ಹೆಜಮಾಡಿ : ಯುವವಾಹಿನಿ (ರಿ.) ಹೆಜಮಾಡಿ ಘಟಕದ ಆಶ್ರಯದಲ್ಲಿ ಬೃಹ್ಮಶ್ರಿ ನಾರಾಯಣ ಗುರುಗಳ 164ನೇ ಜಯಂತಿಯ ಅಂಗವಾಗಿ ದಿನಾಂಕ 19/08/2018 ರ ಆದಿತ್ಯವಾರದಂದು ಹೆಜಮಾಡಿ ಬಿಲ್ಲವರ ನಾಲ್ಕು ಕರೆಯ ಹತ್ತು ಸಮಸ್ತರಿಗೆ ಹಾಗೂ ಸಾರ್ವಜನಿಕರಿಗೆ ದಿ. ಸೋಮಪ್ಪ ಪೂಜಾರಿಯವರ ಗದ್ದೆಯಲ್ಲಿ ಜರಗಿದ ಕೆಸರು ಗದ್ದೆ ಕ್ರೀಡಾಕೂಟವನ್ನು ಯುವವಾಹಿನಿ ಹಳೆಯಂಗಡಿ ಘಟಕದ ಅಧ್ಯಕ್ಷ ದಿನೇಶ್ ಹೆಜಮಾಡಿ ಇವರ ಅಧ್ಯಕ್ಷತೆಯಲ್ಲಿ ಶ್ರೀ ಬ್ರಹ್ಮ ಬೈದರ್ಕಲ ಗರಡಿ ಹೆಜಮಾಡಿಯ ಪ್ರಧಾನ ಅರ್ಚಕರಾದ ಶೀ ಗುರುರಾಜ್ ಅಮೀನ್ ರವರು ಜ್ಯೋತಿ ಬೆಳಗಿಸಿ ಗದ್ದೆಗೆ ಪ್ರಸಾದ ಹಾಕುವುದರ ಮೂಲಕ ಉಧ್ಗಾಟಿಸಿದರು.
ಈ ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಶ್ರೀ ನರೇಶ್ ಕುಮಾರ್ ಸಸಿಹಿತ್ಲು,ಸಲಹೆಗಾರರಾದ ಕಿಶೋರ್ ಕೆ ಬಿಜೈ, ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀ ಲೋಕೇಶ್ ಅಮೀನ್, ಯುವವಾಹಿನಿ ಕಾಪು ಘಟಕದ ಅಧ್ಯಕ್ಷ ದೀಪಕ್ ಕುಮಾರ್ ಎರ್ಮಾಳು, ರವಿರಾಜ್ ಅಂಚನ್ ಹಾಗೂ ಕ್ರೀಡಾ ನಿರ್ದೇಶಕಿಯರಾದ ಪ್ರತಿಮಾ ಹೆಜಮಾಡಿ ಮತ್ತು ದೀಪಾ ದಿನೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನಾಲ್ಕು ಕರೆಯ ಹತ್ತು ಸಮಸ್ತರಿಗೆ ಹಾಗೂ ಸಾರ್ವಜನಿಕರಿಗೆ ಕೆಸರು ಗದ್ದೆಯಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಹೆಜಮಾಡಿಯಲ್ಲಿ
ಪ್ರಥಮವಾಗಿ ಜರುಗಿದ ಕೆಸರು ಗದ್ದೆ ಕ್ರೀಡಾಕೂಟ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಮುಖ್ಯವಾಗಿ ಬಿಲ್ಲವ ಸಂಘದ ಮಾಜಿ ಅಧ್ಯಕ್ಷರಾದ ಜಿನರಾಜ ಬಂಗೇರ, ದೊಂಬ ಕೆ ಪೂಜಾರಿ ಹಾಗೂ ಬಿಲ್ಲವ ಸಂಘದ ಉಪಾಧ್ಯಕ್ಷರಾದ ದಯಾನಂದ ಹೆಜಮಾಡಿ ಮುಂತಾದ ಗಣ್ಯರು ಹಾಗೂ ಊರಿನ ಎಲ್ಲಾ ಸಮಾಜ ಭಾಂದವರು ಸೇರಿ ಈ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದರು. ಯುವವಾಹಿನಿ ಹೆಜಮಾಡಿ ಘಟಕದ ಅಧ್ಯಕ್ಷ ದಿನೇಶ್ ಹೆಜಮಾಡಿ ಸ್ವಾಗತಿಸಿದರು. ದೀರಜ್ ಹೆಜಮಾಡಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಚಂದ್ರಾವತಿ. ಹೆಜಮಾಡಿ ವಂದಿಸಿದರು.