ಗೆಜ್ಜೆಗಿರಿ ಕ್ಷೇತ್ರ ಅಭಿವೃದ್ಧಿಯಿಂದ ಬಿಲ್ಲವರ ಅಭ್ಯುದಯ : ಪೀತಾಂಬರ ಹೆರಾಜೆ

ಯುವವಾಹಿನಿ ಕೇಂದ್ರ ಸಮಿತಿಯ 35 ಘಟಕಗಳ ಪಧಾದಿಕಾರಿಗಳ ಮಾಸಿಕ ಸಭೆಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಅಭಿವೃದ್ಧಿ ಯಲ್ಲಿ ಯುವ ವಾಹಿನಿಯ ಎಲ್ಲಾ ಘಟಕಗಳು ಮತ್ತು ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಪರಸ್ಪರ ಕೈ ಜೋಡಿಸಿ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನದ ಅಭಿವೃದ್ಧಿಯ ಮೂಲಕ ವಿಶ್ವ ಬಿಲ್ಲವರ ಒಗ್ಗಟ್ಟು, ಸಂಘಟನೆ ಮತ್ತು ಸಮಾಜದ ಅಭಿವೃದ್ಧಿ ಸಾಧ್ಯ ಹಾಗೂ ಬಿಲ್ಲವ ಸಮಾಜದ ಪ್ರತಿಯೊಬ್ಬರಿಗೂ ಕ್ಷೇತ್ರಾಡಳಿತ ಸಮಿತಿಯಲ್ಲಿ 5000 ರೂಪಾಯಿಯ ಶಾಶ್ವತ ಸದಸ್ಯತನ ಪಡೆಯುವ ಅವಕಾಶ ಇದ್ದು ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆಯಬೇಕು ಎಂದು ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಉಪಾಧ್ಯಕ್ಷರರಾದ ಪೀತಾಂಬರ ಹೆರಾಜೆ ಯವರು ಸಭೆಯಲ್ಲಿ ವಿನಂತಿಸಿದರು.ಈ ಸಂಧರ್ಭ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರು ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಜಯಂತ್ ನಡುಬೈಲ್, ಕ್ಷೇತ್ರಾಡಳಿತ ಸಮಿತಿಯ ಪ್ರಧಾನ ಕಾರ್ಯಧರ್ಶಿ ರವಿಪೂಜಾರಿ ಚಿಲಿಂಬಿ, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ನರೇಶ್ ಸಸಿಹಿತ್ಲು, ಮಾಜಿ ಅಧ್ಯಕ್ಷರಾದ ಯಶವಂತ್ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿ ಸಲಹೆಗಾರರಾದ ತಮ್ಮಯ್ಯ ಮತ್ತು ಲೋಕಯ್ಯ, ಯುವವಾಹಿನಿ ಉಪಾಧ್ಯಕ್ಷರರಾದ ರಾಜಾರಾಮ್ ಮತ್ತು ನಿಕಟ ಪೂರ್ವ ಕಾರ್ಯಧರ್ಶಿ ಸುನಿಲ್ ಕೆ ಅಂಚನ್ ಹಾಗೂ ಕೇಂದ್ರಸಮಿತಿ ಮತ್ತು ಎಲ್ಲಾ ಘಟಕಗಳ ಪಧಾದಿಕಾರಿಗಳು, ಮಾಜಿ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!