ಯುವವಾಹಿನಿ (ರಿ.) ಯಡ್ತಾಡಿ ಘಟಕದ ವತಿಯಿಂದ ಪ್ರತಿ ವರ್ಷವೂ ಊರಿನ ಪರಿಸರದಲ್ಲಿ ಜನರಿಗೆ ಸ್ವಚ್ಛತೆಯ ಅರಿವು ಮೂಡಿಸಲು ನಮ್ಮ ನಡೆ ಸ್ವಚ್ಛತೆಯ ಕಡೆ ಎಂಬ ವಿನೂತನ ರೀತಿಯ ಕಾರ್ಯಕ್ರಮ ಹಮ್ಮಿಕೊಂಡು ಊರಿನ ಸ್ವಚ್ಛತೆಗೆ ಆದ್ಯತೆ ನೀಡುತ್ತ ಬಂದಿರುತ್ತಾರೆ. ಜೊತೆಗೆ ಪ್ಲಾಸ್ಟಿಕ್ ಮುಕ್ತ ಪರಿಸರ ವನ್ನಾಗಿಸಲು ಕೂಡ ಶ್ರಮಿಸುತ್ತಿದ್ದಾರೆ. 24.11.2019 ರಂದು ಯಡ್ತಾಡಿ ಚಿತ್ತೇರಿ ದೇವಸ್ಥಾನದ ದೀಪೋತ್ಸವದ ಪೂರ್ವ ತಯಾರಿಯಾಗಿ ಚಿತ್ತೇರಿ ದೇವಸ್ಥಾನದ ಇಕ್ಕೆಲಗಳಲ್ಲಿ ಬೆಳೆದಿರುವ ಪೊದೆ, ಹಾಗು ಕಸ ಕಡ್ಡಿ ಹಾಗು ಪ್ಲಾಸ್ಟಿಕ್ ಗಳನ್ನು ಶ್ರಮದಾನದ ಮೂಲಕ ಯುವವಾಹಿನಿ ಸದಸ್ಯರೆಲ್ಲ ಸೇರಿ ಸ್ವಚ್ಛತೆಯ ಕಾರ್ಯವನ್ನು ನಡೆಸಿದರು . ತದನಂತರ ಇದೇ ಉತ್ಸಾಹದಲ್ಲಿ ಈ ಭಾರಿ ನೀರಿನ ಸಂರಕ್ಷಣೆಗೆ ವಿಶೇಷ ವಾಗಿ ಆದ್ಯತೆ ನೀಡಿ ನೀರಿನ ಸಂರಕ್ಷಣೆ ಹಾಗು ಅಂತರ್ಜಲ ವೃದ್ಧಿಗೆ ಪೂರಕವಾಗಿ ಪೂರ್ತಿ ಯಡ್ತಾಡಿ ಗ್ರಾಮದ ಕೃಷಿ ಭೂಮಿಗೆ ಆಸರೆಯಾಗಿರುವ *ಯಡ್ತಾಡಿ ಹೊಳೆ* ನೀರನ್ನು ಕಿಂಡಿ ಅಣೆಕಟ್ಟಿನ ಮೂಲಕ ಕಟ್ಟು ಹಾಕುವ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಯಡ್ತಾಡಿ ಚಾಮುಂಡೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವಿಠ್ಠಲ ಹೆಗ್ಡೆ ಯಡ್ತಾಡಿ ಹಾಗು ಯುವವಾಹಿನಿ ರಿ ಯಡ್ತಾಡಿ ಘಟಕದ ಅಧ್ಯಕ್ಷರಾದ ಗೀತಾಪೂಜಾರಿ , ಮಾಜಿ ಅಧ್ಯಕ್ಷರು ಪದಾಧಿಕಾರಿಗಳು ಹಾಗು ಯುವವಾಹಿನಿ ರಿ ಯಡ್ತಾಡಿ ಘಟಕದ ಸದಸ್ಯರು..ಹಾಗು ಊರ ಗ್ರಾಮಸ್ಥರು ಪಾಲ್ಗೊಂಡರು