ಮಂಗಳೂರು: 01-06-2024 ರಂದು ಘಟಕದ ಸಭಾಂಗಣದಲ್ಲಿ ನಡೆದ ಟೆರೇಸಿ ಗಾರ್ಡನಿಂಗ್ ಉಚಿತ ಮಾಹಿತಿ ಕಾರ್ಯಾಗಾರವನ್ನು ಮಂಗಳೂರು ಮಹಿಳಾ ಘಟಕದ ಸದಸ್ಯೆಯವರಾದ ಶ್ರೀಮತಿ ವಿದ್ಯಾ ರಾಕೇಶ್ ಮತ್ತು ಅವರ ತಂಡ ಬಹಳ ಮಹತ್ವಪೂರ್ಣವಾಗಿ ನಡೆಸಿಕೊಟ್ಟರು. ಸಸಿ ನೆಡುವ ಹಾಗೂ ಕಸಿ ಕಟ್ಟುವ ವಿಧಾನದ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿ ಕೊಟ್ಟರು. ಕಾರ್ಯಕ್ರಮದ ಕೊನೆಯಲ್ಲಿ ಬಾಗವಹಿಸಿದ ಅರವತ್ತಕ್ಕೂ ಹೆಚ್ಚು ಮಂದಿಗೆ ಔಷದೀಯ ಗಿಡ, ಪಲಪುಷ್ಪದ ಗಿಡಗಳನ್ನು ಉಚಿತವಾಗಿ ನೀಡಿದರು. ಈ ಸಂದರ್ಭದಲ್ಲಿ ಕೇಂದ್ರ ಸಮಿತಿ ಅಧ್ಯಕ್ಷರಾದ ಹರೀಶ್ ಕೆ. ಪೂಜಾರಿ, ಕೇಂದ್ರ ಸಮಿತಿ ಪ್ರಚಾರ ನಿರ್ದೇಶಕರಾದ ಪ್ರತ್ವಿರಾಜ್ ಪೂಜಾರಿ, ಮಹಿಳಾ ಘಟಕದ ಅದ್ಯಕ್ಷೆ ಶುಭ ರಾಜೇಂದ್ರ, ಕಾರ್ಯದರ್ಶಿ ಅಮಿತಾ ಗಣೇಶ್, ಮಹಿಳಾ ಘಟಕದ ಮಾಜಿ ಅಧ್ಯಕ್ಷೆಯರು, ಘಟಕದ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥತರಿದ್ದರು.