ಕಾಪು : ತುಳುವರ ಆಚರಣೆ, ಸಂಪ್ರಧಾಯ ಮತ್ತು ಪದ್ಧತಿ ಗಳು ಸರ್ವರಿಗೂ ಅನುಕರಣೀವಾಗಿದೆ. ಅದನ್ನು ಮತ್ತಷ್ಟು ಗಟ್ಟಿಗೊಳಿಸಿ ಮುಂದಿನ ಪೀಳಿಗೆಗೂ ಉಳಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಧಾರ್ಮಿಕ ಚಿಂತಕ ಸುಧಾಕರ ಡಿ. ಅಮೀನ್ ಹೇಳಿದರು.
ಯುವವಾಹಿನಿ(ರಿ) ಕಾಪು ಘಟಕದ ವತಿಯಿಂದ ದಿನಾಂಕ 29.08.2018 ರಂದು ಕಾಪು ಬಿಲ್ಲವರ ಸಹಾಯಕ ಸಂಘದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಆಟಿ ತಿಂಗಳನ್ನು ಅನಿಷ್ಟದ ತಿಂಗಳು ಎಂಬ ಅರ್ಥವನ್ನು ಕಲ್ಪಿಸಲಾಗುತ್ತಿದೆ. ಆದರೆ ಇದು ಅನಿಷ್ಡದ ತಿಂಗಳು ಅಲ್ಲವೇ ಅಲ್ಲ. ಆಟಿ ತಿಂಗಳಲ್ಲೇ ನಾವು ಅತ್ಯಂತ ಪೂಜನೀಯವಾಗಿ ಆಚರಿಸುವ ನಾಗರಪಂಚಮಿ ನಡೆಯಲಿದ್ದು, ಅದರೊಂದಿಗೆ ಹಬ್ಬಗಳಿಗೆ ಚಾಲನೆ ಕೊಡಲಾಗುತ್ತದೆ ಎಂದರು.
ಕಾಪು ಬಿಲ್ಲವರ ಸಹಾಯಕ ಸಂಘದ ಗೌರವಾಧ್ಯಕ್ಷ ಪ್ರಭಾಕರ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಡುಪಿ ಜಿಲ್ಲಾ ಬಿಲ್ಲವರ ಪರಿಷತ್ ನ ಮಹಿಳಾ ಅಧ್ಯಕ್ಷೆ ಆಶಾ ಅಂಚನ್ ಸಾಂಕೇತಿಕವಾಗಿ ಚೆನ್ನಮಣೆ ಆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಲೋಕೇಶ್ ಅವರನ್ನು ಸಮ್ಮಾನಿಸಿ, ಗೌರವಿಸಲಾಯಿತು. ಯುವವಾಹಿನಿ ಸದಸ್ಯರು ಮನೆಯಲ್ಲೇ ತಯಾರಿಸಿ ತಂದ ತಿಂಡಿ – ತಿನಿಸುಗಳೊಂದಿಗೆ ಊಟೋಪಚಾರ ನಡೆಸಲಾಯಿತು.
ಯುವವಾಹಿನಿ ಕಾಪು ಘಟಕದ ಅಧ್ಯಕ್ಷ ದೀಪಕ್ ಕುಮಾರ್ ಎರ್ಮಾಳ್ ಅಧ್ಯಕ್ಷತೆ ವಹಿಸಿದ್ದರು. ಕಾಪು ಬಿಲ್ಲವರ ಸಂಘದ ಅಧ್ಯಕ್ಷ ವಿಕ್ರಂ ಕಾಪು, ಮಾಜಿ ಅಧ್ಯಕ್ಷ ಮಾಧವ ಆರ್. ಪಾಲನ್ ಅತಿಥಿಗಳಾಗಿ ಭಾಗವಹಿಸಿದ್ದರು.
ಐತಪ್ಪ ಕೋಟ್ಯಾನ್, ಸೋಮನಾಥ ಸಾಲ್ಯಾನ್, ಸುಕೇಶ್ ಎರ್ಮಾಳ್, ಶಶಿಧರ್ ಸುವರ್ಣ, ಯೋಗೀಶ್ ಕೋಟ್ಯಾನ್ ಉಪಸ್ಥಿತರಿದ್ದರು.
ಯುವವಾಹಿನಿ ಅಧ್ಯಕ್ಷ ದೀಪಕ್ ಕುಮಾರ್ ಎರ್ಮಾಳ್ ಸ್ವಾಗತಿಸಿದರು. ಪದಾಧಿಕಾರಿಗಳಾದ ನಾಗೇಶ್ ಸುವರ್ಣ ವಂದಿಸಿದರು. ಸುಧಾಕರ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.