ಮಂಗಳೂರು:- ದಿನಾಂಕ 25 ಜುಲೈ 2022ರಂದು ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರ, ಕುದ್ರೋಳಿಯಲ್ಲಿ ಸಂಜೆ 5.30 ರಿಂದ 7 ಗಂಟೆ ತನಕ ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ನಡೆಯುತ್ತಿರುವ ಸಾಪ್ತಾಹಿಕ ಭಜನಾ ಸರಣಿ ಸಂಕೀರ್ತನೆಯಲ್ಲಿ ಕಂಕನಾಡಿ ಘಟಕದ ಅಧ್ಯಕ್ಷರು, ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಹೀಗೆ ಸುಮಾರು 15ಜನ ಸದಸ್ಯರು ಪಾಲ್ಗೊಂಡು ಭಜನಾ ಸಂಕೀರ್ತನೆ ನಡೆಸಿದರು. ಈ ಸಂದರ್ಭದಲ್ಲಿ ಮಂಗಳೂರು ಘಟಕದ ಅಧ್ಯಕ್ಷರಾದ ಗಣೇಶ್ ವಿ. ಕೋಡಿಕಲ್, ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಭಜನಾ ಸಂಕೀರ್ತನೆಯ ಬಳಿಕ ಗುರು ಪೂಜೆ ನಡೆಯಿತು. ನಂತರ ಮಂಗಳೂರು ಘಟಕದ ಹಿರಿಯರಾದ ಪರಮೇಶ್ವರ ಪೂಜಾರಿಯವರು ನಮ್ಮ ಅಧ್ಯಕ್ಷರನ್ನು ಶಾಲು ಹೊದಿಸಿ ಗೌರವಿಸಿ, ಪ್ರಸಾದ ನೀಡಿ, ಮಂಗಳೂರು ಘಟಕದ ಪರವಾಗಿ ಧನ್ಯವಾದ ಸಲ್ಲಿಸಿದರು. ನಂತರ ಎಲ್ಲರಿಗೂ ಫಲಹಾರ ನೀಡಿ ಸತ್ಕರಿಸಲಾಯಿತು.