ಸಿಂಚನ ವಿಶೇಷಾಂಕ-2014 : ಅಮಿತಾಂಜಲಿ ಕಿರಣ್

ಬಾಳಬೆಳಕು

ಪಾರೂ ಮೌನವಾಗಿ ಮನೆಕೆಲಸ ಮಾಡುತ್ತಿದ್ದಳು. ಕೈಗಳು ಯಾಂತ್ರಿಕವಾಗಿ ಕೆಲಸ ಮಾಡುತ್ತಿದ್ದರೂ ಮನಸ್ಸಿನಲ್ಲಿ ನೂರೆಂಟು ಆಲೋಚನೆಗಳು. ’ದೇವರೇ ಏನು ಮಾಡಲಿ? ಯಾರನ್ನು ಕೇಳಲಿ…? ಈ ಮನೆಯೊಡತಿ ಊಟ, ತಿಂಡಿ, ಬಟ್ಟೆಬರೆ ಎಲ್ಲಾ ಕೊಟ್ಟೂ ಕೈ ತುಂಬಾ ಸಂಬಳ ನೀಡುತ್ತಿದ್ದುದರಿಂದ ಇಷ್ಟರವರೆಗೂ ತಾನು ಸುಖಿ. ಮನೆಯ ಯಜಮಾನಿ ಮಂಜುಳಾ ತನ್ನ ಕೆಲಸಕ್ಕೆ ಯಾವತ್ತೂ ಸಿಡಿಗುಟ್ಟಿದವರಲ್ಲ. ತಾನೂ ಅಷ್ಟೇ ಇಷ್ಟರವರೆಗೂ ಪ್ರಾಮಾಣಿಕವಾಗಿಯೇ ಕೆಲಸ ಮಾಡಿದವಳು. ಅಪರೂಪಕ್ಕೆ ರಜೆ ಮಾಡಿದಾಗ ಮಾತ್ರ ಸಿಟ್ಟಾಗುತ್ತಿದ್ದರೇ ವಿನಾಃ ಯಾವತ್ತೂ ತನ್ನ ಕೆಲಸದ ಮೇಲೆ ಕೋಪಿಸಿಕೊಂಡವರಲ್ಲ. ಆದರೂ ಈಗಿನ ಪರಿಸ್ಥಿತಿಯಲ್ಲಿ ಯಾವ ಮುಖ ಹೊತ್ತುಕೊಂಡು ಅವರನ್ನು ಕೇಳಲಿ… ಅವರನ್ನು ಬಿಟ್ಟರೆ ತನಗೆ ಈ ಹೊತ್ತಿನಲ್ಲಿ ಸಹಾಯ ಮಾಡುವವರೂ ಯಾರೂ ಇಲ್ಲವಲ್ಲ… ಹೀಗೇ ಸಾಗಿತ್ತು ಪಾರೂಳ ಯೋಚನೆ.

ಅನಾಥೆ ಪಾರ್ವತಿಯನ್ನು ಸುಧಾಕರ ಮದುವೆಯಾದದ್ದೆ ಮಹಾಪರಾಧ ಎನ್ನುವಂತೆ ಅವನ ಮನೆಯವರು ಅವನನ್ನು ಬೇರೆ ಇಟ್ಟಿದ್ದರು. ಅವನು ಅಲ್ಲಿ ಇಲ್ಲಿ ಕೂಲಿನಾಲಿ ಮಾಡಿ ಕೊಂಡೂ ಪಾರ್ವತಿ-ಖಾಸಗಿ ಶಾಲಾ ಟೀಚರ್ ಮಂಜುಳಾಳ ಮನೆಯಲ್ಲೂ ಕೆಲಸ ಮಾಡಿಕೊಂಡು ಸಂಸಾರ ತೂಗಿಸುತ್ತಿದ್ದರು. ಕಷ್ಟದಲ್ಲೂ ಇಷ್ಟಪಟ್ಟು ಬಾಳಿದ ಸಂತೃಪ್ತ ಜೀವನ ಅವರದು. ಆ ಕಷ್ಟದಲ್ಲೂ ಕೊರತೆಯಲ್ಲೂ ಮಕ್ಕಳಿಬ್ಬರಿಗೂ ಒಳ್ಳೆಯ ವಿದ್ಯೆ ನೀಡಿ ಸುಸಂಸ್ಕೃತರನ್ನಾಗಿ ಬೆಳೆಸಿದರು. ಸಣ್ಣವನಿನ್ನೂ ಹೈಸ್ಕೂಲು ಓದುತ್ತಿದ್ದ. ದೊಡ್ಡ ಮಗ ಹೊರಗೆ ದುಡಿಯುತ್ತಲೇ ತನ್ನ ಕಾಲೇಜು ಖರ್ಚುಗಳನ್ನು ತಾನೇ ತೂಗಿಸಿಕೊಂಡ. ಪದವಿ ಮುಗಿಸಿ ಸಣ್ಣ ಅಂಗಡಿ ಇಟ್ಟುಕೊಳ್ಳುವ ಆಲೋಚನೆಯನ್ನು ಹೆತ್ತವರ ಮುಂದಿಟ್ಟಾಗ ಇಬ್ಬರೂ ಕೂಡಿಟ್ಟ ಹಣವಿಲ್ಲದೆ ಒಮ್ಮೆ ಕಂಗಾಲಾದರೂ ತಾವು ಕೆಲಸ ಮಾಡುತ್ತಿದ್ದಲ್ಲಿ ಯಜಮಾನರನ್ನು ಕಾಡಿಬೇಡಿ ಅಲ್ಪಸ್ವಲ್ಪ ಸಾಲ ಮಾಡಿ ಹಣ ಹೊಂದಿಸಿಕೊಂಡು ಅವನಿಗೊಂದು ಪುಟ್ಟ ಅಂಗಡಿ ಮಾಡಿಕೊಟ್ಟರು. ಅಂಗಡಿಯಲ್ಲಿ ವ್ಯಾಪಾರ ಚೆನ್ನಾಗೇ ನಡೆಯುತ್ತಿತ್ತು. ಆದರೆ ಪಾರ್ವತಿಗೆ ಕಷ್ಟಕಾಲ ಶುರುವಾದದ್ದೇ ಈಗ.

ಮಗ ದುಡಿಯಲು ಆರಂಭಿಸಿದ ಕೂಡಲೇ ಗಂಡಹೆಂಡಿರಿಬ್ಬರೂ ತಮಗಿನ್ನು ಒಳ್ಳೆಯ ದಿನಗಳು ಶುರುವಾದುವೆಂದು ಖುಷಿಪಟ್ಟರು. ಆದರೆ ಆ ಸಂತೋಷ ಹೆಚ್ಚು ಸಮಯ ನಿಲ್ಲಲಿಲ್ಲ. ಪಾರ್ವತಿಯ ಗಂಡ ಸುಧಾಕರ ಒಂದು ದಿನ ಕೂಲಿ ಮುಗಿಸಿ ಮನೆಗೆ ಬರುತ್ತಿರುವಾಗ ಹಿಂದಿನಿಂದ ಬಂದು ಢಿಕ್ಕಿ ಹೊಡೆದ ಕಾರೊಂದು ಸುಧಾಕರನ ಸಂಸಾರವೇ ಕಂಗೆಡುವಂತೆ ಮಾಡಿತು. ಕಾರು ಹೊಡೆದ ರಭಸಕ್ಕೆ ಸುಧಾಕರನ ಕುತ್ತಿಗೆಯ ಮೂಳೆ ಮುರಿದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ. ಪಾರೂಗೆ ದಿಕ್ಕೇ ತೋಚದಂತಾಗಿತ್ತು. ಮಗ ಅಮ್ಮನಿಗೆ ಸಾಂತ್ವನ ಹೇಳುವಷ್ಟು ಬೆಳೆದಿದ್ದರೂ ಈಗಿನ ಪರಿಸ್ಥಿತಿ ಮಾತ್ರ ಎಲ್ಲರೂ ತೀರ ಕಂಗೆಡುವಂತೆ ಮಾಡಿತು. ವೈದ್ಯರ ಹೇಳಿಕೆ ಪ್ರಕಾರ ಸುಧಾಕರನ ಅಪರೇಷನ್‌ಗೆ ಬೇಕಾಗುವ ಖರ್ಚಿನ ಮೊಬಲಗು ಲಕ್ಷಗಳಲ್ಲಿ ಇತ್ತು.

ಪಾರೂ ತೀರಾ ಕಂಗೆಟ್ಟಳು. ದೇವರೇ ನನ್ನ ಮಾಂಗಲ್ಯವನ್ನು ಉಳಿಸಿಕೊಡು ಎಂದು ಬೇಡಿಕೊಂಡಳು. ದುಡ್ಡಿಗಾಗಿ ಏನು ಮಾಡುವುದೆಂದೇ ತೋಚಲಿಲ್ಲ. ಇದ್ದಬದ್ದ ಹಣವನ್ನೆಲ್ಲಾ ಒಂದು ಬಾರಿ ಖಾಲಿ ಮಾಡಿ ಕೈತೊಳಕೊಂಡಾಗಿತ್ತು. ಯಜಮಾನಿಯನ್ನು ಕೇಳೋಣವೆಂದರೆ ಈಗಾಗಲೇ ಅವರಲ್ಲೂ ಸಾಲ ಮಾಡಿ ಯಾಗಿತ್ತು. ಅಲ್ಲದೆ ಇತ್ತೀಚೆಗಷ್ಟೇ ಮಗಳ ಮದುವೆ ಮಾಡಿ ಕೈ ಖಾಲಿಯಾಗಿ ಕೂತ ಅವರೂ ಒಮ್ಮೆ ಸಾಲ ಕೊಡುವಾಗಲೇ ಗೊಣಗುಟ್ಟುತ್ತಲೇ ಕೊಟ್ಟಿದ್ದರು. ಮತ್ತೊಮ್ಮೆ ಹೇಗೆ ಕೇಳಲಿ ಎಂದುಕೊಂಡಳು.

ಕೆಲಸ ಯಾಂತ್ರಿಕವಾಗಿ ನಡೆಯುತ್ತಿದ್ದಂತೆ ಕಣ್ಣಿಂದ ಧಾರಾಕಾರವಾಗಿ ನೀರು ಹರಿಯಲಾರಂಭಿಸಿತು. ಯಾರಾದರೂ ನೋಡುವ ಮುನ್ನ ಬೇಗನೆ ಕೈಯಲ್ಲಿ ಒರೆಸಿಕೊಂಡಳು. ತನಗೆ ಬಾಳು ಕೊಟ್ಟ ಸುಧಾಕರನ ಮುಖ ಕಣ್ಣ ಮುಂದೆ ತೇಲಿ ಬಂತು. ಅನಾಥೆಯೆಂಬ ಒಂದೇ ಕಾರಣಕ್ಕೆ ತನ್ನೊಂದಿಗೆ ಸುಧಾಕರನನ್ನೂ ಮನೆಯಿಂದ ಹೊರಗಟ್ಟಿದ ಅವನ ಮನೆಯವರನ್ನು ನೆನೆಸಿಕೊಂಡಾಗ ಅಸಹ್ಯವೆನಿಸಿತು. ಆದರೂ ಸುಧಾಕರನನ್ನು ಉಳಿಸಿಕೊಳ್ಳುವ ಸಲುವಾಗಿ ಮರ್ಯಾದೆ ಬಿಟ್ಟು ಸಹಾಯ ಕೇಳಲೇ ಎಂದು ಕೊಂಡಳು. ಅವರಲ್ಲಿಯೂ ಹೋಗಿದ್ದಳು. ಮಗನನ್ನು ಬುಟ್ಟಿಗೆ ಹಾಕಿಕೊಂಡು ಸಾಯುವ ಕಾಲಕ್ಕೆ ಸಹಾಯ ಕೇಳಲು ಬಂದಳೆಂದು ಕುತ್ತಿಗೆ ಹಿಡಿದು ಆಚೆಗೆ ದಬ್ಬಿದ್ದರು-ಕಟುಕರು. ಸುಧಾಕರನನ್ನು ಉಳಿಸಿಕೊಳ್ಳುವ ಸಲುವಾಗಿ ಜತನದಿಂದ ಕಾಪಾಡಿಕೊಂಡು ಬಂದ ಸ್ವಾಭಿಮಾನವನ್ನೂ ಕೊಂದುಕೊಂಡಳು. ಆದರೂ ಸುಧಾಕರನನ್ನು ಉಳಿಸಿಕೊಳ್ಳುವ ದಾರಿ ಎಲ್ಲಿಯೂ ಕಾಣುತ್ತಿಲ್ಲ. ತೀರಾ ಹತಾಶೆಯಿಂದ ಜೀವ ಕಳಕೊಳ್ಳುವಷ್ಟು ಜಿಗುಪ್ಸೆ ಬಂದಿತ್ತು. ಆದರೆ ತನಗೇನಾದರೂ ಆದರೆ ಸುಧಾಕರನನ್ನೂ ಮಕ್ಕಳನ್ನೂ ನೋಡಿಕೊಳ್ಳುವವರು ಯಾರು? ಭಾರವಾದ ಹೃದಯ ಹೊತ್ತೇ ಮನೆಗೆ ಬಂದಳು. ಮಾರನೇ ದಿನವೇ ಸುಧಾಕರನ ಅಪರೇಷನ್.

ಬೆಳಿಗ್ಗೆ ಎದ್ದವಳೇ ಮಕ್ಕಳಿಗೊಂದಿಷ್ಟು ಏನನ್ನೋ ಮಾಡಿಟ್ಟು ಆಸ್ಪತ್ರೆಯತ್ತ ದೌಡಾಯಿಸಿದಳು. ಆದರೆ ಇವಳು ಹೋಗುವಷ್ಟರಲ್ಲೇ ಸುಧಾಕರನನ್ನು ಅಪರೇಷನ್‌ಗಾಗಿ ಒಳಗೆ ಕರೆದುಕೊಂಡು ಹೋಗಿ ಆಗಿತ್ತು. ಎದೆಬಡಿತ ಒಂದೇ ಬಾರಿಗೆ ನಿಂತಂತಾಗಿ ಧಸಕ್ಕೆಂದಿತು. ದೇವರೇ ಅಪರೇಷನ್ ನಡೆಸುತ್ತಿದ್ದಂತೆ ಹಣ ಕಟ್ಟಲು ಹೇಳಿ ಕಳಿಸಿದರೆ ಏನು ಮಾಡಲಿ? ದುಡ್ಡಿಲ್ಲ ಎಂದರೆ ಅರ್ಧಕ್ಕೆ ನಿಲ್ಲಿಸಿ ಬಿಟ್ಟರೆ? ಅವರ ಕಣ್ಣಿಗೆ ಬೀಳದಂತೆ ಇಲ್ಲೇ ಎಲ್ಲಾದರೂ ಅಡಗಿ ಕೊಳ್ಳಲೇ…ಯೋಚನೆಗಳು ಹಲವಾರು ದಿಕ್ಕುಗಳಲ್ಲಿ ತಿರುಗುತ್ತಿದ್ದಂತೆ ದೂರದಲ್ಲಿ ನರ್ಸ್ ಒಬ್ಬಳು ತನ್ನತ್ತಲೇ ಬರುವುದು ಕಂಡಿತು. ಮೈಯಿಡೀ ಬೆವರಿತು. ಗಡಗಡನೆ ನಡುಗುತ್ತಾ ನಿಂತವಳನ್ನು ನರ್ಸ್ ಬಂದು ಅಪ್ಯಾಯಮಾನವಾಗಿ ಮಾತನಾಡಿಸಿದಳು. ಅಮ್ಮಾ ಭಯಪಡಬೇಡಿ… ದೇವರು ದೊಡ್ಡವನು, ಅಪರೇಷನ್ ಈಗ ತಾನೇ ಮುಗಿಯಿತು. ಇನ್ನು ನಿಮ್ಮ ಗಂಡನ ಪ್ರಾಣಕ್ಕೇನೂ ಅಪಾಯವಿಲ್ಲ. ಎಂದಾಗ ಪಾರೂ ಬಿಟ್ಟ ಬಾಯಿ ಬಿಟ್ಟಂತೆ ನಿಂತು ಬಿಟ್ಟಳು. ಆದರೆ ಅದಕ್ಕೆ ಬೇಕಾದ ಹಣ… ಎಂದಾಗ ನರ್ಸ್ ಯಾರೋ ಪುಣ್ಯಾತ್ಮರು ಆಗಲೇ ಬಂದು ಕಟ್ಟಿ ಹೋಗಿದ್ದ ರಿಂದಲೇ ಇಷ್ಟು ಬೇಗ ಅಪರೇಷನ್ ನಡೆಸಲು ಸಾಧ್ಯವಾಯಿತು. ಎಂದಳು. ಪಾರೂ ಮತ್ತಷ್ಟು ಗಾಬರಿಯಾದಳು. ಎಷ್ಟೇ ತಲೆ ಕೆಡಿಸಿಕೊಂಡರೂ ಆ ವ್ಯಕ್ತಿ ಯಾರಾಗಿರಬಹುದೆಂದು ಹೊಳೆಯಲೇ ಇಲ್ಲ.

ಸುಧಾಕರನನ್ನು ಆ ದಿನ ವಾರ್ಡ್‌ಗೆ ಹಾಕುವುದಿಲ್ಲವೆಂದು ತಿಳಿಯಿತು. ಒಂದೆರಡು ಗಂಟೆಯೊಳಗೆ ಯಜಮಾನಿಯ ಕೆಲಸಗಳನ್ನೆಲ್ಲ ಮುಗಿಸಿಕೊಂಡು ಬರುತ್ತೇನೆಂದು ಹೊರಟಳು. ಸುಧಾಕರನಿಗೆ ಮತ್ತೆ ಜೀವ ಬಂದ ಸಂತೋಷ ಒಂದೆಡೆಯಾದರೆ ಅಷ್ಟೊಂದು ಹಣ ನೀಡಿದ ಆ ಅಜ್ಞಾತ ವ್ಯಕ್ತಿ ಯಾರಿರಬಹುದೆಂಬ ಅನುಮಾನ. ಅದೇ ಯೋಚನೆಯಿಂದ ಇರುವಾಗ ಅಲ್ಲಿಗೆ ಬಂದ ಮಂಜುಳಾ ಪಾರೂ ಇವತ್ತು ಅಟ್ಟದ ಮೇಲಿಂದ ಆ ದೊಡ್ಡ ತಪ್ಪಲೆ ತೆಗೆದುಕೊಡು… ಮಧ್ಯಾಹ್ನಕ್ಕೆ ಪಾಯಸ ಮಾಡಬೇಕು ಎಂದಳು. ಸರಿಯಮ್ಮಾ…ಪಾಯಸ ಮಾಡಿದ್ರೆ ನಂಗೂ ಒಂದ್ಲೋಟ ಕೊಡಿ, ನಾನೂ ಇವತ್ತು ಖುಷಿಯಾಗಿದ್ದೇನೆ. ಎಂದವಳೇ ನಡೆದ ಘಟನೆಯನ್ನು ಹೇಳಿದಳು. ಎಲ್ಲವನ್ನೂ ಕೇಳಿದ ಮಂಜುಳಾ ನಿನ್ನ ಗಂಡನ ಮನೆಯವರೇ ಇದ್ದಿರಬಹುದು. ಎಷ್ಟೆಂದರೂ ಮಾತೃವಾತ್ಸಲ್ಯ ಎಲ್ಲಿ ಹೋಗುತ್ತೆ ಎಂದಳು. ಪಾರೂಗೂ ಹೌದೆನಿಸಿತು.

ಅಟ್ಟದ ಮೇಲಿಂದ ತಪ್ಪಲೆ ತೆಗೆದು ಯಜಮಾನಿಯ ಕೈಗೆ ಕೊಡುವಾಗ ಆ ಕೈಗಳಲ್ಲೇನೋ ಬದಲಾವಣೆ ಇದೆ ಅನಿಸಿತು. ಮತ್ತೆ ಮತ್ತೆ ನೋಡಿದಳು. ಹೌದು ಖಂಡಿತಾ ಏನೋ ಕಡಿಮೆ ಇದೆ. ಅಡಿಯಿಂದ ಮುಡಿಯವರೆಗೆ ಮತ್ತೆ ಗಮನಿಸಿದಳು. ಅಮ್ಮ…ನಿಮ್ಮ ಮೈಯಲ್ಲಿದ್ದ ಬಂಗಾರ ಎಲ್ಲ ಎಲ್ಲಿ? ಗಾಬರಿಯಿಂದ ಕೇಳಿದಳು. ಅದೂ..ಅದೂ..ಚಿಕ್ಕಮ್ಮನ ಮಗಳು ಒಂದು ವಾರದ ಮಟ್ಟಿಗೆ ಕೇಳಿದ್ಳು. ಕೊಟ್ಟು ಬಿಟ್ಟೆ ಎಂದಳು. ಹೌದಿರಬಹುದೇನೋ ಅನಿಸಿ ಸುಮ್ಮನಾದಳು ಪಾರೂ.

ಆದರೆ ಕೋಣೆ ಗುಡಿಸುವಾಗ ಪಾರೂಗೆ ಸಿಕ್ಕಿದ ಚೀಟಿಯೊಂದು ಅವಳನ್ನು ಮೂಕಳನ್ನಾಗಿಸಿತು. ಹಿಂದಿನ ದಿನ ಸುಧಾಕರನ ಆಸ್ಪತ್ರೆಯ ಬಿಲ್ಲನ್ನು ಕಟ್ಟಿದ ರಶೀದಿಯಾಗಿತ್ತು ಅದು. ಸ್ಥಂಭೀಭೂತಳಾದಳು. ಯಜಮಾನಿಯ ತಾಳಿ ಬಿಟ್ಟು ಬೇರೆ ಬಂಗಾರವಿಲ್ಲದ ಕೊರಳು, ಬಳೆಗಳಿಲ್ಲದ ಬೋಳು ಕೈಗಳ ನೆನಪಾಗಿ ಅಡಿಗೆ ಮನೆಗೆ ಓಡಿ ಬಂದವಳೇ ಯಜಮಾನಿಯ ಪಾದಗಳನ್ನು ಹಿಡಿದು ಗೋಳೋ ಎಂದು ಅಳತೊಡಗಿದಳು. ಮಂಜುಳಾ ಪಾರೂವನ್ನು ಎರಡೂ ಕೈಗಳಲ್ಲಿ ಎತ್ತಿ ಹಿಡಿದು ತಲೆ ನೇವರಿಸಿ ನಸುನಕ್ಕಾಗ ಪಾರೂ ಬಾಯಲ್ಲಿ ಶಬ್ದಗಳೇ ಹೊರಡಲಿಲ್ಲ. ತುಂಬಾ ಹೊತ್ತು ಅತ್ತು ಅತ್ತು ಅಮ್ಮಾ ಒಂದು ಹೆಣ್ಣಿನ ಅಂತರಾಳದ ನೋವನ್ನು ಇನ್ನೊಂದು ಹೆಣ್ಣೇ ಅರ್ಥ ಮಾಡಿಕೊಳ್ಳುತ್ತಾಳೆ ಎಂಬುವುದು ಎಷ್ಟೊಂದು ಸತ್ಯ. ನನ್ನ ಬಾಳ ಬೆಳಕು ಆರದಿರಲಿ ಎಂದು ನಿಮ್ಮ ಹಣತೆಯ ದೀಪ ಹಚ್ಚಿ ನನಗೆ ಬೆಳಕಾದಿರಿ. ಹಣತೆಯ ದೀಪ ಯಾವತ್ತೂ ಇನ್ನೊಂದು ಹಣತೆಯನ್ನು ಹಚ್ಚಿಯೇ ಬೆಳಕನ್ನು ಹರಡುತ್ತದೆ. ನಿಮ್ಮ ಬಾಳ ಹಣತೆಯ ದೀಪ ಯಾವತ್ತೂ ಪ್ರಜ್ವಲಿಸಿ ಬೆಳಗಲಿ- ಇದು ನನ್ನ ಮನದಾಳದ ಹಾರೈಕೆ. ಅಮ್ಮಾ ನನ್ನ ಪಾಲಿನ ಪ್ರತ್ಯಕ್ಷ ದೇವತೆ ನೀವೇ… ಎನ್ನುತ್ತಾ ಮತ್ತೊಮ್ಮೆ ಕಾಲಿಗೆ ಬಿದ್ದವಳನ್ನು ಪ್ರೀತಿಯಿಂದ ಹಿಡಿದೆತ್ತಿದಳು ಪಾರೂನ ಬಾಳ ಬೆಳಕನ್ನು ಬೆಳಗಿದ ಬೆಳಕಾದ ಮಂಜುಳಾ.

ಅಮಿತಾಂಜಲಿ ಕೆ.

One thought on “ಬಾಳಬೆಳಕು

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!