ಕೊಲ್ಯ : ಯುವವಾಹಿನಿ (ರಿ) ಕೊಲ್ಯ ಘಟಕ, ರೋಟರಿ ಕ್ಲಬ್ ಮಂಗಳೂರು ಪೂರ್ವ, ರೋಟರಿ ಸಮುದಾಯ ದಳ ಕೊಲ್ಯ,ಸೋಮೇಶ್ವರ,ಬಿಲ್ಲವ ಸೇವಾ ಸಮಾಜ(ರಿ) ಕೊಲ್ಯಇದರ ಸಹಭಾಗಿತ್ವದಲ್ಲಿ “ಯಕ್ಷ ಸಂಭ್ರಮ -2018″ಯಕ್ಷಗಾನ ಪ್ರದರ್ಶನ ಹಾಗೂ ಅಭಿನಂದನಾ ಕಾರ್ಯಕ್ರಮವು ದಿನಾಂಕ 01/09/2018 ನೇ ಶನಿವಾರದಂದು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ , ಕೊಲ್ಯದಲ್ಲಿ ಜರಗಿತು.
ಯಕ್ಷ ಸಂಭ್ರಮ – 2018 ಇದರ ಸಭಾ ಕಾರ್ಯಕ್ರಮವನ್ನು ಬಂಟರ ಸಂಘ ಕಾವೂರು ಇದರ ಅಧ್ಯಕ್ಷರಾದ ರೋ| ಆನಂದಶೆಟ್ಟಿಯವರು ಬೆಳಗಿಸಿ ಉಧ್ಘಾಟಿಸಿ ಶುಭ ಹಾರೖೆಸಿದರು.
ಯಕ್ಷಗುರುಗಳಾದ ಸುಬ್ರಾಯ ಪದಕಣ್ಣಾಯ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ರೋಟರಿ ಕ್ಲಬ್, ಮಂಗಳೂರು ಪೂರ್ವ ಇದರ ಅಧ್ಯಕ್ಷರಾದ ರೋ| ಜೈ ಕುಮಾರ್ ಕೊಲ್ಯ ,ಬಿಲ್ಲವ ಸೇವಾ ಸಮಾಜ (ರಿ) ಕೊಲ್ಯ ಇದರ ಅಧ್ಯಕ್ಷರಾದ ಆನಂದ ಎಸ್ ಕೊಂಡಾಣ,ರೋಟರಿ ಸಮುದಾಯ ದಳ ಕೊಲ್ಯ ಸೋಮೇಶ್ವರ ಇದರ ಅಧ್ಯಕ್ಷೆ ಸುಧಾ ಸುರೇಶ್, ಯುವವಾಹಿನಿ (ರಿ) ಕೊಲ್ಯ ಘಟಕ ಇದರ ಅಧ್ಯಕ್ಷರಾದ ಕುಸುಮಾಕರ್ ಕುಂಪಲ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಯಕ್ಷಗುರು ರಾಕೇಶ್ ರೖೆ ಅಡ್ಕ ಇವರ ನಿರ್ದೇಶನದಲ್ಲಿ ,ಯಕ್ಷ ತೇಜಸ್ವಿ ಬಳಗ, ಅಡ್ಕ ಇದರ ಸದಸ್ಯರಿಂದ ಶಾಂಭವಿ ವಿಜಯ ಎಂಬ ಯಕ್ಷಗಾನ ಪ್ರದರ್ಶನಗೊಂಡಿತು.
ಯುವವಾಹಿನಿ (ರಿ) ಕೊಲ್ಯ ಘಟಕದ ಅಧ್ಯಕ್ಷರಾದ ಕುಸುಮಾಕರ್ ಕುಂಪಲರವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು,ಯುವವಾಹಿನಿ (ರಿ) ಕೊಲ್ಯ ಘಟಕದ ನಿಕಟಪೂರ್ವ ಅಧ್ಯಕ್ಷರಾದ ಸುರೇಶ್.ಬಿ ರವರು ಪ್ರಾರ್ಥನಗೈದರು,ರೋಟರಿ ಸಮುದಾಯ ದಳ ಕೊಲ್ಯ ಇದರ ಅಧ್ಯಕ್ಷೆ ಸುಧಾ ಸುರೇಶ್ ವಂದಿಸಿದರು, ತುಳುನಾಡ ಸ್ವರ ಮಾಣಿಕ್ಯ ಶ್ರೀ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.