ಬಜ್ಪೆ :- ಯುವವಾಹಿನಿ (ರಿ.) ಬಜಪೆ ಘಟಕದ ವತಿಯಿಂದ ನವರಾತ್ರಿಯ ಶುಭ ಸಂದರ್ಭದಲ್ಲಿ ದಿನಾಂಕ 27 ಸೆಪ್ಟೆಂಬರ್ 22ರ ಸಂಜೆ 7.00 ಗಂಟೆಯಿಂದ 8.30 ಗಂಟೆ ವರೆಗೆ ಶ್ರೀ ಚಾಮುಂಡಿ ಕ್ಷೇತ್ರ ಮುರನಗರ ಇಲ್ಲಿ ಭಜನಾ ಸೇವೆ ನಡೆಯಿತು. ಹಾಗೂ ದಿನಾಂಕ 28 ಸೆಪ್ಟೆಂಬರ್ 2022 ರಂದು ಸಂಜೆ 6.30ರಿಂದ 8.00 ವರೆಗೆ ಶ್ರೀ ಮಹಾಗಣಪತಿ ದೇವಸ್ಥಾನ ಮಂಗಳೂರು ಇಲ್ಲಿ ಭಜನಾ ಸೇವೆ ನಡೆಯಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.