ಹೆಜಮಾಡಿ :- ಹೆಜಮಾಡಿ ಯುವವಾಹಿನಿ ಘಟಕದ ಆಶ್ರಯದಲ್ಲಿ ಹೆಜಮಾಡಿ ಬಿಲ್ಲವರ ಸಂಘದ ಗುರು ಮಂದಿರದಲ್ಲಿ ತುಳುನಾಡ ತುಳಸಿ ಪರ್ಭ ಆಚರಣೆಯು ದಿನಾಂಕ 05 ನವೆಂಬರ್ 2022ರಂದು ನಡೆಯಿತು. ಗುರು ಮಂದಿರದ ಪ್ರಧಾನ ಅರ್ಚಕ ಹರೀಶ್ ಶಾಂತಿ ಮುಂಬಯಿ ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು, ಬಿಲ್ಲವ ಸಂಘದ ಅಧ್ಯಕ್ಷ ಲೋಕೇಶ್ ಅಮೀನ್, ಯುವವಾಹಿನಿ ಹೆಜಮಾಡಿ ಘಟಕ ದ ಅಧ್ಯಕ್ಷ ಧನಂಜಯ ಕಾರ್ಯದರ್ಶಿ ಜಯಶ್ರೀ ಸದಾಶಿವ, ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ತಾರಾನಾಥ್ , ಬಿಲ್ಲವ ಸಂಘದ ಕಾರ್ಯದರ್ಶಿ ಸುನೀತಾ ಕರ್ಕೇರ, ಕೋಶಾಧಿಕಾರಿ ಪ್ರಭೋಡ್ ಚಂದ್ರ ಹೆಜಮಾಡಿ, ಯುವವಾಹಿನಿ ಕೆಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಧೀರಜ್ ಹೆಜಮಾಡಿ, ಗುರು ಮಂದಿರದ ಅರ್ಚಕ ರಾಜೇಶ್ ಶಾಂತಿ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.