ಬೆಳ್ತಂಗಡಿ: ಯುವವಾಹಿನಿ(ರಿ.)ಬೆಳ್ತಂಗಡಿ
ಘಟಕದ ಆಶ್ರಯದಲ್ಲಿ ಯುವವಾಹಿನಿ ಮಹಿಳಾ ಸಂಚಲನ ಸಮಿತಿ ಬೆಳ್ತಂಗಡಿ ಸಹಕಾರದೊಂದಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ 165ನೇ ಜನ್ಮದಿನದ ಪ್ರಯುಕ್ತ ಗುರುನಮನ ಕಾರ್ಯಕ್ರಮ ಸೆಪ್ಟೆಂಬರ್ 13 ರಂದು ಶಾರದಾ ಮಂಟಪ ಗುರುವಾಯನಕೆರೆ ಜರಗಿತು.
ಕಾರ್ಯಕ್ರಮವನ್ನು ಕುವೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್ ಕೋಟ್ಯಾನ್ ದೀಪ ಬೆಳಗಿಸಿ ಉದ್ಘಾಟಿಸಿ ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂಬ ವಿಶ್ವ ಸಂದೇಶ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶದಂತೆ ಯುವವಾಹಿನಿ ಸಮಾಜಮುಖಿ ಕಾರ್ಯ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಗುರುದೇವ ಪ.ಪೂ.ಕಾಲೇಜಿನ ಉಪನ್ಯಾಸಕಿ ಹೇಮಾವತಿ.ಕೆ ಗುರು ಸಂದೇಶ ನೀಡಿ ಬ್ರಹ್ಮಶ್ರೀ ನಾರಾಯಣ ಗುರುಗಳು ಬೋಧಿಸಿದ ವಿಶ್ವ ಮಾನವತ್ವದ ಸಂದೇಶ ಕೇವಲ ಸಭಾ ವೇದಿಕೆಗೆ ಸೀಮಿತವಾಗಬಾರದು ಇದು ಪ್ರತಿಯೊಬ್ಬರ ಮನೆ ಮನಗಳಿಗೆ ತಲುಪಬೇಕು. ಇದಕ್ಕಾಗಿ ಯುವವಾಹಿನಿ ಅಂತಹ ಸಂಘಟನೆಗಳು ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದರು.ದೇವರು ಒಬ್ಬನೇ ಅವರು ನಿಮ್ಮಲ್ಲಿ ಇದ್ದಾನೆ ಅದನ್ನು ಕಂಡುಕೊಳ್ಳಿ ಎಂದು ಹೇಳಿದ ನಾರಾಯಣ ಗುರುಗಳು ಆತ್ಮಸ್ಥೈರ್ಯ ಕ್ಕಾಗಿ ದೇವಸ್ಥಾನ ಕಟ್ಟಿದರು. ಸಮಾಜದಲ್ಲಿ ಸಮಾನ ಅವಕಾಶವನ್ನು ನಿರ್ಮಿಸಿದ ಮಹಾಪುರುಷರಾಗಿದ್ದಾರೆ ಎಂದು ಹೇಳಿದರು.ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಹರೀಶ್ ಸುವರ್ಣ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮದ ಉದ್ದೇಶಗಳ ಬಗ್ಗೆ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಆದರ್ಶ ಕುಂದಾಪುರ ಅವರು ಶ್ರೀ ಗುರುನಾರಾಯಣ ಗುರುಗಳ ತತ್ವ ಸಂದೇಶದ ಬಗ್ಗೆ ತಿಳಿಸಿದರು.ತಾ.ಪಂ ಸದಸ್ಯರಾದ ಗೋಪಿನಾಥ್ ನಾಯಕ್. ಗೆಳೆಯರ ಬಳಗದ ಅಧ್ಯಕ್ಷ
ಶ್ರೀ ಕೆ. ಮೋಹನ್ ಶ್ರೀ ಶಾರದಾಂಬಾ ಭಜನಾ ಮಂಡಳಿ ಅಧ್ಯಕ್ಷೆ ರೀತಾ. ವೈ ಆಚಾರ್ಯ, ಶುಭ ಕೋರಿದರು.ವೇದಿಕೆಯಲ್ಲಿ ಯುವವಾಹಿನಿ ಮಹಿಳಾ ಸಂಚಲನ ಸಮಿತಿ ಪ್ರಧಾನ ಸಂಚಾಲಕ ಸುಜಾತಾ ಅಣ್ಣಿ ಪೂಜಾರಿ,ಘಟಕದ ನಾರಾಯಣ ಗುರು ತತ್ವ ಪ್ರಚಾರದ ನಿರ್ದೇಶಕ ಎಂ.ಕೆ ಪ್ರಸಾದ್, ಉಪಸ್ಥಿತರಿದ್ದರು.ಸಮಾರಂಭದಲ್ಲಿ ಗೆಳೆಯರ ಬಳಗದ ಅಧ್ಯಕ್ಷ ಕೆ. ಮೋಹನ್, ನೆರೆಪೀಡಿತ ಪ್ರದೇಶದಲ್ಲಿ ಸಹಕಾರ ನೀಡಿದ ಯಶೋಧರ್ ಚಾರ್ಮಾಡಿ, ಸಟ್ಲ್ ಬ್ಯಾಡ್ಮಿಂಟನ್ ನಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿ ಗೌತಮ್ ಕೋಟ್ಯಾನ್ ಇವರನ್ನು ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಯುವವಾಹಿನಿ(ರಿ.) ಕೇಂದ್ರ ಸಮಿತಿಯ ನಿರ್ದೇಶಕರು ಪ್ರಶಾಂತ್ ಮಚ್ಚಿನ ಸ್ವಾಗತಿಸಿ ಸುಧಾಮಣಿ ರಮಾನಂದ್ ಕಾರ್ಯಕ್ರಮವನ್ನು ನಿರೂಪಿಸಿದರು ಘಟಕದ ಕಾರ್ಯದರ್ಶಿ ವಿಜಯಕುಮಾರ್ ಶಿರ್ಲಾಲು ವಂದಿಸಿದರು.