ಬೆಳ್ತಂಗಡಿ ತಾಲೂಕಿನ ಕುದ್ಯಾಡಿ ಗ್ರಾಮದ ಭಿಮಕಜಿರಿ ಶ್ರೀ ಚಂದಯ್ಯ ಪೂಜಾರಿ-ಇಂದಿರಾ ದಂಪತಿಗಳ ಸುಪುತ್ರ ಡಾ| ಪ್ರವೀಣ್ ಬಿ. ಕುದ್ಯಾಡಿ ಇವರು 2007 ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಡಾ| ಪಿ. ಗುರುರಾಜ ಭಟ್ ಸ್ವರ್ಣ ಪದಕ ಸಹಿತ ಪ್ರಥಮ ರ್ಯಾಂಕ್ನೊಂದಿಗೆ ಎಂ.ಎ. ಪದವಿ (ಇತಿಹಾಸ) ಪಡೆದಿರುತ್ತಾರೆ.
ಇಂತಹ ಸಾಧನೆಯ ಡಾ| ಕುದ್ಯಾಡಿಯವರು ಮೈಸೂರು ವಿಶ್ವವಿದ್ಯಾಲಯದ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಂಶೋಧಕ ಪ್ರವೃತ್ತಿಯಿಂದ ಪ್ರೊ| ಹನುಮನಾಯಕರ ಮಾರ್ಗದರ್ಶನದೊಂದಿಗೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಇತಿಹಾಸ (ಕ್ರಿ.ಶ. 10ನೇ ಶತಮಾನದಿಂದ 18ನೇ ಶತಮಾನದವರೆಗೆ) ಅಧ್ಯಯನ ಮಾಡಿದ ಇವರು ಈ ವಿಷಯದ ಸಂಶೋಧನಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ (Ph.D) ಪದವಿ ಪಡೆದಿರುತ್ತಾರೆ.
2004 ರಲ್ಲಿ B.Ed. ಪದವಿಯನ್ನು ಅತ್ಯುನ್ನತ ಶ್ರೇಣಿಯಲ್ಲಿ ಮುಗಿಸಿ ಇತಿಹಾಸ ಉಪನ್ಯಾಸಕರಾಗಿ ಮಂಗಳೂರಿನ ಖ್ಯಾತ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕುದ್ಯಾಡಿ ಪಿಲ್ಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಪದವಿಗಳಿಸಿ BSS ಶಿಕ್ಷಣ ಮಹಾ ವಿದ್ಯಾಲಯ, ಸಕಲೇಶಪುರ ಹಾಗೂ ಮಂಗಳೂರು ವಿಶ್ವ ವಿದ್ಯಾಲ ಯದ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದ ಇವರು ಇದೀಗ ವಿದ್ಯಾರ್ಥಿ ಮಾರ್ಗದರ್ಶಕ ಹಾಗೂ ಓರ್ವ ಆದರ್ಶ ಉಪನ್ಯಾಸಕ.
ಡಾ| ಪ್ರವೀಣ್ ಬಿ. ಕುದ್ಯಾಡಿಯವರು ನಮ್ಮ ಸಮಾಜದ ಇನ್ನೋರ್ವ ಸಾಧಕ. ಅವರಿಗೆ ಅಭಿನಂದನೆಗಳು.