ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯವು ನಡೆಸಿದ 2016ನೇ ಸಾಲಿನ ಸ್ನಾತಕೋತ್ತರ ದಂತ ವೈದ್ಯಕೀಯ (M.D.S. Ortho) ಪರೀಕ್ಷೆಯಲ್ಲಿ ಸುಳ್ಯದ K.V.G. ದಂತ ಮಹಾವಿದ್ಯಾಲಯದ ವಿದ್ಯಾರ್ಥಿನಿ ಮಂಗ ಳೂರು ಸುರತ್ಕಲ್ನ ಡಾ| ನಿಖಿತಾ ಸುಕೇಶ್ 4ನೇ ರ್ಯಾಂಕ್ ಗಳಿಸಿದ್ದು ಬಿಲ್ಲವ ಸಮಾಜಕ್ಕೆ ಕೀರ್ತಿ ತಂದಿದ್ದಾರೆ. ಸ್ನಾತಕೋತ್ತರ ವಿಭಾಗದಲ್ಲಿ ಕಾಲೇಜಿಗೆ ದೊರೆತ ಒಟ್ಟು 8 ರ್ಯಾಂಕ್ಗಳಲ್ಲಿ 4ನೇ ರ್ಯಾಂಕ್ ಪಡೆದು ಕಾಲೇಜಿಗೂ ಹೆಮ್ಮೆ ಎನಿಸಿದ್ದಾರೆ.
ಕಾಲೇಜಿನ ವಕ್ರ ದಂತ ವಿಭಾಗದ ಮುಖ್ಯಸ್ಥರಾದ ಡಾ| ಶರತ್ ಕುಮಾರ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಡಾ| ನಿಖಿತಾರವರು ಈ ಸಾಧನೆ ಮಾಡಿರುತ್ತಾರೆ. ಪ್ರಸಕ್ತ ಅಮೇರಿಕಾ ದಲ್ಲಿರುವ ಇವರು ಯುವವಾಹಿನಿ ಕುಟುಂಬದವರಾಗಿದ್ದು, ಯುವವಾಹಿನಿ (ರಿ) ಕೇಂದ್ರ ಸಮಿತಿಯ ಪ್ರಥಮ ಅಧ್ಯಕ್ಷ ಒಅಈ ಸಂಸ್ಥೆಯ ನಿವೃತ್ತ ಅಧಿಕಾರಿ, ಪ್ರಸಕ್ತ ನ್ಯಾಯವಾದಿಯಾಗಿರುವ ಎಂ. ಸಂಜೀವ ಪೂಜಾರಿ ಹಾಗೂ ಶ್ರೀ ಗೋಕರ್ಣನಾಥ ಬ್ಯಾಂಕಿನ ಅಧಿಕಾರಿ ಶ್ರೀಮತಿ ನಿರ್ಮಲಾ ಸಂಜೀವ್ ಇವರುಗಳ ಏಕೈಕ ಪುತ್ರಿ. ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸುರತ್ಕಲ್ ಕೆ.ಆರ್.ಇ.ಸಿ. ಹೈಯರ್ ಪ್ರೈಮರಿ ಶಾಲೆಯಲ್ಲಿ ಪೂರೈಸಿದ ನಿಖಿತಾ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಸುರತ್ಕಲ್ನ ವಿದ್ಯಾದಾಯಿನಿಯಲ್ಲಿ ಮುಗಿಸಿದರು. ಪದವಿ ಪೂರ್ವ ಶಿಕ್ಷಣವನ್ನು ಸುರತ್ಕಲ್ನ ಗೋವಿಂದದಾಸ ಕಾಲೇಜಿನಲ್ಲಿ ಮುಗಿಸಿ ಮಂಗಳೂರಿನ ಎ.ಜೆ. ಇನ್ಸಿಟ್ಯೂಟ್ ಆಫ್ ಡೆಂಟಲ್ ಸೈಯನ್ಸ್ನಲ್ಲಿ ದಂತ ವೈದ್ಯಕೀಯ ಪದವಿಯನ್ನು (ಬಿ.ಡಿ.ಎಸ್) ಪಡೆದರು. ದಂತ ವೈದ್ಯಕೀಯ ಸ್ನಾತಕೋತ್ತರ ಪದವಿಗಾಗಿ ಸುಳ್ಯದ ಕೆ.ವಿ.ಜಿ. ಕಾಲೇಜ್ ಆಫ್ ಡೆಂಟಲ್ ಸೈಯನ್ಸಸ್ಗೆ ಸೇರಿ ಇದೀಗ ಅತ್ಯುತ್ತಮ ಸಾಧನೆಯೊಂದಿಗೆ ಪರಿಣತಿ ವೈದ್ಯೆಯಾಗಿ ಹೊರಹೊಮ್ಮಿದ್ದಾರೆ. ಈ ನಡುವೆ ಪ್ರಸಿದ್ಧ ಹೋಂಡಾ ಮೋಟಾರ್ಸ್ ಕಂಪೆನಿಯಲ್ಲಿ ಅಟೋಮೊಬೈಲ್ ಡಿಸೈನ್ ಇಂಜಿ ನಿಯರ್ ಆಗಿರುವ ಶ್ರೀ ಸುಕೇಶ್ ಸುವರ್ಣರೊಂದಿಗೆ ವಿವಾಹವಾಗಿ ತಮ್ಮ ಮುದ್ದಿನ ಕುವರಿ ಸಾನಿಧ್ಯಳೊಂದಿಗೆ ಅಮೇರಿಕಾದ ಒಹಾಯೋ ನಗರದಲ್ಲಿ ನೆಲೆಸಿದ್ದಾರೆ. ಅಲ್ಲಿನ ಅರ್ಹತಾ ಪರೀಕ್ಷೆಯೊಂದನ್ನು ಬರೆದು ದಂತ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುವ ಬಯಕೆ ಹೊಂದಿರುತ್ತಾರೆ. ಜೊತೆಗೆ ಸಂಶೋಧನೆಯಲ್ಲಿ ತೊಡಗಿ ಪಿ.ಎಚ್ಡಿ. ಪದವಿಯನ್ನು ಗಳಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.
ಚಿಕ್ಕಂದಿನಲ್ಲೇ ಬಹುಮುಖ ಪ್ರತಿಭೆಯನ್ನು ಮೈಗೂಡಿಸಿದ್ದ ಡಾ| ನಿಖಿತಾ ಶಾಸ್ತ್ರೀಯ ನೃತ್ಯ ಭರತನಾಟ್ಯದ ಸೀನಿಯರ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಚಿತ್ರಕಲಾ ವಿಭಾಗದ ಉನ್ನತ ಅರ್ಹತಾ ಪತ್ರವನ್ನು ಪಡೆದಿದ್ದಾರೆ. ಸಂಗೀತದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು ತಮ್ಮ ಪತಿಯೊಂದಿಗೆ ಯೂರೋಪ್ ಮತ್ತು ಏಷ್ಯಾದ ಹೆಚ್ಚಿನೆಲ್ಲಾ ದೇಶಗಳನ್ನು ಸುತ್ತಿ ಬಂದಿದ್ದಾರೆ. ಬಹುಮುಖ ಪ್ರತಿಭೆಯ, ವಿಶಿಷ್ಠ ಸಾಧನೆಯ ಡಾ| ನಿಖಿತಾರವರನ್ನು ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ (ರಿ) ಉಪ್ಪಿನಂಗಡಿ ಘಟಕದ ಆತಿಥ್ಯದಲ್ಲಿ ದಿನಾಂಕ 06.08.2017 ರಂದು ಉಪ್ಪಿನಂಗಡಿಯ ಎಚ್ ಎಮ್.ಆಡಿಟೋರಿಯಂ ಇಲ್ಲಿ ಜರುಗಿದ ಯುವವಾಹಿನಿಯ 30ನೇ ವಾರ್ಷಿಕ ಸಮಾವೇಶದ ಸುಸಂದರ್ಭದಲ್ಲಿ ತಮಗೆ ಯುವವಾಹಿನಿ ಗೌರವ ಅಭಿನಂದನೆ’2017 ನೀಡಿ ಗೌರವಿಸುತ್ತಿದೆ
ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಕೆ.ವಸಂತ ಬಂಗೇರ, ಐ ಎಪ್ ಎಸ್ ಅಧಿಕಾರಿ ಶ್ರೀ ದಾಮೋದರ ಎ.ಟಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಶಯನಾ ಜಯಾನಂದ .ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀ ಜಯಂತ ನಡುಬೈಲು, ಕಾಸರಗೋಡು ಸರಕಾರಿ ಕಾಲೇಜು ಸಹ ಪ್ರಾಧ್ಯಾಪಕರಾದ ಡಾ.ರಾಜೇಶ್ ಬೆಜ್ಜಂಗಳ,ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಮರೋಳಿ, ಸಮಾವೇಶ ನಿರ್ದೇಶಕರಾದ ಡಾ.ಸದಾನಂದ ಕುಂದರ್, ಕಾರ್ಯದರ್ಶಿ ನಿತೇಶ್ ಜೆ.ಕರ್ಕೇರಾ ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾ.ರಾಜಾರಾಮ್, ಯುವವಾಹಿನಿ ಉಪ್ಪಿನಂಗಡಿ ಘಟಕದ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಉಪಸ್ಥಿತರಿದ್ದರು.
Thnq so much