ಮೂಲ್ಕಿ:- ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ “ಮಹಿಳಾ ಸಂಭ್ರಮ – 2022″ ಕಾರ್ಯಕ್ರಮವು ದಿನಾಂಕ 19.3.2022ರ ಶನಿವಾರ ಮುಲ್ಕಿ ಬಿಲ್ಲವ ಸಂಘದ ಸಭಾಗೃಹದಲ್ಲಿ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭರತೇಶ್ ಅಮೀನ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸರಕಾರಿ ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರ, ಕೊಲ್ಲೂರು ಇದರ ಆಸ್ಪತ್ರೆಯ ವೈದ್ಯಾಧಿಕಾರಿ ಡಾ|| ಶೋಭಾರಾಣಿ ಎನ್.ಎಸ್.ನಮ್ಮ ಆರೋಗ್ಯ ರಕ್ಷಣೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಾ ನಾವು ದೈಹಿಕ ,ಮಾನಸಿಕ ಆರೋಗ್ಯವನ್ನು ಕಾಯ್ದು ಕೊಳ್ಳುವುದರ ಜೊತೆಗೆ ಸಾಮಾಜಿಕ ಆರೋಗ್ಯ ವನ್ನು ಕಾಯ್ದು ಕೊಳ್ಳುವ ಅಗತ್ಯತೆಯನ್ನು ಒತ್ತಿ ಹೇಳಿದರು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ರಾದ ಉದಯ ಅಮೀನ್ ಮಟ್ಟು ಮಹಿಳಾ ಸಂಭ್ರಮದಲ್ಲಿ ಮೇಳೈಸಿದ ಮಹಿಳಾ ಮೇಲ್ಮೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಮಹಿಳಾ ಸಂಘಟನಾ ನಿರ್ದೇಶಕಿ ಸುಮಾ ವಸಂತ್ ರವರು ಮಾತಾನಾಡಿ ಯುವವಾಹಿನಿ ಕೇಂದ್ರ ಸಮಿತಿಯ ಸಾರಥ್ಯದಲ್ಲಿ ಜರಗಲಿರುವ ಮಹಿಳಾ ಆರ್ಥಿಕ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ ಬೃಹತ್ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ” ಹೊಂಬೆಳಕು – 2022″ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ರಮೇಶ್ ಅಮೀನ್ ಮಹಿಳಾ ಸಂಭ್ರಮ 2022ರ ಬಗ್ಗೆ ಪ್ರಸ್ತಾಪಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಪಾರ್ದನ ಕಲಾವಿದೆ ಚಂದು ಪೂಜಾರ್ತಿ ಕುಬೆವೂರು ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಭಾರತಿ ಭಾಸ್ಕರ್ ಕೋಟ್ಯಾನ್ ಸನ್ಮಾನ ಪತ್ರ ವಾಚಿಸಿದರು. ಘಟಕದ ಮಹಿಳಾ ಸಂಘಟನಾ ನಿರ್ದೇಶಕಿ ಸವಿತಾ ಪ್ರಭಾಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಜೇಶ್ವರಿ ನಿತ್ಯಾನಂದ ಪ್ರಾರ್ಥಿಸಿದರು. ಭರತೇಶ್ ಅಮೀನ್ ಸ್ವಾಗತಿಸಿದರು. ಕಾರ್ಯದರ್ಶಿ ಚರಿಷ್ಮಾ ಶ್ರೀನಿವಾಸ್ ಧನ್ಯವಾದ ನೀಡಿ, ರಾಜೇಶ್ವರಿ ನಿತ್ಯಾನಂದ ಹಾಗೂ ಜಾಹ್ನವಿ ಮೋಹನ್ ಕಾರ್ಯಕ್ರಮ ನಿರೂಪಿಸಿದರು. ಮುಲ್ಕಿ ಯುವವಾಹಿನಿ ಘಟಕದ ಮಹಿಳಾ ಸದಸ್ಯರು ಹಾಗೂ ವಿವಿಧ ಮಹಿಳಾ ಮಂಡಳಿಗಳ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಉತ್ತಮ ಕಾರ್ಯಕ್ರಮ. ಅಭಿನಂದನೆಗಳು