ಗೌರವ ಸಂಪಾದಕರ ಮಾತು : ಜಯಂತ ನಡುಬೈಲು

ಜಯಂತ ನಡುಬೈಲು

ಯುವವಾಹಿನಿಯ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು

ವರುಣನ ಅವಕೃಪೆಯಿಂದ ತತ್ತರಿಸಿದ ಕೊಡಗಿನಲ್ಲಿ, ಬಡವ, ಶ್ರೀಮಂತ, ಕೆಳಜಾತಿ ಮೇಲ್ಜಾತಿ ಎಂಬ ಯಾವುದೇ ಭೇದವನ್ನೂ ತೋರದೆ ನೆರೆ ಎಲ್ಲರನ್ನೂ, ಎಲ್ಲವನ್ನೂ ತನ್ನೊಳಗೆ ಸೆಳೆದುಕೊಂಡು ತಣ್ಣನೇ ಹರಿದುಹೋಗಿದೆ. ಬಡವನ ಸೈಕಲ್‍ನಿಂದ ಹಿಡಿದು ಶ್ರೀಮಂತನ ಬೆಂಝ್ , ಆಡಿ ಕಾರುಗಳು ಕೂಡಾ ಮಣ್ಣೋಳಗೆ ಹೂತುಹೋಗಿ ಈಜಿಪ್ತಿನ ಪಿರಮಿಡ್ಡ್ ಒಳಗೆ ಹುದುಗಿರುವ ಅಸ್ಥಿಯಂತೆ ಕಂಡು ಬರುತ್ತಿದೆ. ಮನುಷ್ಯನ ಸ್ವಾರ್ಥದ ರುದ್ರನರ್ತನಕ್ಕೆ ಮುನಿದ ಪ್ರಕೃತಿ ದಯೆ ದಾಕ್ಷಿಣ್ಯವನ್ನೇ ಮರೆತು ಪಾಠ ಕಲಿಸಿದೆ. ಇಲ್ಲಿ ಎಲ್ಲರೂ ಮತ್ತೆ ಹೊಸ ಬದುಕನ್ನು ಆರಂಭದಿಂದಲೇ ಕಟ್ಟಬೇಕಿದೆ. ಏಕೆಂದರೆ ಅಲ್ಲಿ ಉಳಿದಿರುವುದು ಬಟಾಬಯಲು ಮಾತ್ರ.

ಹೌದು ಸ್ನೇಹಿತರೇ, ಶಿಕ್ಷಕರು ಮೊದಲು ಪಾಠಮಾಡಿ ಮತ್ತೆ ಪರೀಕ್ಷೆ ಮಾಡುತ್ತಾರೆ ಆದರೆ, ಪ್ರಕೃತಿ ಮೊದಲು ಪರೀಕ್ಷೆ ಮಾಡಿ ಮತ್ತೆ ಪಾಠ ಕಲಿಸುತ್ತದೆ.  ನಾವು ಪ್ರಕೃತಿಯಿಂದ ಬದುಕಿನ ಪಾಠವನ್ನು ಕಲಿಯಬೇಕಿದೆ, ಹೂ, ಹಣ್ಣು, ನದಿ , ತೊರೆ ನಮಗೆ ಎಲ್ಲವನ್ನೂ ನೀಡುತ್ತದೆ ಅದು ಯಾವುದೇ ಪ್ರತಿಫಲಾಪೇಕ್ಷೆಯನ್ನು ಬಯಸುವುದಿಲ್ಲ. ನಮ್ಮ ಜೀವನವೂ ಇದೇ ಆಗಿರಲಿ, ನಮ್ಮ ಯುವವಾಹಿನಿ ಕನಸು ಇದೇ ಆಗಿರಲಿ ಎಂದು ಆಶಿಸುತ್ತೇನೆ ನಾವು ಮಾಡುವ ಕೆಲಸ ಮತ್ತೊಬ್ಬರಿಗೆ ಸಂತೃಪ್ತಿಯನ್ನು ಸಹಾಯವನ್ನು ಉಂಟು ಮಾಡುತ್ತಿರಲಿ, ಅದರ ಪ್ರತಿಫಲವನ್ನು ನೀಡುವವನು ಮತ್ತೊಬ್ಬ ಇದ್ದಾನೆ. ಆತ ಮೇಲಿನಿಂದ ಎಲ್ಲವನ್ನೂ ಅವಲೋಕಿಸುತ್ತಿದ್ದಾನೆ.

365 ದಿನಗಳ ಯಶಪರ್ವ ಮುಕ್ತಾಯಗೊಂಡಿದೆ, ಈ ಅವಧಿಯಲ್ಲಿ ಯುವವಾಹಿನಿಯ ಇತಿಹಾಸದಲ್ಲಿ ನಡೆದಿರುವ ಅವಿಸ್ಮರಣೀಯ ಸಾಧನೆಗಳ ಯಶೋಗಾಥೆ ನಮ್ಮೆಲ್ಲರ ಸ್ಮೃತಿ ಪಟಲದಲ್ಲಿ ಇನ್ನೂ ಸ್ಥಿರಸ್ಥಾಯಿಯಾಗಿ ಉಳಿದಿದೆ. ಒಗ್ಗಟ್ಟಿನ ಮಹಿಮೆ ಏನು ಎನ್ನುವುದನ್ನು ನಾನು ಯುವವಾಹಿನಿಯಿಂದ ಕಲಿತೆ. ಕಳೆದ ಅವಧಿಯಲ್ಲಿ ಯುವವಾಹಿನಿಯ 31 ಘಟಕಗಳೂ ಒಂದೇ ಮನಸ್ಸಿನಿಂದ ದುಡಿದ ಫಲ ಇಂದು ಎಲ್ಲಾ ಜಾತಿ, ಧರ್ಮ, ಮತ ಪಂಥ ಪಂಗಡಗಳ ಜನರೂ ನಮ್ಮತ್ತ ಬೆರಗುಗಣ್ಣಿನಿಂದ ನೋಡುವಂತಾಗಿದೆ.

ನಾನೆಂದೂ ಬರವಣಿಗೆಯ ಕೆಲಸವನ್ನು ಮಾಡಿದವನಲ್ಲ, ದುಡಿಯುವ ನನಗೆ ಬರೆಯುವುದು ಒಗ್ಗುವಂತಹುದಲ್ಲ, ಆದರೆ ನನ್ನ ಯುವವಾಹಿನಿ ಕುಟುಂಬವನ್ನು ನೋಡಿದಾಗ ನನಗಾಗುವ ಸಂತೋಷವನ್ನು ಎಲ್ಲರ ಜೊತೆ ಹಂಚಿಕೊಳ್ಳಬೇಕು ಅನಿಸುತ್ತಿದೆ ಅದಕ್ಕೆ ಯುವ ಸಿಂಚನಕ್ಕಿಂತ ಉತ್ತಮವಾದ ಮತ್ತೊಂದು ಮಾಧ್ಯಮವಿಲ್ಲ. ಹೀಗಾಗಿ ಗೌರವ ಸಂಪಾದಕರ ಮಾತಿನ ಮೂಲಕ ನನ್ನ ಮನದ ಭಾವನೆಯನ್ನು ಹಂಚಿಕೊಳ್ಳುತ್ತಿದ್ದೇನೆ.

ಆಗಸ್ಟ್ 5, ಯುವವಾಹಿನಿಯ ಹೆಸರನ್ನು ಸುವರ್ಣಾಕ್ಷರದಲ್ಲಿ ಬರೆದಿಟ್ಟ ದಿನ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಅಷ್ಟ ದಿಕ್ಕುಗಳಿಂದ ಹರಿದು ಬಂದ ಜನಸಾಗರ, ಸಾಸಿವೆ ಬಿದ್ದರೂ ಕೇಳುವಷ್ಟು ನಿಶಬ್ದತೆಯ ಶಿಸ್ತು, ಅಚ್ಚಕಟ್ಟಾದ ಸಭಾ ವ್ಯವಸ್ಥೆ, ಕರಾರುವಕ್ಕಾದ ಸಮಯ ಪಾಲನೆ, ಸಂತೃಪ್ತಿಯ ಭೋಜನ, ನಿರಾಳತೆ ನೀಡಿದ ಸಂಗೀತ, ಮೈ ನೆವರೇಳಿಸಿದ ನಿರೂಪಣೆ ಇವೆಲ್ಲ ಕಾರಣದಿಂದ ಯುವವಾಹಿನಿಯ 31 ನೇ ಸಮಾವೇಶ ಸಾರ್ಥಕ್ಯ ಕಂಡಿದೆ. ಪ್ರತಿಯೊಂದು ಘಟಕದ ಬದ್ಧತೆಯ ದುಡಿಮೆ ಇಂದಿನ ಯಶಸ್ಸಿನ ಪಾತ್ರ. ಇಂದು ಯುವವಾಹಿನಿಗೆ ಮತ್ತೊಂದು ಹೊಸ ಆರಂಭ ನೀಡಿದೆ. ಮತ್ತೆ ನಮ್ಮ ನಡಿಗೆ ನಿಲ್ಲದಿರಲಿ ಮುಂದಿನ ಜಯದತ್ತ ನಾವು ಸಾಗೋಣ, ಜೊತೆಯಾಗಿ ದುಡಿಯೋಣ, ಜೊತೆಯಾಗಿ ಸಾಗೋಣ, ಜೊತೆಜೊತೆಗೆ ಇರೋಣ ಎಂದು ಆಶಿಸುತ್ತಾ, ಕಳೆದೊಂದು ಅವಧಿಯಲ್ಲಿ ಉತ್ತಮ ಕೆಲಸ ಕಾರ್ಯ ಮಾಡಿದ ಎಲ್ಲಾ ಘಟಕಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊರತುಪಡಿಸಿ ಬೇರೆ ಜಿಲ್ಲೆಯಲ್ಲಿ ಯುವವಾಹಿನಿ ಘಟಕವನ್ನು ಅಸ್ತಿತ್ವಕ್ಕೆ ತರವ ಕನಸು ಈ ಸಾಲಿನಲ್ಲಿ ನನಸಾಗಿದೆ.
ಯುವವಾಹಿನಿಯ ಹೆಚ್ಚಿನ ಘಟಕಗಳ ಸದಸ್ಯರು ಬೆಂಗಳೂರು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ನೂತನ ತಂಡಕ್ಕೆ ನೈತಿಕ ಬಲ ನೀಡಿದ್ದಾರೆ, ಸಮಾಜಮುಖಿ ಚಿಂತನೆಯ ತುಡಿತದಲ್ಲಿ 70 ಕ್ಕೂ ಹೆಚ್ಚಿನ ವಿದ್ಯಾವಂತ ಯುವಕರ ಬಲಿಷ್ಠ ತಂಡವು ಯುವವಾಹಿನಿ ಬೆಂಗಳೂರು ಘಟಕವನ್ನು ಸಮರ್ಥವಾಗಿ ಮುನ್ನಸಲಿದೆ ಎನ್ನುವುದು ಇತ್ತೀಚೆಗೆ ನಡೆದ ಬೆಂಗಳೂರು ಘಟಕದ ಪದಗ್ರಹಣ ಸಮಾರಂಭದಲ್ಲಿ ಸಾಬೀತಾಗಿದೆ.

ಯುವವಾಹಿನಿಯಲ್ಲಿ ನಿಮ್ಮವ

ಜಯಂತ ನಡುಬೈಲ್

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!