ಬೆಳ್ತಂಗಡಿ: ನಾರಾಯಣ ಗುರುಗಳು ಸಾಮಾಜಿಕವಾಗಿ ಹಿಂದುಳಿದವರ ಸ್ವಾಭಿಮಾನದ ಸಂಕೇತವಾಗಿದ್ದರೆ. ಅವರ ಉದ್ದೇಶ ಸಾಮಾಜಿಕ ಸೇವೆಯಾಗದೆ ಸಾಮಾಜಿಕ ಪರಿವರ್ತನೆಯಾಗಿತ್ತು. ಎಂದು ಚಿಂತಕಿ ಅಮೃತಾ ಶೆಟ್ಟಿ ಹೇಳಿದರು .
ಯುವವಾಹಿನಿ ಬೆಳ್ತಂಗಡಿ ಘಟಕದ ವತಿಯಿಂದ ದಿನಾಂಕ ೨೭. ೦೮. ೨೦೧೮ ರಂದು ಬ್ರಹ್ಮಶ್ರೀ ನಾರಾಯಣ ಗುರುಗಳ 164ನೇ ಜಯಂತಿಯ ಪ್ರಯುಕ್ತ ಗುರುವಾಯನಕೆರೆ ಶ್ರೀ ಶಾರದಾ ಮಂಟಪದಲ್ಲಿ ಸೋಮವಾರ ನಡೆದ ಗುರು ನಮನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ದೇವಸ್ಥಾನದ ಬದಲು ಗ್ರಂಥಾಲಯ ನಿರ್ಮಿಸಿ ಆ ಮೂಲಕ ತಿಳಿವಳಿಕೆಯುಳ್ಳ ಸಮಾಜವನ್ನು ರೂಪಿಸಿ ಎಂದು ನಾರಾಯಣಗುರುಗಳು ಸಾರ್ವಕಾಲಿಕವಾದ ವಿಚಾರಗಳನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ಹೇಳಿದರು
ಅಧ್ಯಕ್ಷತೆಯನ್ನು ವಹಿಸಿದ್ದ ಘಟಕದ ಅಧ್ಯಕ್ಷ ಪ್ರಶಾಂತ್ ಮಚ್ಚಿನ* ಮಾತನಾಡಿ ನಾರಾಯಣ ಗುರುಗಳ ತತ್ವ ಸಂದೇಶಗಳು ಬದುಕಿನ ಬೆಳಕಾಗಿದೆ ಎಂದರು. ವೇದಿಕೆಯಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಗೋಪಿನಾಥ್ ನಾಯಕ್, ಕುವೆಟ್ಟು ಗ್ರಾಪಂ ಅಧ್ಯಕ್ಷ ಅಶೋಕ್ ಕೋಟ್ಯಾನ್ , ಗುರುವಾಯನಕೆರೆ ಗೆಳೆಯರ ಬಳಗದ ಅಧ್ಯಕ್ಷ ರಾಜೇಶ್ ಕುಲಾಲ್ ಕುಲಾಲ ಯುವ ವೇದಿಕೆಯ ತಾಲೂಕು ಅಧ್ಯಕ್ಷ ಲೋಕೇಶ್ ಶಾರದಾಂಬಾ ಭಜನಾ ಮಂಡಳಿಯ ಅಧ್ಯಕ್ಷೆ ರೀತಾ ವೈ ಆಚಾರ್ಯ ಇದ್ದರು
ಯುವವಾಹಿನಿ ಬೆಳ್ತಂಗಡಿ ಘಟಕದ ವತಿಯಿಂದ ಶಾರದಾ ಮಂಟಪಕ್ಕೆ 21,000.00/- ಮೌಲ್ಯದ ಪೀಠೋಪಕರಣಗಳನ್ನು ಶಾರದಾ ಮಂಟಪಕ್ಕೆ ಕೊಡುಗೆಯಾಗಿ ನೀಡಲಾಯಿತು
ಕಾರ್ಯಕ್ರಮದ ನಂತರ ಘಟಕದ ಸದಸ್ಯರಿಂದ ಕಾರ್ಯಕ್ರಮದ ಬಗ್ಗೆ ನನ್ನ ಮಾತು ಎಂಬ ಸಂವಾದ ಕಾರ್ಯಕ್ರಮ ನಡೆಯಿತು ಎಲ್ಲಾ ಸದಸ್ಯರು ತಮ್ಮ ಅನಿಸಿಕೆಗಳನ್ನು ತಿಳಿಸಿದರು
ಕಾರ್ಯದರ್ಶಿ ಜಯರಾಜ್ ನಡಕರ ಪ್ರಾರ್ಥನೆ ನೆರವೇರಿಸಿದರು ಸಂಪತ್ ಬಿ ಸುವರ್ಣ ಪ್ರಾಸ್ತಾವಿಕ ಮಾತುಗಳನ್ನಾಡಿದರು ಘಟಕದ ನಿರ್ದೇಶಕ ರಾಕೇಶ್ ಬಿ ಎಲ್ ಸ್ವಾಗತಿಸಿ ಕೋಶಾಧಿಕಾರಿ ಉಮೇಶ್ ಸುವರ್ಣ ಧನ್ಯವಾದ ಸಲ್ಲಿಸಿದರು ಘಟಕದ ಸಲಹೆಗಾರರದ ಸುಧಾಮಣಿ ರಮಾನಂದ್ ಕಾರ್ಯಕ್ರಮ ನಿರೂಪಿಸಿದರು.