ಮೂಲ್ಕಿ ನಾರಾಯಣಗುರು ವಿದ್ಯಾಸಂಸ್ಥೆಯಲ್ಲಿ ಕಲಿತ ಓರ್ವ ಮಹಿಳೆ ಇಂದು ವಿಶ್ವವಿಖ್ಯಾತ ಬೆಂಗಳೂರಿನ CMR Institute of Technology ಯಲ್ಲಿ ಸಹಾಯಕ ಪ್ರೊಫೆಸರ್ ಆಗಿದ್ದಾರೆ. ಹಲವು ವೈಶಿಷ್ಟ್ಯಪೂರ್ಣ ಸಾಧನೆಯ ಈ ಪ್ರತಿಭಾನ್ವಿತೆ ಸಮಾಜದ ಕೆಲವೇ ಸಾಧಕರಲ್ಲಿ ಮೆಚ್ಚುಗೆ ಗಳಿಸಿ ಯುವ ಪೀಳಿಗೆಗೆ ಆದರ್ಶಪ್ರಾಯರೆನಿಸಿದ್ದಾರೆ.
ಪ್ರತಿಷ್ಠಿತ (ಈಗಿನ ವಿದ್ಯಾರ್ಥಿಗಳ ಪ್ರಥಮ ಆಯ್ಕೆ ಎನಿಸಿದ) ಬೆಂಗಳೂರಿನ BMS ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದು ಉತ್ಪಾದನಾ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ PES Institute of Technology ಯಲ್ಲಿ M.Tech ಪದವಿ ಪಡೆದಿರುತ್ತಾರೆ. ಅಲ್ಲಿಗೇ ಸುಮ್ಮನಿರದ ಈಕೆ ವಿಶ್ವವಿಖ್ಯಾತ NITK ಯಲ್ಲಿ Metallurgical Engineering ನಲ್ಲಿ ತನ್ನ Ph.D ಪದವಿ ಪಡೆದಿದ್ದು ಇದು ಕೇವಲ ಅತ್ಯಂತ ಪ್ರತಿಭಾನ್ವಿತರಿಗೆ ಸಾಧ್ಯವೆನಿಸುವ ಉತ್ಕೃಷ್ಠ ಸಾಧನೆಯಾಗಿದೆ.
ಎಂ.ಟೆಕ್ನಲ್ಲಿ ಪ್ರಥಮ ರ್ಯಾಂಕ್ ಸಹಿತ ಸ್ವರ್ಣ ಪದಕ, PES Institute of Technology-VTU ಸ್ವರ್ಣ ಪದಕ, M.Techನ ಎಲ್ಲಾ ಸೆಮಿಸ್ಟರ್ಗಳಲ್ಲಿ M.R.D. Distinction Award ಇದೆಲ್ಲ ಸಾಧನೆ ಎಲ್ಲರ ಗೌರವಕ್ಕೆ ಪಾತ್ರವಾಗುವಂತದ್ದು. ಇಲ್ಲಿಗೇ ನಿಲ್ಲದೆ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ತಂತ್ರಜ್ಞಾನ ಸಮ್ಮೇಳನಗಳಲ್ಲಿ ಭಾಗವಹಿಸಿದ ಇವರು ಹಲವಾರು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿ ವಿಶ್ವದ ತಂತ್ರಜ್ಞಾನ ಸಾಧಕರಿಂದ ಭೇಷ್ ಎನಿಸಿಕೊಂಡಿದ್ದಾರೆ. ಸಂಶೋಧಕ ಪ್ರವೃತ್ತಿಯ ಡಾ| ಪ್ರಕೃತಿ ಶ್ರೀನಾಥ್ ಬಿಲ್ಲವ ಸಮುದಾಯದ ಹೆಮ್ಮೆಯ ಪುತ್ರಿ-ಭರತನಾಟ್ಯದಲ್ಲಿ ಸೀನಿಯರ್ ಗ್ರೇಡ್ ಮುಗಿಸಿರುವುದು ಇವರ ಕಲಾಭಿರುಚಿಯ ಪ್ರತೀಕ. ಇಂತಹ ಸಾಧಕಿಯನ್ನು ಅಭಿನಂದಿಸಲು ಯುವವಾಹಿನಿ ತುಂಬಾ ಸಂತೋಷಪಡುತ್ತಿದೆ.