ಮದ್ಯ ಮುಕ್ತ ಮದರಂಗಿಗೆ ಸಾಕ್ಷಿಯಾಯಿತು ಯುವವಾಹಿನಿ (ರಿ) ವೇಣೂರು ಘಟಕ
ವೇಣೂರು ನ. 8 : ಮದ್ಯಪಾನವು ಸಾಮಾಜದ ಸ್ವಾಸ್ಥ್ಯ ದ ವಿನಾಶಕ್ಕೆ ಕಾರಣವಾಗುತ್ತಿದ್ದು,ಇತ್ತೀಜೆಗೆ ಮದುವೆಯ ಮದರಂಗಿಯು ನವಕುಡುಕರನ್ನು ಸೃಷ್ಟಿಸುವ ಸಮಾರಂಭವಾಗಿ ಪರಿವರ್ತನೆಗೊಂಡಿದೆ. ಇದು ಬದಲಾಗಿ ಎಲ್ಲಾ ಕಡೆ ಮದ್ಯಮುಕ್ತ ಮದರಂಗಿ ಕಾರ್ಯಕ್ರಮ ನಡೆಯುವಂತಾಗಲಿ ಎಂದು ಆಳ್ವಾಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗದ ಡಾ। ಯೋಗೀಶ್ ಕೈರೋಡಿ ಹೇಳಿದರು.
ಯುವವಾಹಿನಿ (ರಿ) ವೇಣೂರು ಘಟಕದ ಆಶ್ರಯದಲ್ಲಿ ಬಜಿರೆಗ್ರಾಮದ ಹೊಸಮನೆ ಮನೋಜ್ ಪೂಜಾರಿಯವರ ಮನೆಯಲ್ಲಿ ನಡೆದ ಮದ್ಯ ಮುಕ್ತ ಮದರಂಗಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮದರಂಗಿಯಲ್ಲಿ ಮದ್ಯಪಾನಕ್ಕೆ ಮಾಡುವ ಖರ್ಚುಮಾಡುವ ಹಣ ಒಳ್ಳೆಯ ಉದ್ದೇಶಕ್ಕಾಗಿ ಸದ್ಬಳಕೆಯಾಗಲಿ , ಆಗ ವ್ಯಕ್ತಿ ಹಾಗೂ ಸಮಾಜ ತನ್ನಿಂದತಾನೆ ಬೆಳೆಯುತ್ತದೆ ಎಂದು ಡಾ| ಯೋಗೀಶ್ ಕೈರೋಡಿ ತಮ್ಮ ಹಿತನುಡಿಗಳನ್ನು ಹೇಳಿದರು.
ಈ ಕಾರ್ಯಕ್ರಮದಲ್ಲಿ ಘಟಕದ ಸಲಹೆಗಾರರಾದ ಹರೀಶ್ ಪೂಜಾರಿ ಪೊಕ್ಕಿ ಪ್ರಸ್ತಾವನೆಯನ್ನು ಮಾಡಿದರು. ಕಾರ್ಯಕ್ರಮ ಆಯೋಜಿಸಲು ಅವಕಾಶ ಮಾಡಿದ ಮನೋಜ್ ಪೂಜಾರಿಯವರಿಗೆ ಘಟಕದ ಅಧ್ಯಕ್ಷ ನವೀನ್ ಪೂಜಾರಿ ಪಚ್ಚೇರಿ ನಾರಾಯಣ ಗುರುಗಳ ಭಾವಚಿತ್ರವನ್ನು ನೆನಪಿನ ಕಾಣಿಕೆಯಾಗಿ ನೀಡಿದರು. ಯುವವಾಹಿನಿ (ರಿ) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ನಿತೀಶ್ ಎಚ್ ವಂದಿಸಿದರು. ಘಟಕದ ಪದಾಧಿಕಾರಿ, ಸದಸ್ಯರು ಉಪಸ್ಥಿತರಿದ್ದರು.
Very Good