ಯುವವಾಹಿನಿ ಸದಸ್ಯರೊಳಗೆ ಬಾಂಧವ್ಯ ವೃದ್ಧಿಸಲು ಹಾಗೂ ಘಟಕದ ಸದಸ್ಯರ ಕುಟುಂಬದೊಂದಿಗೆ ಬೆರೆಯಲು ನಾವು ಹಮ್ಮಿಕೊಂಡ ಮನೆ ಮನೆ ಭಜನೆ ಕಾರ್ಯಕ್ರಮ ದಿನಾಂಕ 02-03-2024 ಶನಿವಾರ ಘಟಕದ ಮಾಜಿ ಅಧ್ಯಕ್ಷರು ಯೋಗೀಶ್ ರಕ್ಷಿತಾ ಕೋಟ್ಯಾನ್ ರವರ ಮನೆಯಲ್ಲಿ ಭಜನಾ ಸಂಕೀರ್ತನೆ ನೆರವೇರಿತು.
ಈ ಕಾರ್ಯಕ್ರಮದ ನೆನಪಿಗಾಗಿ ಘಟಕದ ವತಿಯಿಂದ ಶ್ರೀ ನಾರಾಯಣ ಗುರು ಚರಿತ್ರೆ ಪುಸ್ತಕವನ್ನು ನೀಡಲಾಯಿತು. ಭಜನಾ ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರು ,ಮಾಜಿ ಅಧ್ಯಕ್ಷರು ಗಳು, ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.