ಕೂಳೂರು :- ಬ್ರಹ್ಮ ಶ್ರೀ ನಾರಾಯಣ ಗುರು ವರ್ಯರ 168 ನೇ ಜನುಮ ದಿನದ ಪ್ರಯುಕ್ತ ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ ಸ್ನೇಹ ಭಾರತಿ ವಿದ್ಯಾ ಸಂಸ್ಥೆ ನಮ್ಮ ಹಿರಿಯರ ಮನೆ ಜೋಕಟ್ಟೆ ಪೊರ್ಕೋಡಿಯಲ್ಲಿ ಸೇವಾ ಕಾರ್ಯಕ್ರಮವು ದಿನಾಂಕ 10 ಸೆಪ್ಟೆಂಬರ್ 2022 ರಂದು ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ದೀಕ್ಷಿತ್ ಸಿ ಎಸ್ ವಹಿಸಿದ್ದರು. ಗುರುಗಳ ಭಾವಚಿತ್ರಕ್ಕೆ ಹಿರಿಯರಾದ ಸುನಂದರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಘಟಕದ ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್ ರವರು ಬ್ರಹ್ಮ ಶ್ರೀ ನಾರಾಯಣ ಗುರುಗಳ ಸಂದೇಶ ಹಾಗೂ ತತ್ವಗಳ ಬಗ್ಗೆ ಮಾಹಿತಿ ನೀಡಿದರು. ಸ್ನೇಹ ಭಾರತಿ ವಿದ್ಯಾ ಸಂಸ್ಥೆಯ ಸಮಾಜ ಸೇವಕರಾದ ಸುನಿಲ್ ಕುಮಾರ್ ಮಾತನಾಡಿ ಗುರುಗಳ ಜನುಮ ದಿನವನ್ನು ತಮ್ಮ ಸಂಸ್ಥೆಯಲ್ಲಿ ಆಚರಿಸಿದಕ್ಕಾಗಿ ಸಂತಸ ವ್ಯಕ್ತಪಡಿಸಿದರು. ಯುವವಾಹಿನಿ ಕೂಳೂರು ಘಟಕದ ನಿಸ್ವಾರ್ಥ ಸೇವಾ ಮನೋಭಾವವನ್ನು ಶ್ಲಾಘಿಸಿದರು. ನಮ್ಮ ಘಟಕದ ಮಾಜಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಮಾತನಾಡಿ ಗುರುಗಳ ಜನುಮ ದಿನವನ್ನು ಪ್ರತೀ ವರ್ಷ ಇದೇ ರೀತಿ ಬೇರೆ ಬೇರೆ ಆಶ್ರಮದಲ್ಲಿ ಆಚರಿಸಿಕೊಂಡು ಬಂದಿರುತ್ತೇವೆ ಎಂದರು. ಘಟಕದ ಇನ್ನೋರ್ವ ಮಾಜಿ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್ ಮಾತನಾಡಿ ಗುರುಗಳು ಮಹಾನ್ ಜ್ಞಾನಿ, ಇಂದು ನಾವು ಇಲ್ಲಿನ ಹಿರಿಯ ಜ್ಞಾನಿಗಳೊಂದಿಗಿದ್ದೇವೆ ಎಂದರು. ಗುರುಗಳ ತತ್ವ ಆದರ್ಶಗಳನ್ನು ವಿವರಿಸುತ್ತಾ, ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಘಟಕದ ಅಧ್ಯಕ್ಷರಾದ ದೀಕ್ಷಿತ್ ಸಿ ಎಸ್ ಮಾತನಾಡಿ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಪ್ರತಿ ವರ್ಷ ಇದೇ ರೀತಿ ಆಚರಿಸಿಕೊಂಡು ಬರಲಾಗುತ್ತಿದೆ. ತನ್ನ ಮಾಜಿ ಅಧ್ಯಕ್ಷರುಗಳ ದಾರಿಯಲ್ಲಿ ತಾನು ಸಾಗುತ್ತಿರುವೆ ಎಂದರು.
ವೇದಿಕೆಯಲ್ಲಿ ಸ್ನೇಹ ಭಾರತಿ ವಿದ್ಯಾ ಸಂಸ್ಥೆ, ನಮ್ಮ ಸಹಿರಿಯರ ಮನೆಯ ಅಧೀಕ್ಷಕರಾದ ರೇಖಾ, ಯುವವಾಹಿನಿ ಕೂಳೂರು ಘಟಕದ ಜೊತೆ ಕಾರ್ಯದರ್ಶಿ ತುಳಸೀ ಸುಜೀರ್, ಕಾರ್ಯಕ್ರಮದ ಸಂಚಾಲಕರಾದ ಅಕ್ಷಿತ್ ಸಿ ಎಸ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ನಯನ ರಮೇಶ್, ಪ್ರಥಮ ಉಪಾಧ್ಯಕ್ಷರಾದ ನಿಶಿತ್ ಪೂಜಾರಿ, ದ್ವಿತೀಯ ಉಪಾಧ್ಯಕ್ಷರಾದ ಯಶವಂತ್ ಪೂಜಾರಿ, ಘಟಕದ ಮಾರ್ಗದರ್ಶಕರಾದ ಚಂದಪ್ಪ ಸನಿಲ್, ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷರಾದ ನಯನ ರಮೇಶ್ ಪ್ರಾರ್ಥಿಸಿ, ಅಧ್ಯಕ್ಷರಾದ ದೀಕ್ಷೀತ್ ಸ್ವಾಗತಿಸಿ, ಮಧುಶ್ರೀ ಪ್ರಶಾಂತ್ ನಿರೂಪಿಸಿ, ಅಕ್ಷಿತ್ ಸಿ ಎಸ್ ವಂದಿಸಿದರು. ನಂತರ ನಮ್ಮ ಹಿರಿಯರ ಮನೆಯ ಎಲ್ಲಾ ಹಿರಿಯರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಸದಸ್ಯರು ಎಲ್ಲರೂ ಸೇರಿ ಊಟ ಬಡಿಸಿದರು
ಇದೊಂದು ವಿನೂತನ ಉಪಕ್ರಮ. ಆಶಕ್ತರಿಗೆ ಆಸರೆಯಾಗುವುದು, ಅವರ ನೋವಿಗೆ ಸ್ಪಂಧಿಸುವುದು, ಅವರ ಬದುಕಿಗೆ ಆಶಾ ಕಿರಣವಾಗುವುದು ಗುರುಗಳಿಗೆ ಪ್ರಿಯವಾದ ಕಾರ್ಯ. ಅಭಿನಂದನೆಗಳು.