ಮಾಣಿ :- ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ದಿನಾಂಕ 05 ಸೆಪ್ಟೆಂಬರ್ 2022 ರ ಸೋಮವಾರದಂದು ಬರಿಮಾರು ಗ್ರಾಮದ ಕಲ್ಲೆಟ್ಟಿ ಶಾರದಾ ರತ್ನಾಕರ ಇವರ ಮನೆಯಲ್ಲಿ ಗುರುವಂದನೆ ಕಾರ್ಯಕ್ರಮವನ್ನು ನಡೆಸಲಾಯಿತು. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು ದ.ಕ.ಜಿ.ಪಂ.ಕಿ. ಪ್ರಾಥಮಿಕ ಶಾಲೆ ಬಂಟ್ರಿಂಜ ಅನಂತಾಡಿ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾರದಾ ರತ್ನಾಕರ ಇವರಿಗೆ ಘಟಕದ ವತಿಯಿಂದ ಗುರುವಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಘಟಕದ ಅಧ್ಯಕ್ಷರಾದ ಜಯಂತ ಬರಿಮಾರು ಮಾತನಾಡಿ ” ಗುರು ತತ್ವಾದರ್ಶದ ನೆಲೆಯಲ್ಲಿ ಬೆಳೆದು ಬಂದು ಕಾರ್ಯಾಚರಿಸುತ್ತಿರುವ ಯುವವಾಹಿನಿಯು ಗುರು ಪರಂಪರೆಯನ್ನು ಗೌರವಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ನುಡಿದರು. ಗೌರವ ವಂದನೆ ಸ್ವೀಕರಿಸಿದ ಶಾರದಾರತ್ನಾಕರ ಯುವವಾಹಿನಿ ಘಟಕದ ಸದಸ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಇದೆ ಸಂದರ್ಭದಲ್ಲಿ ಘಟಕದ ಮಾಜಿ ಮಹಿಳಾ ನಿರ್ದೇಶಕರಾದ ತ್ರಿವೇಣಿ ರಮೇಶ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು, ಕಾರ್ಯಕ್ರಮದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ರಮೇಶ್ ಮುಜಲ, ಘಟಕದ ಮಾಜಿ ಅಧ್ಯಕ್ಷರಾದ ರಾಜೇಶ್ ಬಾಬನಕಟ್ಟೆ, ಉಪಾಧ್ಯಕ್ಷರಾದ ನಾಗೇಶ್ ಕೊಂಕಣಪದವು, ಸಲಹೆಗಾರರಾದ ಯಶೋಧರ ಮಾಣಿ,ಮಾಜಿ ಸಲಹೆಗಾರರಾದ ಬಾಲಕೃಷ್ಣ ದೇಲಬೆಟ್ಟು, ಕೋಶಾಧಿಕಾರಿ ರಾಜೇಶ್ ಬಲ್ಯ, ಘಟಕದ ಸದಸ್ಯರಾದ ಸತೀಶ್ ಕೊಪ್ಪರಿಗೆ,ಚೇತನ್ ಮಲ್ಲಡ್ಕ,ಜನಾರ್ಧನ ಪೂಜಾರಿ,ಅಶ್ವತ್ಥ್ ಬಲ್ಯ,ಬಾಲಕೃಷ್ಣ ಶೇರ,ಗೌತಮ್,ಸಾಯಿಪ್ರಣಮ್, ಮತ್ತು ಮನೆಯ ಸದಸ್ಯರು ಉಪಸ್ಥಿತರಿದ್ದರು. ರಾಜೇಶ್ ಬಲ್ಯ ಸ್ವಾಗತಿಸಿ, ವಂದಿಸಿದರು.