಮಾರು, ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ಸಚಿನ್ ಎಂ, ಪತ್ರಿಕಾ ಕಾರ್ಯದರ್ಶಿ ರಾಜೇಶ್ ಬಲ್ಯ, ಚೈತನ್ಯ ತರಬೇತುದಾರರಾದ ಸದಾನಂದ ನಾವಡ, ಸುಧಾಕರ್ ಕಾರ್ಕಳ ಉಪಸ್ಥಿತರಿದ್ದರು.