ಕಡಬ : ಬ್ರಹ್ಮಶ್ರೀ ನಾರಾಯಣಗುರುವರ್ಯರ ಸಂದೇಶಗಳು ಯುವವಾಹಿನಿ ಸಂಸ್ಥೆಗೆ ಸದಾ ಪ್ರೇರಕ ಶಕ್ತಿಯಾಗಿದೆ. ಗುರುಗಳ ಸಂದೇಶ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಯುವವಾಹಿನಿಯ ಘಟಕಗಳ ಕಾರ್ಯ ಶ್ಲಾಘನೀಯ ಎಂದು ಚಲನಚಿತ್ರ ನಿರ್ದೇಶಕ, ಯುವವಾಹಿನಿ ಯುವ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಸ್ಮಿತೇಶ್ ಎಸ್.ಬಾರ್ಯ ತಿಳಿಸಿದರು.
ಅವರು 2024 ನೇ ಜನವರಿ 21 ರಂದು ಕಡಬ ದುರ್ಗಾಂಬಿಕಾ ದೇವಸ್ಥಾನದ ವಠಾರದಲ್ಲಿ ಯುವವಾಹಿನಿ (ರಿ.) ಕಡಬ ಘಟಕ ಮತ್ತು ಕಡಬ ತಾಲೂಕು ವಲಯದ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಗುರುಪೂಜೆಯ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.
ಯುವವಾಹಿನಿ ಕಡಬ ಘಟಕದ ಅಧ್ಯಕ್ಷರಾದ ಸುಂದರ ಪೂಜಾರಿ ಅಂಗಣ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಯುವವಾಹಿನಿಯ ಕ್ರಿಯಾಶೀಲ ಘಟಕವಾಗಿರುವ ಕಡಬ ಘಟಕದ ಕೊಡುಗೆ ಅನನ್ಯ ಎಂದು ಸಮಾರಂಭ ಉದ್ಘಾಟಿಸಿ ಮಾತನಾಡಿದ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ.ಪೂಜಾರಿ ತಿಳಿಸಿದರು.
ಕಟ್ಟೆಮಾರು ಕ್ಷೇತ್ರದ ಧರ್ಮದರ್ಶಿಗಳು ಮನೋಜ್ ಕಟ್ಟೆಮಾರು, ಪುತ್ತೂರು ಬಿಲ್ಲವ ಸಂಘ ಅಧ್ಯಕ್ಷರಾದ ಸತೀಶ್ ಕುಮಾರ್ ಕಡೆಂಜಿ, ಕಡಬ ತಾಲೂಕು ಕಛೇರಿಯ ಉಪ ತಹಸೀಲ್ದಾರರಾದ ಗೋಪಾಲ್ ಕೆ, ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಸೀತಾರಾಮ ಗೌಡ ಪೊಸವಳಿಕೆ, ಪುತ್ತೂರು ಅಕ್ಷಯ ಕಾಲೇಜಿನ ಆಡಳಿತ ನಿರ್ದೇಶಕರಾದ ಜಯಂತ ನಡುಬೈಲು, ಯುವವಾಹಿನಿ ಕೇಂದ್ರ ಸಮಿತಿಯ ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾದ ಮೋಹನ್ ಮಾಡೂರು,ಕಡಬ ತಾಲೂಕು ಬಿಲ್ಲವ ಸಂಚಲನ ಸಮಿತಿಯ ಪ್ರಧಾನ ಸಂಚಾಲಕರಾದ ಸತೀಶ್ ಕೆ ಐತ್ತೂರು, ಸವಣೂರು ವಲಯ ಸಂಚಾಲಕರಾದ ಸಂತೋಷ್ ಕುಮಾರ್ ಮರಕಡ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
ಧಾರ್ಮಿಕ ಕ್ಷೇತ್ರದ ಸಾಧಕ ಬಾಬು ಪೂಜಾರಿ ಕೆಲಂಬಿರಿ, ಕೃಷಿ ಕ್ಷೇತ್ರದ ಸಾಧಕ ಲಿಂಗಪ್ಪ ಪೂಜಾರಿ ಕೇಪುಳು, ಸಾಮಾಜಿಕ ಕ್ಷೇತ್ರದ ಸಾಧಕಿ ಪವಿತ್ರ ಅಂಚನ್ ರಾಮಕುಂಜ, ಕ್ರೀಡಾ ಕ್ಷೇತ್ರದ ಸಾಧಕಿ ಸೌಮ್ಯ ಪೂಜಾರಿ ಕಾಣಿಯೂರು, ಪವರ್ ಮ್ಯಾನ್ ಗಣೇಶ್ ಜಾಲು ಇವರನ್ನು ಸನ್ಮಾನಿಸಲಾಯಿತು.
ಗುರುಪೂಜೆ, ಭಜನೆ ಹಾಗು ಮೆರವಣಿಗೆ
ವಿಘ್ನೇಶ್ವರ ಭಜನಾ ಮಂಡಳಿ ನೆಟ್ಟಣ ಇವರಿಂದ ಭಜನಾ ಸೇವೆ ನಡೆಯಿತು. ಕಡಬ ಮೇಲಿನ ಪೇಟೆಯಿಂದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದವರಗೆ ಬ್ರಹ್ಮಶ್ರೀ ನಾರಾಯಣಗುರುಗಳ ಭಾವಚಿತ್ರದ ಟ್ಯಾಬ್ಲೊ ಮೆರವಣಿಗೆ ನಡೆಯಿತು. ಈ ಮೆರವಣಿಗೆಯಲ್ಲಿ ಶಿವ ಪಾರ್ವತಿ ಭಜನಾ ಮಂಡಳಿ ಎಡಮಂಗಲ, ಮತ್ತು ಜಯದುರ್ಗ ಭಜನಾ ಮಂಡಳಿ ಕಡಬ ಇವರಿಂದ ಕುಣಿತ ಭಜನೆಯು ಆಕರ್ಷಣೆಯ ಕೇಂದ್ರವಾಯಿತು. ವೈದಿಕ ವಿಧಿವಿದಾನಗಳೊಂದಿಗೆ ಗುರುಪೂಜೆ ನೆರವೇರಿತು.
ಯುವವಾಹಿನಿ ಕಡಬ ಘಟಕದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಶ್ರೇಯ ವಿದ್ಯಾನಗರ ಪ್ರಾಥಿಸಿದರು, ಯುವವಾಹಿನಿ ಕೇಂದ್ರ ಸಮಿತಿಯ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾದ ಶಿವಪ್ರಸಾದ್ ನೂಚಿಲ ಪ್ರಸ್ತಾವನೆಗೈದರು, ಯುವವಾಹಿನಿ ಕಡಬ ಘಟಕದ ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾದ ಸುಪ್ರೀತಾ ಚರಣ್ ಪಾಲಪ್ಪೆ ಸ್ವಾಗತಿಸಿದರು, ಕಾರ್ಯದರ್ಶಿ ಜಯಪ್ರಕಾಶ್ ದೋಳ ಧನ್ಯವಾದ ಸಮರ್ಪಿಸಿದರು , ಕೃತಿಕ ಬಲ್ಯ, ಕೃಷ್ಣಪ್ಪ ಅಮೈ ಕಾರ್ಯಕ್ರಮ ನಿರೂಪಿಸಿದರು.