ಮುದ್ದು ಮೂಡು ಬೆಳ್ಳೆ -ರಜತ ರಶ್ಮಿ -2012

ಬಿಲ್ಲವರ ಗುತ್ತು,  ಗುರಿಕಾರ ಮನೆತನಗಳ ಇತಿಹಾಸ

ಬಿಲ್ಲವರ ಚರಿತ್ರೆಯ ಗುತ್ತು, ಬರ್ಕೆ, ಗುರಿಕಾರ ಮನೆತನಗಳ ಕುರಿತ ಅಧ್ಯಯನವು ಕಳೆದ 2-3 ವರ್ಷಗಳಿಂದ ಮುಂಬಯಿ ’ಗುರುತು’ ಮಾಸಿಕ ಸಂಪಾದಕ, ಸಂಶೋಧಕ ಶ್ರೀ ಬಾಬು ಶಿವ ಪೂಜಾರಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಾ ಬಂದಿದೆ. ಬಿ.ಎಂ.ರೋಹಿಣಿ, ಮುದ್ದು ಮೂಡುಬೆಳ್ಳೆ ಹಾಗೂ ರಮಾನಾಥ್ ಕೋಟೆಕಾರ್‌ರ ತಂಡ ಕ್ಷೇತ್ರಾಧ್ಯಯನ ನಡೆಸುತ್ತಾ ಬಂದಿದೆ. ಅದರಲ್ಲಿ ಒಂದು ಗುತ್ತುಮನೆ ಅಧ್ಯಯನದ ಮಾದರಿ ಇಲ್ಲಿದೆ:

ಸಾಂತ್ಯ ಗುತ್ತು
ಸಾಂತ್ಯ ಬಂಟ್ವಾಳ ತಾಲೂಕಿನಲ್ಲಿದೆ. ಬಿ.ಸಿ.ರೋಡ್, ಪುತ್ತೂರು ಮಾರ್ಗದಲ್ಲಿ ಮಾಣಿ ಕಳೆದು, ಕರುವೇಲ್‌ಲ್ಲಿ ಶಾಲಾ ಬಳಿ ಉತ್ತರದ ಮಣ್ಣಿನ ರಸ್ತೆಯಲ್ಲಿ ಮುಂದುವರಿದು ಸುಮಾರು ಒಂದು ಕಿ.ಮೀ.ದೂರ ಇಳಿಜಾರಿನ ತಳದಲ್ಲಿ ರಸ್ತೆ ಮತ್ತೆ ಎರಡು ಕವಲಾಗುತ್ತದೆ. ಎಡದ ರಸ್ತೆ ಕಾಡು ಪ್ರದೇಶದ ಕೊನೆಯಲ್ಲಿ ಸಾಂತ್ಯಗುತ್ತನ್ನು ತಲುಪುತ್ತದೆ. ಬಿ.ಸಿ.ರೋಡ್‌ನಿಂದ ೨೬ ಕಿ.ಮೀ. ದೂರವಿದೆ.

ಸಾಂತ್ಯಗುತ್ತು ಮೂಲ ಮನೆಯನ್ನು ’ಜಮ್ಮಮನೆ’ಎಂದೂ ಕರೆಯಲಾಗುತ್ತದೆ. ಇಲ್ಲಿ ತಿರ್ತ ಸಾಂತ್ಯ, ಮಿತ್ತ ಸಾಂತ್ಯ ಎಂದು ಎರಡು ಮನೆಗಳು ಇವೆ. ದಕ್ಷಿಣ ಭಾಗ ಎತ್ತರದಲ್ಲಿ ಮಿತ್ತ ಸಾಂತ್ಯ ಹಂಚಿನ ಮನೆ, ಇನ್ನೊಂದು ವಿಭಾಗ ಪಲ್ಕೆ ಸಾಂತ್ಯ ಎಂಬಲ್ಲಿ ಈ ಕುಟುಂಬದ ದೂಜ ಯಾನೆ ಸಂಕಪ್ಪ ಪೂಜಾರಿಯವರ ಕವರು ಇದೆ. ಈ ಮೂರು ಕವರು ಮೂರು ಹೆಣ್ಣು ಮಕ್ಕಳ ಸಂತತಿಯವರಾಗಿದ್ದು ಒಟ್ಟು 250-300 ಮನೆಗಳು ಕುಟುಂಬಕ್ಕಿವೆ. ಇವರು ಬುನ್ನಾಳ್ ಬರಿಯವರು.

175 ವರ್ಷಗಳ ಹಿಂದೆ ಮನೆತನದ ಹಿರಿಯ ಸುಬ್ಬ ಪೂಜಾರಿಯವರು ಸಾಂತ್ಯ ಮನೆಯನ್ನು ಕಟ್ಟಿಸಿದರಂತೆ. ಮೂಲದಲ್ಲಿ ಈ ಭೂಮಿ ಬಿಳಿಯೂರು ಗುತ್ತಿನ ಜೈನರದಾಗಿತ್ತು. ಬಳಿಕ ಬಿಲ್ಲವರಿಗೆ ಬಂದಿತು. ಆ ಸ್ಥಾನಮಾನವೂ ಬಂತು. ಆ ಕಾಲದಲ್ಲಿ ಕೂರೇಲ್ ಸುಬ್ಬ, ಮುಗ್ಗ ಸುಬ್ಬ ಮತ್ತು ಸಾಂತ್ಯ ಸುಬ್ಬ ಈ ಮೂವರೂ ತಂಕದ ಬಂಟರೂ, ಪರಮಾಪ್ತ ಸ್ನೇಹಿತರೂ ಆಗಿದ್ದರಂತೆ. ದರ್ಪ, ದಬ್ಬಾಳಿಕೆಗೆ ಸೊಪ್ಪು ಹಾಕದೆ ಸ್ವಂತ ಆಸ್ತಿ ಪಾಸ್ತಿ ಮಾಡಿಕೊಂಡರು.

ಸಾಂತ್ಯ ಸುಬ್ಬಪೂಜಾರಿಯವರು ತನ್ನ ಮೂವರು ಹೆಣ್ಣು ಮಕ್ಕಳಿಗೆ ತಲಾ ಒಂದು ಕೋರ್ಜಿ(42 ಮುಡಿ) ಹೊಲಗಳ ಆಸ್ತಿ ಮಾಡಿಕೊಟ್ಟರು. ಸಾಂತ್ಯ ಗುತ್ತು ಎಲ್ಲರಿಗೂ ಮೂಲಮನೆ. ಬಿಳಿಯೂರು ಗ್ರಾಮದೈವ ನೇಮಕ್ಕೆ ಕೈಲುಕಡಿಯುವಾಗ ಈ ಮನೆಯ ಬೋಂಟ್ರ (ಯಜಮಾನರು) ರು ಉಪಸ್ಥಿತರಿರಬೇಕು. ಆ ಆಸ್ತಿಯಲ್ಲಿ ಭೂಮಸೂದೆಯಿಂದಾಗಿ ಬಹುಪಾಲು ಪರಾಧೀನವಾಗಿ ಈಗ ತಲಾ ಸುಮಾರು 7 ಮುಡಿಯಷ್ಟು ಆಸ್ತಿಯಿದೆ. ಸುಬ್ಬ ಪೂಜಾರರ ಮಕ್ಕಳು ಸೇಸಪ್ಪ ಪೂಜಾರಿ, ಶಿವಪ್ಪ ಪೂಜಾರಿ, ಕೃಷ್ಣಮ್ಮ. ಕೃಷ್ಣಮ್ಮನ ಮಕ್ಕಳು- ಅಮ್ಮಿ ಪೂಜಾರಿ, ಸೀತಾರಾಮ ಪೂಜಾರಿ, ಸುಂದರ ಪೂಜಾರಿ, ಶ್ರೀಧರ ಪೂಜಾರಿ. ಚಂದ್ರಾವತಿ ಮತ್ತು ಲಲಿತ. ಇವರಲ್ಲಿ ಚಂದ್ರಾವತಿಯನ್ನು ಕಕ್ಯಪದವಿಗೆ ಲಗ್ನ ಮಾಡಿಕೊಡಲಾಗಿದೆ. ಲಲಿತ ಸಾಂತ್ಯಗುತ್ತಿನಲ್ಲಿದ್ದಾರೆ. ತಿರ್ತ ಸಾಂತ್ಯದಲ್ಲಿ ಸೇಸಪ್ಪ ಪೂಜಾರಿಯವರ ಮಗ ಸುಂದರ ಪೂಜಾರಿಯವರ ಸಂಸಾರ ಇದೆ. ಮಿತ್ತ (ಮೇಲಿನ) ಸಾಂತ್ಯದಲ್ಲಿ ಕೆ. ಚೆನ್ನಪ್ಪ ಪೂಜಾರಿ ಯವರ ಮಗ ಎಸ್. ಸುಂದರ ಪೂಜಾರಿಯವರ ಸಂಸಾರವಿದೆ. ಕುಟುಂಬದ ಮನೆಗಳು ಬೇರೆ ಬೇರೆ ಕಡೆ ಇವೆ.

’ಸಾಂತ್ಯಮನೆ ಕುಟುಂಬ ದೈವ ದೇವರ ಜೀರ್ಣೋದ್ಧಾರ ಸಮಿತಿ,ಬಿಳಿಯೂರು’ ಎಂಬ ಹೆಸರಿನ ಸಮಿತಿ ಮಾಡಿ ಕೊಳ್ಳಲಾಗಿದೆ. ಅಧ್ಯಕ್ಷರು-ನಿವೃತ್ತ ಶಿಕ್ಷಕ ರವಿ ಪೂಜಾರಿ(ರವೀಂದ್ರ ಮಾಸ್ತರ್, ನಾಡೇಲು), ಗೌರವಾಧ್ಯಕ್ಷರು: ಅಮ್ಮಿ ಪೂಜಾರಿ ಸಾಂತ್ಯ, ಸಾಂತ್ಯ ಸುಂದರ ಪೂಜಾರಿ ಉಪಾಧ್ಯಕ್ಷರು, ದಿವಾಕರ ಪೂಜಾರಿ ಕರ್ಣ ಪ್ರಧಾನ ಕಾರ್ಯದರ್ಶಿ. ಮೇಲಿನ ಸಾಂತ್ಯ ಸುಂದರ ಪೂಜಾರಿ ಕೋಶಾಧಿಕಾರಿ. ಕಾರ್ಯಕಾರಿ ಸಮಿತಿ ಸದಸ್ಯರಿದ್ದಾರೆ.

ಶ್ರೀ ಅಮ್ಮಿ ಪೂಜಾರಿಯವರು ಕುಟುಂಬದ ಈಗಿನ ಹಿರಿಯರು. ದೈವಗಳ ಪೂಜನೆಯ ಹೊಣೆಯೂ ಇವರದು. ಬಿಳಿಯೂರು ಗ್ರಾಮದಲ್ಲಿ ಎರಡನೆಯ ಸ್ಥಾನದ ಮನೆಯಿದು. ಹಿಂದೆ ’ಎಲ್’ ಆಕಾರದಲ್ಲಿದ್ದ ಮನೆಕಟ್ಟಡ ಕಾಲಾಂತರದಲ್ಲಿ ಅಲ್ಪಸ್ವಲ್ಪ ಬದಲಾಗಿದ್ದು ಮನೆಚಾವಡಿ, ಮಾಡು, ಎಡಬಲದ ಕೊಠಡಿಗಳು, ಅಟ್ಟ, ಕುತ್ತಟ್ಟ ಎಲ್ಲವೂ ಪಾರಂಪರಿಕ ಸ್ವರೂಪದಲ್ಲೇ ಉಳಿದಿವೆ. ಕೈ ಮಣ್ಣಿನ ಸಾರಣೆಯ ಮನೆ, ನೆಲ ಮತ್ತು ಗೋಡೆಗಳು, ದಪ್ಪ ತೊಲೆಗಳ ಬಾಜಿರ ಕಂಬಗಳ ಚಾವಡಿ. ಚಾವಡಿಯ ಎಡಭಾಗದಲ್ಲಿ ವಿಶಿಷ್ಟವಾದ ದೈವ ಭಂಡಾರ ಕೊಠಡಿ. ಹುಲ್ಲು ಹೊದೆಸಿದ ಮಾಡು, ಮಡಲ ತಟ್ಟಿಯ ಜಗಲಿ, ಚಾವಡಿಯ ಮುಚ್ಚಿಗೆ ಮೇಲಿನ ಬೀಮುಗಳಲ್ಲಿ ಕದ ತೆರೆಯಲಾಗುವಂತಹ (ಮೊರ) ಸೇರಿನಗಲದ ೮ ಸಣ್ಣ ಗುಪ್ತ ಪೆಟ್ಟಿಗೆಗಳನ್ನು ಅಲ್ಲಲ್ಲಿ ಇಡಲಾದ ವಿಶೇಷ ರಚನೆ ಗಮನ ಸೆಳೆಯುತ್ತದೆ. ಈ ಚಾವಡಿಯಲ್ಲಿ ಹಿಂದೆ ಕುಟುಂಬದ ಯಜಮಾನರು ಮಾತ್ರ ಕುಳಿತುಕೊಳ್ಳುವುದು. ಬೇರೆಯವರು ಕೂರುವಂತಿಲ್ಲ.

ಚಾವಡಿಯ ದಕ್ಷಿಣದ ಕೋಣೆ ಈಗ ಅಡುಗೆಮನೆಯಾಗಿದ್ದು ಪಾರಂಪರಿಕವಾಗಿ ಅದು ಕುಲೆ(ಪ್ರೇತ) ಗಳಿಗೆ ಅಗೆಲು ಬಡಿಸಿಡುವ ಜಾಗ. ವರ್ಷಾವಧಿ ಕಾರ್ಯಕ್ರಮದ ಸಂದರ್ಭದಲ್ಲಿ ೯ ಎಲೆಗಳಲ್ಲಿ ಎಡೆ ಬಡಿಸುವುದು. ಕುಟುಂಬದಲ್ಲಿ ಮರಣ ಸಂಭವಿಸಿದ ಸಂದರ್ಭದ ಅಗೆಲಿಗೆ ಮಾತ್ರ 16+1 ಎಲೆ ಬಡಿಸಲಾಗುತ್ತದೆ.

ಸಾಂತ್ಯಗುತ್ತಿನ ದೈವಭಂಡಾರ ಕೊಠಡಿ:
ಇದರ ಪ್ರವೇಶದ್ವಾರ-ಆನೆ ಬಾಗಿಲು-ಶತಮಾನಗಳ ಹಿಂದಿನ ಕಲಾತ್ಮಕ ಕೆತ್ತನೆಯಿಂದ ಕೂಡಿದೆ. ದೈವಮಂಚ, ಪಾಪೆ(ಮೂರ್ತಿ) ಗಳು, ಅಡ್ಡಣ, ರಕ್ತೇಶ್ವರಿಯ ಕಡ್ಸಲೆ, ಇತ್ಯಾದಿಗಳು 175 ವರ್ಷ ಹಳೆಯವು. ಪಡುಗಡೆ ಮಂಚದಲ್ಲಿರುವ ಪಂಜುರ್ಲಿಯ ಮೊಗ, ಕಡ್ಸಲೆ, ಪ್ರಭಾವಳಿ ಜೀರ್ಣೋದ್ಧಾರ ನಿಮಿತ್ತ ಹೊಸದಾಗಿ ನಿರ್ಮಿತ. 2007 ನೇ ಇಸವಿಯಲ್ಲಿ ಟ್ರಸ್ಟ್ ಆದಾಗ ಕನ್ಯಾಡಿಯಲ್ಲಿರುವ ಈ ಕುಟುಂಬದ ಕವರಿನವರು 2 ಲಕ್ಷ, 50 ಸಾವಿರ ವೆಚ್ಚದಲ್ಲಿ 24 ಕ್ಯಾರೆಟ್ ಚಿನ್ನದ ನಾಲಗೆಯುಳ್ಳ ಸುಂದರ ಪಂಜುರ್ಲಿ ಮೊಗವನ್ನು ಹರಕೆ ರೂಪದಲ್ಲಿ ಒಪ್ಪಿಸಿದರಂತೆ.

ರಕ್ತೇಶ್ವರಿ ಮಂಚದ ತಳಭಾಗದಲ್ಲಿ ತಾಮ್ರದ ವೆಂಕಟರಮಣ ದೇವರ ಮುಡಿಪು ಇದೆ. ಮಂಚದಲ್ಲಿ ಅಶ್ವಾರೂಢ ರಕ್ತೇಶ್ವರಿ, ಅದರ ಬಳಿಯಲ್ಲಿರುವ ರಕ್ತೇಶ್ವರಿಯ ’ಗಿಂಡಿ’ ಯೂ ಕಾರಣಕದ್ದು. ಒಂದು ಕಾಲದಲ್ಲಿ ಗುತ್ತಿನಲ್ಲಿ ಧರ್ಮನೇಮವಾಗಿ ಸಾಲವಾಯಿತು.ಇತರ ವಸ್ತುಗಳ ಜೊತೆ ರಕ್ತೇಶ್ವರಿ ಗಿಂಡಿಯೂ ಅಡವಿಟ್ಟು ಹೋಯಿತು. ಅಲ್ಲಿ ಗಿರವಿ ಇಟ್ಟಲ್ಲಿ ಗಿಂಡಿ ’ಗಜಗಜಗಜ’ ವೆಂದು ಸದ್ದು ಮಾಡಿದ್ದನ್ನು ನೋಡಿದ ಸಾಲನೀಡಿದಾತ ಹೆದರಿ ಯಜಮಾನರಿಗೆ ಆ ಗಿಂಡಿಯನ್ನು ಹಿಂತಿರುಗಿಸಿ ಕೈ ಮುಗಿದರಂತೆ.

ರಕ್ತೇಶ್ವರಿ, ಮೈಸಂದಾಯ, ಕಲ್ಲುರ್ಟಿ ಪಂಜುರ್ಲಿ, ಸತ್ಯದೇವತೆ, ಹಿರಿಯಾಕ್ಲು ದೈವಗಳ ಸಾನಿಧ್ಯ ಒಳಗಡೆ ಇದೆ. ಹೊರಗಡೆ ಈ ಜಮೀನು ಪ್ರವೇಶ ಆಗುವಲ್ಲಿ ಮಿತ್ತ ಸಾಂತ್ಯ ಮನೆಯ ಮೂಡುಗಡೆ ಕುಪ್ಪೆ ಪಂಜುರ್ಲಿ ಕಲ್ಲು, ಬಲಬದಿ ಕಲ್ಲುರ್ಟಿ ದೈವಗುಡಿ ಇದೆ. ಮಾರ್ಗದ ಮೂಡುಗಡೆ ಸಾಂತ್ಯಗುತ್ತಿನ ನಾಗಬನವಿದೆ.

ಸಾಂತ್ಯಗುತ್ತಿನ ಮನೆಯ ಪಶ್ಮಿಮದಲ್ಲಿ ಅಮ್ನೂರು, ಭೈರವ ದೈವಕ್ಕೆ ಪಂಚ ಪರ್ವಕಾಲದಲ್ಲಿ ಹಟ್ಟಿ ಬಾಗಿಲಲ್ಲಿ ಅಗೆಲು ಸೇವೆ ಇದೆ. ಆಗ ಒಳಗಡೆಯ ಪಾಪೆಯನ್ನು ತಂದು ಇಲ್ಲಿ ಇರಿಸಲಾಗುತ್ತದೆ. ದೇವಿಗೆ ಪೂಜೆ, ಭೈರವನಿಗೆ ರಕ್ತಾಹಾರ ಸೇವೆ ಇದೆ. ಪ್ರತಿವರ್ಷ ಪರ್ವದ ವಾರ್ಷಿಕ ಸೇವೆಯಂದು ಗ್ರಾಮದ ತಂತ್ರಿಯವರು ಬಂದು ನಾಗತಂಬಿಲ, ಸತ್ಯನಾರಾಯಣ ಪೂಜೆ, ಸಾಂತ್ಯ ಚಾವಡಿಯಲ್ಲಿ ಗಣ ಹೋಮಾದಿಗಳನ್ನು ನಡೆಸುತ್ತಾರೆ. ತಿರುಪತಿ ವೆಂಕಟರಮಣ ಸೇವೆ ನಡೆಸಿ ಕುಟುಂಬದವರು ಕಾಣಿಕೆ ಹಾಕುತ್ತಾರೆ. ಸಂಜೆ ಕುಟುಂಬ ಹಿರಿಯರಿಂದ ದೈವಗಳಿಗೆ ’ಅಗೆಲು ಸೇವೆ’ ವರ್ಷಕ್ಕೊಮ್ಮೆ ಮಾತ್ರ ದೈವ ಭಂಡಾರ ಕೊಠಡಿಯ ಬಾಗಿಲು ತೆರೆಯುವುದು. ಆದಿಯಲ್ಲಿ ಜೈನ ಮಹಿಳೆ ಈ ಕುಟುಂಬದೊಂದಿಗೆ ವಿವಾಹವಾದುದರಿಂದ ಆಕೆಯ ಜೊತೆ ಬಂದಿರುವ ಕಲ್ಲುರ್ಟಿ ದೈವಕ್ಕೆ ಆರಾಧನೆ ಇದೆ. ಚಾವಡಿಯಲ್ಲಿ ಇವತ್ತಿಗೂ ಮಾಂಸಾಹಾರವಿಲ್ಲ. ಪರಿಶುದ್ಧತೆ ಕಾಪಾಡಲಾಗುತ್ತಿದೆ.

ಚಾವಡಿಯ ಬಲಪಕ್ಕದಲ್ಲಿ ಅಟ್ಟಕ್ಕೆ ಹೋಗುವ ಮೆಟ್ಟಿಲುಗಳು, ಅಲ್ಲಿಂದ ಹೋಗಿ ಅಟ್ಟವೇರಿದರೆ ಅಲ್ಲಿ 3 ಕೊಠಡಿಗಳು, ಹಳೆಯ ಕಾಲದ ಅನೇಕ ಪರಿಕರಗಳೂ ಕಾಣಸಿಕ್ಕಿದವು. ಸಮಿತಿಯ ಕಾರ್ಯದರ್ಶಿ ಶ್ರೀ ದಿವಾಕರ ಕರ್‍ಲರು ಒಂದೊಂದೇ ಪರಿಕರಗಳನ್ನು ತೋರಿಸಿ ಅದರ ಹಿನ್ನಲೆಯನ್ನು, ಸಂದರ್ಭವನ್ನೂ ವಿವರಿಸಿದರು. ಭತ್ತ ಅಳೆಯುವ ಕಳಸೆ,ಪುದ್ವಾರಿನ ದಿನ ಅಗೆಲು ಅನ್ನ ಬಡಿಸುತ್ತಿದ್ದ ಮರದ ಸೌಟುಗಳು, ಹಾಲು ಅಳೆಯುವ ಕೊಂಡೆಗಳು ಇತ್ಯಾದಿಗಳಿದ್ದುವು.

ಸಾಂತ್ಯಗುತ್ತು ಗುತ್ತಿನ ಮನೆ ಸುತ್ತಳತೆ:
ಎತ್ತರ- ಏಳೂವರೆ ಅಡಿ
ಸ್ಲ್ಯಾಬ್‌ವರೆಗೆ- ಹತ್ತೂವರೆ ಅಡಿ
ಹೊರ ವಲಯ ಸುತ್ತಳತೆ- 20 ಅಡಿ ಅಗಲ
ಐವತ್ತೇಳುವರೆ ಅಡಿ ಉದ್ದ
ಎತ್ತರ-9 ಅಡಿ
ಪಂಚಾಂಗದಿಂದ ಎತ್ತರ: ಫೌಂಡೇಶನ್-ಎರಡೂವರೆ ಅಡಿ
ಮೇಲ್ಗಡೆ ಗೋಡೆ- ಆರೂವರೆಯಿಂದ ಒಂಭತ್ತು ಅಡಿ
ಗೋಡೆಯ ದಪ್ಪ (ವಾಲ್ ತಿಕ್‌ನೆಸ್) 14(ಅಂಗುಲ)
ಚಾವಡಿ – ಎತ್ತರ 8’ (ಅಡಿ)
ಬಾಜಿರ ಚಾವಡಿ ಹಲಗೆಯ ಅಗಲ-ಒಂದೂವರೆ ಅಡಿ
ಉದ್ದ- ಹತ್ತು ಅಡಿ ಹನ್ನೊಂದು ಇಂಚು
ಪೂರ್ವ ಪಶ್ಚಿಮ(ಉದ್ದ) 11 ಅಡಿ
ದಕ್ಷಿಣ ಉತ್ತರ(ಅಗಲ) ಹತ್ತೊಂಭತ್ತು ಅಡಿ ಒಂದಿಂಚು)
ಬೇಸ್ -58 (ಇಂಚು)
ಭಂಡಾರ ಕೋಣೆ
ಬಾಗಿಲ ದಾರಂದ ದಪ್ಪ-8 (ಅಂಗುಲ)
ಮುಭಾಂಗ ಅಗಲ- 6’ (ಅಡಿ)
ಎತ್ತರ -(ಐದೂವರೆ ಅಡಿ)
ಮನೆಯ ಹಿಂಭಾಗ: (4 ಮದನ ಕೈಗಳಿವೆ. ನಟ್ಟ ನಡುವೆ ಒಂದು ಕಿಟಿಕಿ. ಅಡುಗೆ ಕೋಣೆಯ ಬಳಿ ಇನ್ನೊಂದು ಕಿಟಿಕಿ ಮರದ್ದು)
ಎತ್ತರ – 19’ (ಅಡಿ)
ಪಂಚಾಂಗ – ಎರಡೂವರೆ ಅಡಿ
ಮೇಲಿನ ಅಂತಸ್ತು(ಕುತ್ತಟ್ಟದ) ಸುತ್ತಳತೆ 16’x5’(ಅಡಿಗಳು)

ಅಟ್ಟದ ನಿರ್ಮಾಣ:
ಹಲಗೆ ಹಾಕಿ, ಅದರ ಮೇಲೆ ಜಾರಿಗೆ ಎಲೆಗಳನ್ನು ಹರಡಿ, ಅದರ ಮೇಲಕ್ಕೆ ಮಣ್ಣು ಮುಚ್ಚುವುದು. ಸೋರಿಕೆಂiiನ್ನು ತಡೆಯುವ ವಿಧಾನವಂತೆ ಅದು. ಕೈ ಮಣನ ಗೋಡೆಯ ನಡುನಡುವೆ ಕೆಂಪುಕಲ್ಲಿನ ೬ ಪಿಲ್ಲರ್(ಕಂಬ) ಗಳಿವೆ. ಮುಳಿಹುಲ್ಲಿನ ಮಾಡು.

ಮನೆಯ ಹಿಂಬದಿ ದನಗಳ ಹಟ್ಟಿ-2 ಹಸುಗಳಿವೆ. ಹಟ್ಟಿಯ ಹಿಂಬದಿ ಸ್ವಲ್ಪ ಖಾಲಿ ಸ್ಥಳ ಇಲ್ಲಿ ಅಮ್ನೂರು ದೇವರಿಗೆ ಮತ್ತು ಭೈರವನಿಗೆ ಅಗೆಲು ಬಡಿಸಲಾಗುತ್ತದೆ. ಅದರಾಚೆಗೆ ಹಾಳೆಮರ, ಮಣ್ಣದಂಡೆ. ಹಸುಗಳ ಹಾಹತ್ತೂವರೆ ಅಡಿಲು ಕರೆದು ಚೆಂಬನ್ನು ತಂದು ಒಮ್ಮೆ ಈ ಹಾಳೆಮರದ ಬುಡದಲ್ಲಿ ಇಡುವುದು ರೂಢಿ. ಹಾಳೆ ಮರದ ಗೆಲ್ಲಿನಲ್ಲಿ ಜೇನಿನ ತೊಡ್ಡೆ ಕಟ್ಟುತ್ತದೆ. ಅದಕ್ಕೆಂದು ಮಡಕೆ ಕವಚಿ ಇರಿಸಿದ್ದಾರೆ.

ಸಾಂತ್ಯಗುತ್ತಿನ ಎದುರು ತೋಟದಲ್ಲಿರುವ ಅಡಿಕೆಮರಗಳಲ್ಲಿ 600 ಈ ಮನೆಲೆಕ್ಕಕ್ಕೆ, 300 ಇನ್ನೊಂದು ಮನೆಗೆ, 400 ಮೂರನೆಯ ಮನೆಗೆಂದು ವಿಂಗಡಿಸಿದ್ದಾರೆ.

ಗುತ್ತು ಮನೆಯಂಗಳದಲ್ಲಿರುವ ಸಪೂರವಾದ ಕೈಮಣ್ಣಿನ ಲೇಪದ ಬಾವಿ 9 ಕೋಲು ಆಳವಿದೆ.

ಉತ್ತರ ದಿಕ್ಕಿಗೆ ತಗ್ಗಿನಲ್ಲಿ ಗದ್ದೆ, ತೋಟ ಮತ್ತು ತಿಳಿನೀರ ಕೆರೆ ಇದೆ. ಉತ್ತರ ಪಡಿಪಿರೆ ಮೆಟ್ಟಿಲುಗಳ ಕೆಳಗಡೆ ನೀರು ಹರಿವ ತೋಡು ಇದೆ.

ಮೇಲ್ಗಡೆ ಮಿತ್ತ ಸಾಂತ್ಯಕ್ಕೂ ಪ್ರವೇಶಿಸುವ ಮೊದಲು ಕುಪ್ಪೆಟ್ಟು ಪಂಜುರ್ಲಿ ಕಲ್ಲು ಹಾಗೂ ಕಲ್ಲುರ್ಟಿ ದೈವಗುಡಿ ಇದೆ. ಇಂತಹ ಪಾರಂಪರಿಕ ಪ್ರಾಚೀನ ಗುತ್ತು ಮನೆತನಗಳು ಒಂದು ಸಮಾಜದ ಗತ ವೈಭವಕ್ಕೂ ಭವ್ಯಚರಿತ್ರೆಗೂ ಸಾಕ್ಷಿಯಾಗಿ ಸಂಸ್ಕೃತಿ ವಾಹಕವಾಗಿವೆ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!