ಯುವವಾಹಿನಿ(ರಿ) ಶಕ್ತಿನಗರ ಘಟಕವು ನಾರಾಯಣ ಜಯಂತಿಯ ಪ್ರಯುಕ್ತ ಗುರುವರ್ಯರು ಸಮಾಜಕ್ಕೆ ಕೊಟ್ಟ ಸಂದೇಶವಾದ ಒಂದೇ ಜಾತಿ,ಒಂದೇ ಮತ,ಒಂದೇ ದೇವರು ಎಂಬ ಮಾತಿನಂತೆ ವಿವಿಧ ಯುವವಾಹಿನಿ ಸದಸ್ಯರು ಜೊತೆಗೂಡಿಸಿ ಸಂಜೆ 4.30ರಿಂದ ಸಂಜೆ 5.30 ಘಂಟೆಯವರೆಗೆ ಭಜನೆ ಮಾಡುವ ಮೂಲಕ ಸಕ್ರಿಯ ಸದಸ್ಯ ಶ್ರೀಯುತ ಉಮೇಶ್ ದಂಡಕೇರಿ ಯವರ ಸ್ವಗ್ರಹದಲ್ಲಿ ನೆಡದ ಗುರುಪೂಜೆಗೆ ಘಟಕದ ವತಿಯಿಂದ ಹೂ ಸಮರ್ಪಿಸಿಲಾಯಿತು ಕಾರ್ಯಕ್ರಮದಲ್ಲಿ ಶ್ರೀನಿವಾಸ ಪೂಜಾರಿ, ಭವಾನಿ ಶಂಕರ್. ಗಣೇಶ್ ಮಹಾಕಾಳಿ, ಜಯರಾಮ ಪೂಜಾರಿ,ನವೀನ್ ದಂಪತಿಗಳು, ಭವ್ಯಕುಮಾರ್, ಕಿಶೋರ್ ಜೆ,ಯೋಗೀಶ್ ಸುವರ್ಣ,ಮಾರಪ್ಪ ಪೂಜಾರಿ, ಯಶವಂತ್ ಕರ್ಕೇರ,ಇನ್ನಿತರ ಸದಸ್ಯರು ಭಾಗಿಯಾಗಿ ನಾರಾಯಣ ಗುರುಗಳ ಶೋಭಯಾತ್ರೆ ಗೆ ಮೆರುಗು ಕೊಟ್ಟರು ಕೊನೆಯದಾಗಿ ಶ್ರೀನಿವಾಸ್ ಪೂಜಾರಿ ಯವರಿಂದ ಸಿಹಿ ತಿಂಡಿ ,ಸೇರಿದಂತಹ ಎಲ್ಲರಿಗೂ ವಿತರಿಸಲಾಯಿತು.