ಮಹಾ ಮಾನವತಾವಾದಿ ಮೇರು ಸಂದೇಶ ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣಗುರುವರ್ಯರು ಸಮಾಜದ ಒಳಿತಿಗಾಗಿ ದುಡಿದವರು. ಸಮಸ್ತ ಮಾನವ ಜನಾಂಗಕ್ಕೆ ಹೊಸ ಹಾದಿ ತೋರಿದ ಅವರ ಸಂದೇಶದ ಅನುಷ್ಠಾನದ ಜತೆಗೆ ಅವರು ತೋರಿದ ಹಾದಿಯಲ್ಲಿ ಸಂಘಟಿತ ಸಮಾಜ ನಿರ್ಮಾಣಕ್ಕೆ ಯತ್ನಿಸಬೇಕು ಎಂದು ಮಂಗಳೂರಿನ ಖ್ಯಾತ ವಕೀಲರು ಹಾಗು ಕಾಂತಾವರದ ಅಲ್ಲಮ ಪ್ರಭು ಪೀಠದ ಅಧ್ಯಕ್ಷರಾದ ಶ್ರೀ ಯಶೋಧರ ಪಿ. ಕರ್ಕೇರರವರು ತಿಳಿಸಿದರು
ಅವರು ಯುವವಾಹಿನಿ(ರಿ) ಕಂಕನಾಡಿ ಘಟಕದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುವರ್ಯರ 163 ನೇ ಜಯಂತಿಯ ಪ್ರಯುಕ್ತ ದಿನಾಂಕ 08.10.2017 ನೇ ರವಿವಾರ ಮಂಗಳೂರು – ಉಜ್ಜೋಡಿ ಮಹಾಂಕಾಳಿ ದೈವಸ್ಥಾನದ ವಠಾರದಲ್ಲಿ ಜರುಗಿದ ಗುರುಸ್ಮರಣೆ ಕಾರ್ಯಕ್ರಮದಲ್ಲಿ ಪ್ರಧಾನ ಬಾಷಣಕಾರರಾಗಿ ಆಗಮಿಸಿ ಮಾತನಾಡಿದರು. ಶ್ರೀ ಮಹಾಂಕಾಳಿ ದೈವಸ್ಥಾನ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ಬಂಗೇರ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು
ಯುವವಾಹಿನಿಯ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಅತಿಥಿಯಾದ ಸಾಮಾಜಿಕ ಕಾರ್ಯಕರ್ತ ಹಾಗು ಎಸ್ & ಎಸ್ ಎಂಟರ್ಪ್ರೈಸಸ್ನ ಮಾಲಕರಾದ ದಿನೇಶ್ ಕಲ್ಲಡ್ಕ ಅಭಿಪ್ರಾಯ ಪಟ್ಟರು . ಮಂಗಳೂರಿನ ಪ್ರಖ್ಯಾತ ಉದ್ಯಮಿ ಹಾಗು ಕಂಕನಾಡಿ ಗರೋಡಿಯ ಮೊಕ್ತೇಸರರಾದ ಶ್ರೀ ಜಗದೀಪ್ ಡಿ ಸುವರ್ಣ,ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಯಶವಂತ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು ಕಾರ್ಯಕ್ರಮದ ಹಿರಿಯ ಸದಸ್ಯರಾದ ಜನಾರ್ಧನ ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವವಾಹಿನಿ ಕಂಕನಾಡಿ ಘಟಕದ ಅಧ್ಯಕ್ಷರಾದ ಗೋಪಾಲ್ ಎಂ ಪೂಜಾರಿಯವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಎಲ್ಲರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು
ರಾಷ್ಟ್ರಮಟ್ಟದ ಕ್ರೀಡಾ ತರಬೇತುದಾರ ಹಾಗೂ ಕ್ರೀಡಾ ಶಿಕ್ಷಕ ಸಂದೀಪ್ರಾಜ್ ಮತ್ತು ಅಂತರಾಷ್ಟ್ರೀಯ ಕ್ರೀಡಾಪಟು ಚಿನ್ನದ ಪದಕ ವಿಜೇತ ಸ್ವಸ್ತಿಕ್ ಇವರುಗಳ ಸಾಧನೆಯನ್ನು ಗುರುತಿಸಿ ಅಭಿನಂದಿಸಲಾಯಿತು
ಯುವವಾಹಿನಿ ಕಂಕನಾಡಿ ಘಟಕದ ಸಲಹೆಗಾರರಾಗಿ ಸೇವೆ ಸಲ್ಲಿಸಿದ ಪರಮೇಶ್ವರ ಪೂಜಾರಿಯವರನ್ನು ಇದೇ ಸಂದರ್ಭದಲ್ಲಿ ಅವರ ಸೇವೆಯನ್ನು ಸ್ಮರಿಸಿ ಅಭಿನಂದಿಸಲಾಯಿತು. ಬ್ರಹ್ಮಶ್ರೀ ನಾರಾಯಣಗುರುಸ್ವಾಮಿಗಳ ಜಯಂತಿಯ ಪ್ರಯುಕ್ತ ಶಾಲಾ ಮಕ್ಕಳಿಗಾಗಿ ಏರ್ಪಡಿಸಿದ್ದ ಬಾಷಣ ಸ್ಪರ್ಧೆಯ ಬಹುಮಾನಗಳನ್ನು ವಿತರಿಸಲಾಯಿತು . ಕಂಕನಾಡಿ ಘಟಕದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಹರೀಶ್ ಕೆ ಸನಿಲ್ರವರು ಗುರುಸ್ಮರಣೆಯ ಉದ್ದೇಶ ಹಾಗು ಯುವವಾಹಿನಿಯ ತತ್ವ ಧ್ಯೇಯಗಳ ಬಗ್ಗೆ ತಮ್ಮ ಪ್ರಾಸ್ತಾವಿಕ ಮಾತನಾಡಿದರು ಸಂಕ್ಷಿಪ್ತವಾಗಿ ವಿವರಿಸಿದರು ಕಾರ್ಯದರ್ಶಿಯಾದ ಶ್ರೀ ಮೋಹನ್ ಜಿ ಅಮೀನ್ ಧನ್ಯವಾದ ಅರ್ಪಿಸಿದರು. ರಾಕೇಶ್ ಕುಮಾರ್ ಹಾಗೂ ರೋಹಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು
ಉತ್ತಮ ಕಾರ್ಯಕ್ರಮ ಘಟಕಕ್ಕೆ ಶುಭ ಹಾರೈಕೆ ಗಳು