ತುಳುನಾಡಿನ ಪ್ರಾಚೀನ ಶ್ರೇಷ್ಠ ಪರಂಪರೆಯಲ್ಲಿ ನಡೆದು ಬಂದ ರೀತಿ ರಿವಾಜುಗಳು, ಸಾಂಸ್ಕೃತಿಕ ಹರಹುಗಳು ಮತ್ತದರ ಶ್ರೇಷ್ಠತೆ, ವೈಶಿಷ್ಠತೆ ನಮ್ಮಲ್ಲೇ ಹೆಚ್ಚಿನವರಿಗೆ ಅರಿವಿಲ್ಲದಿರಬಹುದು ಅದರಲ್ಲೂ ಜನಜೀವನದ ಮಧ್ಯೆ ಇದ್ದು ತಮ್ಮ ಅಸಾಧಾರಣ ಶಕ್ತಿ ಸಾಮರ್ಥ್ಯಗಳಿಂದ ಅಸಹಾಯಕರಿಗೆ ಸಹಾಯಕರಾಗಿ ದುಷ್ಟರಿಗೆ ಸಿಂಹಸ್ಚಪ್ನರಾಗಿ ಭಕ್ತ ಜನರಿಗೆ ರಕ್ಷಕರಾಗಿ ಇದ್ದ ಕೆಲವು ಶಕ್ತಿಗಳು ಪವಾಡ ಪುರುಷರಾಗಿ ಭೂತಾರಾಧನೆಯ ಕೇಂದ್ರ ಬಿಂದುಗಳಾಗಿ ಇಂದಿಗೂ ಪ್ರಸ್ತುತರಾಗಿದ್ದಾರೆ.
ಅಂದಿನ ಅತಿಶಯ ಶಕ್ತಿವಂತ ನಂಬಿದವರಿಗೆ ಇಂಬುಕೊಟ್ಟ ತುಳು ಇತಿಹಾಸದ ದೈವಗಳಲ್ಲಿ ಜುಮಾದಿ ಎಲ್ಲರಿಗೂ ತಿಳಿದಿರುವಂತಹ ಪವಾಡ ಶೀಲ ಭೂತ ಪ್ರಸ್ತುತ ಹಾಗೂ ಭವಿಷ್ಯತ್ ಎಲ್ಲವೂ ಹೀಗೆ ತುಳುನಾಡಿನ ಆದಿ ದೈವ ಜನಾದಿಯ ಬಗ್ಗೆ ಒಂದು ಆಳವಾದ ಸಾಂಸ್ಕೃತಿಕ ಅಧ್ಯಯನ ಮಾಡಿ 2014 ರಲ್ಲಿ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಡಾ| ನವೀನ್ ಕುಮಾರ್ ಮರಿಕೆಯವರು ಶೇಷ್ಠ ಸಾಧಕರಾಗಿ ಬಿಲ್ಲವ ಸಮುದಾಯದ ಹೆಮ್ಮೆಯ ಕುಡಿ ಎಂದೆನಿಸಿಕೊಂಡಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ. ಸ್ನಾತಕೋತ್ತರ ಪದವಿಗಳಿಸಿ ದಶಕಕ್ಕೂ ಮಿಕ್ಕಿ ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ, ಉಪನ್ಯಾಸಕರಾಗಿ ಮಾಡಿ ತನ್ನ ಅಧ್ಯಯನ ಶೀಲ ಬರವಣಿಗೆಯ ಮೂಲಕ ಎಲ್ಲರಿಗೂ ಪರಿಚಿತರಾಗಿರುವುದೇ ಅಲ್ಲದೆ ತನ್ನ ಸೃಜನ ಶೀಲ ಬರವಣಿಗೆಯಿಂದ ಸಾಹಿತ್ಯ ಸಂಸ್ಕೃತಿ ಆಸಕ್ತರ ಗಮನ ಸೆಳೆದಿದ್ದಾರೆ
ತುಳುನಾಡಿನಲ್ಲಿ ಕೊರಗತನಿಯ ಒಂದು ಅದ್ಯಯನ (2000), ’ಆಕಾಶದಲ್ಲಿ ಬೇಟೆ’ ಕಥಾ ಸಂಕಲನ 2001, ’ಗರುಡ ರೇಖೆ-2004 ಕಥಾಸಂಕಲನ’ ಮರಕೂರು ಜನನದ ದೈವಗಳು 2015 ಇವೆಲ್ಲಾ ಕೃತಿಗಳು ಇವರು ನಾಡಿನ ಸಂಸ್ಕೃತಿಗೆ ಸಲ್ಲಿಸಿದ ಅಕ್ಷರ ಗೌರವವೆನ್ನಬಹುದು ರಾಜ್ಯ ರಾಷ್ಟ್ರಮಟ್ಟದ ಅನೇಕ ಕಾರ್ಯಗಾರ, ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ, ’ಕತ್ತಲಿನಿಂದ’ ಕೃತಿಗೆ ತುಳು ಸಾಹಿತ್ಯ ಅಕಾಡಮಿ ಪುಸ್ತಕ ಬಹುಮಾನ 2016 ಪ್ರಶಸ್ತಿ, ಕರಾವಳಿಯ ಅನೇಕ ಸಂಘ ಸಂಸ್ಥೆಗಳಲ್ಲಿ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಕಾಶವಾಣಿಯಲ್ಲಿ ತುಳು, ವೈಚಾರಿಕ ಭಾಷಣಗಾರರಾಗಿ ಶೇಷ್ಠ ಸಾಧನೆ ಮಾಡಿದ ಡಾ| ನವೀನ್ ಕುಮಾರ್ ಮರಿಕೆಯವರು ಬಿಲ್ಲವ ಸಮುದಾಯದ ಅಭಿಮಾನದ ಗೌರವಕ್ಕೆ ಪಾತ್ರರಾಗಿದ್ದಾರೆ ಅವರಿಗೆ ಯುವವಾಹಿನಿಯ ಗೌರವ ಅಭಿನಂದನೆಗಳು.