ಕೂಳೂರು: ದೇವರಿಗೆ ಮತ್ತು ಮನುಷ್ಯರಿಗೆ ಅತೀ ಹತ್ತಿರದ ಸಂಬಂಧ ಅಂದರೆ ಭಜನೆಯೇ ಹೊರತು ಬೇರೇನೂ ಅಲ್ಲ. ಭಜನೆಯಿಂದ ಅದೆಷ್ಟೋ ಜನರ ಆರೋಗ್ಯ ಸುಧಾರಿಸುತ್ತದೆ. ಭಜನೆ ಎನ್ನುವುದು ಮನುಷ್ಯನಿಗೆ ಆನಂದ, ನೆಮ್ಮದಿ, ಶಾಂತಿ ಕೊಡುವ ಸಂಜೀವಿನಿ ಇದ್ದಂತೆ.
ಯುವವಾಹಿನಿ (ರಿ) ಕೂಳೂರು ಘಟಕದಿಂದ ಪ್ರತಿ ತಿಂಗಳ ಒಂದು ದಿನ ಸಂಪರ್ಕದ ನೆಲೆಯಲ್ಲಿ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಶ್ರೀಮತಿ ವಿಮಲಾರವರ ಸಂಚಾಲಕತ್ವದಲ್ಲಿ ನಡೆಸಿಕೊಂಡು ಬರುವ ಮನೆ ಮನೆ ಭಜನಾ ಕಾರ್ಯಕ್ರಮದ 54ನೇ ಭಜನಾ ಕಾರ್ಯಕ್ರಮವು ಘಟಕದ ಮಾತೃ ಸ್ಪರ್ಶ ನಿರ್ದೇಶಕರಾದ ಸ್ವಾತಿ ಇವರ ಮನೆಯಲ್ಲಿ ದಿನಾಂಕ 15-11-2024 ಶುಕ್ರವಾರದಂದು ಸಂಜೆ 7.00 ಗಂಟೆಗೆ ಸರಿಯಾಗಿ ಗುರುಗಳ ಭಾವ ಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಪ್ರಾರಂಭಿಸಲಾಯಿತು.
7.00 ಗಂಟೆಯಿಂದ ಸರಿ ಸುಮಾರು ಒಂದು ಗಂಟೆಗಳ ಕಾಲ ಮನೆಯವರು, ಸಂಬಂಧಿಕರು, ಹಾಗೂ ಸದಸ್ಯರು ಭಜನಾ ಸಂಕೀರ್ತನೆಯಲ್ಲಿ ಪಾಲ್ಗೊಂಡರು. ರಾತ್ರಿ 8.30 ಕ್ಕೆ ಆರತಿಯೊಂದಿಗೆ ಭಜನೆಗೆ ಮಂಗಳ ಹಾಡಲಾಯಿತು.
ಈ ಸಂದರ್ಭ ಘಟಕದ ಅಧ್ಯಕ್ಷರಾದ ಶ್ರೀಮತಿ ಇಂದಿರಾ ಸುರೇಶ್, ಒಂದನೇ ಉಪಾಧ್ಯಕ್ಷರಾದ ಲತಿಷ್ ಪೂಜಾರಿ, ಎರಡನೇ ಉಪಾಧ್ಯಕ್ಷರಾದ ಗೀತಾ, ಮಾಜಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಶ್ರೀಮತಿ ನಯನ ರಮೇಶ್, ದೀಕ್ಷಿತ್ ಸಿ ಎಸ್, ಮಾರ್ಗದರ್ಶಕರಾದ ಚಂದಪ್ಪ ಸನಿಲ್, ಕಾರ್ಯದರ್ಶಿ ಶ್ರೀಮತಿ ನಯನ ಕೋಟ್ಯಾನ್, ಕೋಶಾಧಿಕಾರಿ ವಿಘ್ನೇಶ್ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಭಜನೆಯ ನಂತರ ಭೋಜನದ ವ್ಯವಸ್ಥೆ ಮಾಡಲಾಗಿತ್ತು.