ಯುವವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ, ಮಹಿಳಾ ಸಂಚಾಲನ ಸಮಿತಿ ನೇತೃತ್ವದಲ್ಲಿ ಸ್ತ್ರೀ ಶಕ್ತಿಯನ್ನು ಪ್ರಬಲಪಡಿಸುವ ನಿಟ್ಟಿನಲ್ಲಿ ವಿಶೇಷವಾಗಿ ಮಹಿಳೆಯರಿಗಾಗಿ ಮುನ್ನೋಟ – ಮುಂದಿನ ಹೆಜ್ಜೆಯತ್ತ ಕಾರ್ಯಕ್ರಮವನ್ನು ನವೆಂಬರ್17 ರಂದು ಗುರುವಾಯನಕೆರೆ ಶಾರದಾ ಮಂಟಪದಲ್ಲಿ ನಡೆಸಲಾಯಿತು.
ಶಿಶು ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕುರಿತ ಸವಿವರ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಅಂಗನವಾಡಿ ಮೇಲ್ವಿಚಾರಕರಾದ ಶ್ರೀಮತಿ ನಾಗವೇಣಿ ನೀಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ನಾರಾವಿಯ ವೈದ್ಯಾಧಿಕಾರಿಗಳಾದ ಡಾ ದೀಕ್ಷಿತಾ ಕಾರ್ಯಕ್ರಮ ಉದ್ಘಾಟಿಸಿದರು. ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಶ್ರೀ ಹರೀಶ್ ಸುವರ್ಣ, ಮಹಿಳಾ ಸಂಚಾಲನ ಸಮಿತಿ ಅಧ್ಯಕ್ಷರಾದ ಶ್ರೀಮತಿ ಸುಜಾತಾ ಅಣ್ಣಿ ಪೂಜಾರಿ ಉಪಸ್ಥಿತರಿದ್ದರು.
ಮುನ್ನೋಟ ಸಂಚಾಲಕಿ ಶರ್ಮಿಳಾ ಅಶ್ವಥ್ ಕುಮಾರ್ ಸ್ವಾಗತಿಸಿ, ಸುಧಾಮಣಿ ವಂದಿಸಿ, ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು.