ಯುವವಾಹಿನಿ(ರಿ) ಕೇಂದ್ರ ಸಮಿತಿ, ಮಂಗಳೂರು

ಮೂಲ್ಕಿ ಚಂದ್ರಶೇಖರ್ ಸುವರ್ಣ – ಅಧ್ಯಕ್ಷರು -2008-09

ಯುವವಾಹಿನಿ ಕೇಂದ್ರ ಸಮಿತಿಯ 2008-09 ನೇ ಸಾಲಿನ ಅಧ್ಯಕ್ಷರಾಗಿರುವ ಇವರು ಪ್ರಸಕ್ತ ಮೂಲ್ಕಿ ಬಿಲ್ಲವ ಸಂಘದ ಜೊತೆ ಕಾರ್ಯದರ್ಶಿಯಾಗಿ, ಬಪ್ಪನಾಡು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿದ್ದು ಮೂಲ್ಕಿ ದಿ ಯೂನಿಯನ್ ಕ್ಲಬ್‌ನ ಖಜಾಂಚಿಯಾಗಿ, ಮೂಲ್ಕಿ ಮೂರ್ತೆದಾರರ ಸೇವಾ ಸೊಸೈಟಿಯ ನಿರ್ದೇಶಕರಾಗಿರುತ್ತಾರೆ. ಹಾಗೂ ಮೂಲ್ಕಿ ಯುವವಾಹಿನಿ(ರಿ) ಘಟಕದ ಮಾಜಿ ಅಧ್ಯಕ್ಷರಾಗಿರುತ್ತಾರೆ.

ಮೂಲ್ಕಿ ಚೆನ್ನಪ್ಪ ಸುವರ್ಣ ಮತ್ತು ಲಲಿತ ಸಿ. ಸುವರ್ಣರ ಸುಪುತ್ರನಾಗಿ 2-8-1960 ರಂದು ಜನಿಸಿದರು. ಪತ್ನಿ- ಚಿತ್ರಾ ಸಿ. ಸುವರ್ಣ, ಮಕ್ಕಳು – ಗಗನ್ ಸುವರ್ಣ, ದೀಕ್ಷಾ ಸುವರ್ಣ

ಕಲಾ ಪ್ರದರ್ಶನ:
ಮಂಗಳೂರು ದಸರಕ್ಕೆ 30 ವರುಷಗಳಿಂದ ಶೃಂಗಾರಕರಾಗಿರುತ್ತಾರೆ.

ಕರ್ನಾಟಕ, ಮುಂಬಯಿ, ಅಹಮದಾಬಾದ್, ಕೇರಳ ರಾಜ್ಯಗಳಲ್ಲಿ ನಡೆಯುವ ಮದುವೆ ಸಮಾರಂಭಗಳಿಗೆ ರಂಗ ವಿನ್ಯಾಸ ಮಾಡಿ ಮೆರುಗು ನೀಡಿರುತ್ತಾರೆ. ಯಕ್ಷಗಾನ ಮತ್ತು ನಾಟಕಗಳಿಗೆ ರಂಗ ವ್ಯವಸ್ಥೆ, ವರ್ಣ ಅಲಂಕಾರ, ವಸ್ತ್ರ ಅಲಂಕಾರ, ಕೇಶ ಅಲಂಕಾರಗಳನ್ನು ನೀಡಿರುತ್ತಾರೆ.

ಸಿನಿಮಾ ರಂಗದಲ್ಲಿ ಕಲಾ ನಿರ್ದೇಶಕನಾಗಿದ್ದು ಇವರ ಕಲಾ ನಿರ್ದೇಶನ ಮತ್ತು ವಸ್ತ್ರ ವಿನ್ಯಾಸ ನೀಡಿರುವ ’ಕೋಟಿ ಚೆನ್ನಯ’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿರುತ್ತದೆ. ಹಾಗೂ ’ದೇವು ಪೂಂಜಾ’ ಚಿತ್ರದ ಕಲಾ ನಿರ್ದೇಶಕರಾಗಿರುತ್ತಾರೆ.

ಮೂಲ್ಕಿ ಯುವವಾಹಿನಿಯ ಮೂಲಕ ’ತುಳುನಾಡ ವೈಭವ’ ಎಂಬ ನೃತ್ಯ ರೂಪಕವನ್ನು ರಚಿಸಿ ನಿರ್ದೇಶಿಸಿ ಸುಮಾರು 70 ಜನರ ತಂಡದೊಂದಿಗೆ ಹಲವಾರು ಪ್ರದರ್ಶನಗಳನ್ನು ನೀಡಿರುತ್ತಾರೆ.

2008 ರಲ್ಲಿ ಮುಂಬೈಯಲ್ಲಿ ನಡೆದಿರುವ ’ಬೊಂಬಾಯಿಡ್ ತುಳುನಾಡ್’ ಕಾರ್ಯಕ್ರಮದಲ್ಲಿ ತುಳುನಾಡನ್ನು ನಿರ್ಮಿಸಿ, ತುಳುನಾಡ ವೈಭವ ಕಾರ್ಯಕ್ರಮವನ್ನು ನೀಡಿ ಮುಂಬೈಯಲ್ಲಿಯೂ ಯುವವಾಹಿನಿಯ ಹೆಸರನ್ನು ಮೆರೆಸಿರುತ್ತಾರೆ. ಕರ್ನಾಟಕದಾದ್ಯಂತ ಮತ್ತು ಹೊರ ರಾಜ್ಯ ಹೊರ ದೇಶದಲ್ಲಿ ತುಳನಾಡ ವೈಭವ ಕಾರ್ಯಕ್ರಮವನ್ನು ನೀಡಿ ಜನಮೆಚ್ಚುಗೆ ಪಡೆದಿರುತ್ತಾರೆ.

ಕಾಡ ಗಿಳಿ, ಸಂಶಯದ ಸುಳಿ, ನಾಡ್‌ರ್ದ್ ಕಾಡುಗ್ ಎಂಬ ನಾಟಕಗಳ ರಚನೆ ಮಾಡಿರುತ್ತಾರೆ. ರಂಗ ಕಲಾವಿದನಾಗಿ ಹಾಗೂ ನಾಟಕದ ನಿರ್ದೇಶಕನೂ ಆಗಿರುತ್ತಾರೆ.

ಈಗ ಎಲ್ಲಾ ಸಂಘ ಸಂಸ್ಥೆಗಳಿಂದ ಆಚರಿಸಲ್ಪಡುವ ’ಆಟಿದ ಒಂಜಿ ದಿನ’ ಮತ್ತು ’ತುಳುವೆರೆ ತುಡರ್ ಪರ್ಬ’ವನ್ನು ಪ್ರಪ್ರಥಮವಾಗಿ ಆಚರಣೆಗೆ ತಂದ ಕೀರ್ತಿ ಸುವರ್ಣರದ್ದು.

ಪ್ರಮುಖ ಪ್ರಶಸ್ತಿ ಹಾಗೂ ಸನ್ಮಾನಗಳು:
1998  ರಂದು ಯಕ್ಷ ಕೌಮುದಿ, ಉಡುಪಿ ಮತ್ತು ಅಭಿನಯ ಸಾಂಸ್ಕೃತಿಕ ಕೇಂದ್ರ, ಮೂಲ್ಕಿ
2000 ಲ್ಲಿ ಯಕ್ಷ ಕಲಾ ಪ್ರೇಮಿಲು, ಮೂಲ್ಕಿ
2001 ರಲ್ಲಿ ರಂಗ ಸುದರ್ಶನ, ಸಾಹಿತ್ಯಿಕ, ಸಾಂಸ್ಕೃತಿಕ ಕಲಾ ವೇದಿಕೆ, ಸಸಿಹಿತ್ಲು- ಇವರಿಂದ
2002 ರಲ್ಲಿ ಕನ್ನಡ ಸಾಹಿತ್ಯ ಪರಿಷತ್, ದ.ಕ.ಜಿಲ್ಲೆ, ಮಂಗಳೂರು ಇವರಿಂದ,
9 ನೇ ಸಾಹಿತ್ಯ ಸಮ್ಮೇಳನದಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಇವರಿಂದ
2003 ರಲ್ಲಿ ರಾಜ್ಯದ ಪ್ರಪ್ರಥಮ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನದಂದು ಶ್ರೀ ಪಾಟೀಲ್ ಪುಟ್ಟಪ್ಪನವರಿಂದ
2004 ರಲ್ಲಿ ಗಣೇಶೋತ್ಸವ ಸಂದರ್ಭ ಉಡುಪಿಯಲ್ಲಿ, ಉಡುಪಿ ಮಠಾಧೀಶರಿಂದ.
ದಿ. ತಾಳಿಪಾಡಿ ದಾಮೋದರ ಶೆಟ್ಟಿಗಾರ್ ಇವರ ಐದನೇ ವರುಷದ ಸಂಸ್ಮರನ ಕಾರ್ಯಕ್ರಮದಂದು,
ಮಾನ್ಯ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ಅವರಿಂದ ಕುದ್ರೋಳಿ ದಸರಾ ಸಂದರ್ಭದಲ್ಲಿ ಚಿನ್ನದ ಪದಕ,
ಭಾರತೀಯ ಜೇಸೀ ಸಪ್ತಾಹದ ಸಂದರ್ಭ,
ಕರ್ನಾಟಕ ರಾಜ್ಯೋತ್ಸವದಂದು ’ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’,
ವಿಜಯ ಕಲಾವಿದರು ಕಿನ್ನಿಗೋಳಿ ಇವರಿಂದ,
ಯುವವಾಹಿನಿ(ರಿ) ಸುರತ್ಕಲ್ ಘಟಕದವರಿಂದ
2005ರಲ್ಲಿ ’ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’,
ಪಾವಂಜೆ ಅಗೋಲಿ ಮಂಜಣ್ಣ ಜಾನಪದ ಕೇಂದ್ರದವರಿಂದ
2006ರಲ್ಲಿ ಬೆಂಗಳೂರು ಬಿಲ್ಲವರ ಅಸೋಸಿಯೇಶನ್ ಅವರಿಂದ ಬೆಂಗಳೂರಿನಲ್ಲಿ ಸನ್ಮಾನ
2007ರಲ್ಲಿ ಮಂಗಳೂರಿನಲ್ಲಿ ಕರ್ನಾಟಕದ ರಾಜ್ಯಪಾಲ ರಾಮೇಶ್ವರ ಠಾಕೂರು ಅವರಿಂದ
2008ರಲ್ಲಿ ಕಲಾ ಜಗತ್ತು ಬೊಂಬಾಯಿ ಅವರಿಂದ ’ತುಳುನಾಡು ಪ್ರಶಸ್ತಿ’,
ಬಹೆರಿನ್ ಬಿಲ್ಲವಾಸ್ ಇವರಿಂದ ಬಹೆರಿನ್‌ನಲ್ಲಿ ಸನ್ಮಾನ
ಬಹೆರಿನ್ ಕನ್ನಡ ಸಂಘದಿಂದ ಬಹೆರಿನ್‌ನಲ್ಲಿ ಸನ್ಮಾನ

ವಿಳಾಸ: ಸುವರ್ಣ ಆರ್ಟ್ಸ್
ವಿಜಯ ಕಾಲೇಜು ರಸ್ತೆ, ಮುಲ್ಕಿ
ಮೊಬೈಲ್: 9845083479

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!