ಯುವವಾಹಿನಿ(ರಿ) ಬಜಪೆ ಘಟಕ

ಬಜಪೆ ಯುವವಾಹಿನಿಯಿಂದ ಬಿಸು ಪರ್ಬ ಆಚರಣೆ

ಜಾಗತೀಕರಣದ ಭರಾಟೆಯಲ್ಲಿ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯ ನಶಿಸಿಹೋಗುತ್ತಿರುವ ಈ ಕಾಲಘಟ್ಟದಲ್ಲಿ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮೂಲಕ ಯುವ ಜನಾಂಗದಲ್ಲಿ ಹೊಸ ಹುರುಪು ಮೂಡಿಸುವ ಕಾರ್ಯ ಮಾಡುತ್ತಿರುವ ಬಜಪೆ ಯುವವಾಹಿನಿಯು ಉತ್ತಮ ದಾರಿಯಲ್ಲಿ ಮುನ್ನಡೆಯುತ್ತಿದೆ ಎಂದು ರೋಟರಿ ವಲಯ 1ರ ಸಹಾಯಕ ಗವರ್ನರ್ ಜಿನರಾಜ್ ಸಾಲ್ಯಾನ್ ತಿಳಿಸಿದರು.

ಅವರು ಯುವವಾಹಿನಿ(ರಿ) ಬಜಪೆ ಘಟಕದ ಆಶ್ರಯದಲ್ಲಿ ದಿನಾಂಕ 16.04.2017 ನೇ ಆದಿತ್ಯವಾರ ಬೆಳಗ್ಗೆ ಬಜಪೆ ಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಹೊಸ ವರ್ಷಾಚರಣೆಯ ಪ್ರಯುಕ್ತ ಜರುಗಿದ ಬಿಸು ಪರ್ಬ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿದರು.

ಯುವವಾಹಿನಿ ಕೇಂದ್ರ ಸಮಿತಿಯ ಸ್ಥಾಪಕಾದ್ಯಕ್ಷ ಸಂಜೀವ ಪೂಜಾರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಪೊರ್ಕೋಡಿ ಶ್ರೀ ಸೋಮನಾಥ ದೇವಸ್ಥಾನದ ಆಡಳಿತ ಮೋಕ್ತೇಸರರಾದ ಶೇಖರ ಅಮೀನ್ ಜೋಕಟ್ಟೆ ಸಮಾರಂಭ ಉದ್ಘಾಟಿಸಿದರು.

ಯಕ್ಷರಂಗದ ಹುಚ್ಚು, ಹಟಸಾಧನೆ, ಸತತ ಪ್ರಯತ್ನ ತನ್ನ ಯಶಸ್ಸಿನ ಗುಟ್ಟು ಎಂದು ತನ್ನ ಜೀವನದ 359ನೇ ಸನ್ಮಾನ ಸ್ವೀಕರಿಸಿ ಮಾತನಾಡಿದ ಯಕ್ಷರಂಗದ ಚಾರ್ಲಿ ಚಾಪ್ಲಿನ್ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೀತಾರಾಮ ಕುಮಾರ್ ಕಟೀಲ್ ತಿಳಿಸಿದರು.

ಬಿಳಗ್ಗೆ 11.00 ರಿಂದ ಯಕ್ಷ ಕಲಾವಿದ ಸೀತಾರಾಮ ಕಟೀಲ್ ಇವರಿಂದ ಹಾಸ್ಯಗಾರಿಕೆ ಹಾಗೂ ಬಜಪೆ ಯುವವಾಹಿನಿ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅದ್ಯಕ್ಷ ಸಾಧು ಪೂಜಾರಿ, ಬಜಪೆ ಯುವವಾಹಿನಿ ಉಪಾಧ್ಯಕ್ಷ ದೇವರಾಜ್ ಅಮೀನ್, ಬಿಸು ಪರ್ಬ ಕಾರ್ಯಕ್ರಮ ಸಂಚಾಲಕ ರವೀಂದ್ರ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು

ಬಜಪೆ ಯುವವಾಹಿನಿ ಕೋಶಾಧಿಕಾರಿ ಶ್ರೀಮತಿ ನಿರ್ಮಲಾ ಗೋಪಾಲಕೃಷ್ಣ ಸನ್ಮಾನ ಪತ್ರ ವಾಚಿಸಿದರು, ಬಜಪೆ ಯುವವಾಹಿನಿ ಅದ್ಯಕ್ಷ ಚಂದ್ರಶೇಖರ ಪೂಜಾರಿ ಸ್ವಾಗತಿಸಿದರು, ಕಾರ್ಯದರ್ಶಿ ಕನಕಾ ಮೋಹನ್ ಧನ್ಯವಾದ ನೀಡಿದರು. ವಿಶ್ವನಾಥ ರೆಂಜಾಳ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!