ದಿನಾಂಕ 29/10/2019 ರಂದು ಪೂರ್ವಾಹ್ನ 9.00 ಘಂಟೆಗೆ ದೀಪಾವಳಿ ಹಬ್ಬದ ಪ್ರಯುಕ್ತ ನಮ್ಮ ಘಟಕದ ವತಿಯಿಂದ ಧಾನ್ಯಲಕ್ಮಿ ಮತ್ತು ಗೋವಿನ ಪೂಜೆಯನ್ನು ಫಲ ಪುಷ್ಪಗಳಿಂದ ಅಲಂಕರಿಸಿ,ಫಲವಸ್ತು ಮತ್ತು ಮಂತ್ರಾಕ್ಷೆಗಳನ್ನು ಸಮರ್ಪಿಸಿ ಹಾಗೂ ಹಣತೆ ಹಚ್ಚಿ, ದೀಪ ಪ್ರಜ್ವಲಿಸಿ ಷೊಡೋಪಚಾರಿ ವಿಧಿ ವಿಧಾನಗಳಿಂದ ಮಹಿಳಾ ಸದಸ್ಯರು ಸಾಮೂಹಿಕವಾಗಿ ಮಂತ್ರ ಪಠಿಸಿ, ಆರತಿ ಎತ್ತಿದೆವು. ಅಲ್ಲದೆ ಪಟಾಕಿ ಸಿಡಿಸಿ ಸಂಭ್ರಮಿಸಿದೆವು. ಈ ಮೂಲಕ ನಮ್ಮ ಸದಸ್ಯರೆಲ್ಲರೂ ದೀಪಾವಳಿ ಹಬ್ಬದ ಆಚರಣೆ ಮತ್ತು ಮಹತ್ವದ ಸ್ವ ಅನುಭವ ಪಡೆದೆವು. ಈ ಕಾರ್ಯಕ್ರಮದಲ್ಲಿ ನಮ್ಮ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಮನಃಪೂರ್ವಕವಾಗಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.