ಕೆಂಜಾರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಾಲೂಕು ಆರೋಗ್ಯಾಧಿಕಾರಿ ಕಛೇರಿ ಮಂಗಳೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಬೊಂದೇಲ್, ಎ.ಜೆ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನ ಕೇಂದ್ರ ಇದರ ಸಹಯೋಗದೊಂದಿಗೆ ದಿನಾಂಕ 22-09-2024 ಆದಿತ್ಯವಾರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಮ್ಮ ಕ್ಲಿನಿಕ್ ಮಳವೂರು – ಕರಂಬಾರು ಇಲ್ಲಿ ಬೃಹತ್ ಆರೋಗ್ಯ ಶಿಬಿರ ನಡೆಯಿತು. ಎ.ಜೆ ಸಂಸ್ಥೆಯ ವೈದ್ಯಕೀಯ ತಂಡ ಸುಮಾರು 10 ಕ್ಕೂ ಹೆಚ್ಚು ವಿಧದ ಆರೋಗ್ಯ ತಪಾಸಣೆ ಉಚಿತವಾಗಿ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಆರೋಗ್ಯ ಕೇಂದ್ರ ಬೊಂದೆಲ್ ಇಲ್ಲಿಯ ವೈದ್ಯಾಧಿಕಾರಿ ಡಾ.ಸವಿತಾ, ನಮ್ಮ ಕ್ಲಿನಿಕ್ ಇದರ ವೈದ್ಯೆ ಡಾ.ಸಾಯಿಕಿರಣ್ ಭಂಡಾರಿ, ಘಟಕದ ಅಧ್ಯಕ್ಷರು ವಿನೋದ್ ಕುಮಾರ್, ಕಾರ್ಯದರ್ಶಿ ಮಿಥುನ್ ಕುಮಾರ್ ಮಾಜಿ ಅಧ್ಯಕ್ಷರುಗಳಾದ ಗಣೇಶ್ ಅರ್ಬಿ, ಜಿತೇಶ್ ಸಾಲಿಯಾನ್, ಭರತೇಶ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಸುಮಾರು 115 ಮಂದಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿದರು. ಘಟಕದ ವತಿಯಿಂದ ವೈದ್ಯರ ತಂಡಕ್ಕೆ ಚಹ, ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಲಾಯಿತು.