ಯುವವಾಹಿನಿ (ರಿ) ಕುಪ್ಪೆಪದವು ಘಟಕದಿಂದ

ಬೆಳಕಿನ ಹಬ್ಬದಲ್ಲಿ ನಮ್ಮ ನಡೆ ಬೇಸಾಯದ ಕಡೆ

ಕುಪ್ಪೆಪದವು : ಯುವವಾಹಿನಿ (ರಿ) ಕುಪ್ಪೆಪದವು ಘಟಕದಿಂದ ದಿನಾಂಕ 08-11-2018 ರಂದು ಬೆಳಿಗ್ಗೆ 9.00 ಗಂಟೆಗೆ ದೀಪಾವಳಿ ಹಬ್ಬದ ಪ್ರಯುಕ್ತ, ನಮ್ಮ ನಡೆ ಬೇಸಾಯದ ಕಡೆ ಎಂಬ ಚಿಂತನೆಯಲ್ಲಿ ಪ್ರಾರಂಭವಾಗಿ ನಾಗಂಡದಿಯ ಗದ್ದೆಯಲ್ಲಿ ನಿರೀಕ್ಷಿತ ಸಮೃದ್ಧ ಬತ್ತದ ಫಸಲನ್ನು ಪಡೆದು, ದಾನ್ಯಲಕ್ಮಿ ಮತ್ತು ಗೋ ಮಾತೆಯ ಪೂಜೆಯನ್ನು ಷೋಡೋಪಚಾರಿ ವಿದಿ ವಿಧಾನಗಳಿಂದ ಮಹಿಳೆಯರ ನೇತೃತ್ವದಲ್ಲಿ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡು ಈ ಧಾರ್ಮಿಕ ಸಂಪ್ರದಾಯದ ಮೂಲಕ ಯಶಸ್ವಿಯಾಗಿ ನಡೆಸಿಕೊಟ್ಟರು. ಅಲ್ಲದೆ ಕೃಷಿ ಕಾರ್ಯಕ್ಕೆ ತಮ್ಮ ಗದ್ದೆಯನ್ನು ನೀಡಿ ತಮ್ಮ ಈ ಯಶಸ್ವಿಗೆ ಕಾರಣಿಬೂತರಾದ ಉಮೇಶ್ ಅಮೀನ್ ನಾಗಂಡದಿ ಇವರನ್ನು ಶಾಲು ಹೊದಿಸಿ ಪುಷ್ಪ ನೀಡಿ ಗೌರವಿಸಲಾಯಿತು. ಹಿರಿಯರಾದ ಪುರುಷೋತ್ತಮ. ಕೆ ಇವರು ಮಾರ್ಗದರ್ಶನದ ಹಿತ ನುಡಿಯನ್ನು ಹೇಳಿದರು.

Leave a Reply

Your email address will not be published. Required fields are marked *

error: Content is protected !!