ಕೊಲ್ಯ : ಯುವವಾಹಿನಿ (ರಿ)ಕೊಲ್ಯ ಘಟಕದ ಸದಸ್ಯರು ತಾ 27-05-2018ನೇ ಆದಿತ್ಯವಾರದಂದು “ದೇಗುಲ ದರ್ಶನ” ಎಂಬ ಒಂದು ದಿನದ ಪುಣ್ಯ ಕ್ಷೇತ್ರ ಪ್ರವಾಸ ಕಾರ್ಯಕ್ರಮವನ್ನು ಆಯೋಜಿಸಿದ್ದರು.ಬೆಳಿಗ್ಗೆ 6ಗಂಟೆಗೆ ಕೊಲ್ಯ ಬ್ರಹ್ಮ ಶ್ರೀ ನಾರಾಯಣಗುರು ಮಂದಿರದಲ್ಲಿ ಗುರುವರ್ಯರಿಗೆ ಪೂಜೆ ಸಲ್ಲಿಸಿ ಹೊರಟ 54 ಪ್ರವಾಸಿಗರನ್ನೊಳಗೊಂಡ ತಂಡವು ಉಡುಪಿ ಶ್ರೀ ಕೃಷ್ಣ ಮಠ,ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆ ಬ್ರಾಹ್ಮೀ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನ ಗಳಿಗೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು ರಾತ್ರಿ 11:30 ಕ್ಕೆ ಕೊಲ್ಯಕ್ಕೆ ಹಿಂತಿರುಗಿದರು . ಸಂಪರ್ಕದ ನೆಲೆಯಲ್ಲಿ ಆಯೋಜಿಸಿದ್ದ ಪ್ರವಾಸದಲ್ಲಿ ಘಟಕದ ಹೆಚ್ಚಿನ ಸದಸ್ಯರು ಭಾಗಿಯಾದ ಕಾರ್ಯಕ್ರಮವು ಗುರುವರ್ಯರ ಆಶೀರ್ವಾದದೊಂದಿಗೆ ಯಶಸ್ವಿಯಾಗಿ ನೆರವೇರಿತು. ಕೊಲ್ಯ ಘಟಕದ ಅಧ್ಯಕ್ಷರಾದ ಕುಸುಮಾಕರ್ ಕೊಲ್ಯ ಪ್ರವಾಸದ ನೇತೃತ್ವ ವಹಿಸಿದ್ದರು