ಕೂಳೂರು :- ದಿನಾಂಕ 21.04.2022 ಗುರುವಾರದಂದು ಫಲ್ಗುಣಿ ಆಡಿಟೋರಿಯಂ P.S.R.M ಕಟ್ಟಡ ಮೇಲಿನ ಮಹಡಿ ಸೊಸೈಟಿ ಬಿಲ್ಡಿಂಗ್ ಕೂಳೂರು ಇಲ್ಲಿ ನವಿಕೃತ ಪಲ್ಗುಣಿ ಸಭಾಂಗಣದ ದಾರವನ್ನು ಬಿಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಶ್ರೀಮತಿ ಜಾನಕಿ ಸದಾಶಿವ ಅಮೀನ್ ಕೂಳೂರು ಘಟಕ ಒಂದು ಬಲಿಷ್ಠ ಘಟಕ. ಇನ್ನಷ್ಟು ಉತ್ತಮ ಸಮಾಜ ಮುಖಿ ಕಾರ್ಯ ನಡೆಯಲಿ. ಚಿಕ್ಕ ಗಿಡ ದೊಡ್ಡ ಮರವಾಗಿ ಬೆಳೆದು ರೆಂಬೆ ಕೊಂಬೆಗಳು ಮೂಡಿ ಹೊಸ ಚಿಗುರು ಚಿಗುರಲಿ ಎಂದು ಶುಭ ಹಾರೈಸಿದರು. ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಮಾತನಾಡಿದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ್ ಅಮೀನ್ ಮಟ್ಟು ಮಾತಾನಾಡಿಮನಸ್ಸಿದ್ದರೆ ಮಾರ್ಗ, ಸಾಧಿಸುವ ಛಲವಿದ್ದರೆ ಯಾವುದೇ ಕೆಲಸವು ಕಷ್ಟವಲ್ಲ ಎಂಬುದನ್ನು ಯುವವಾಹಿನಿ (ರಿ.) ಕೂಳೂರು ಘಟಕದ ಸದಸ್ಯರು ಮಾಡಿ ತೋರಿಸಿದ್ದಾರೆ. ಉತ್ಸಾಹಿ ಯುವಕರ ಪರಿಶ್ರಮವೇ ಈ ಹೊಸ ಚಿಗುರು ಕಾರ್ಯಕ್ರಮ ಎಂದು ಹೇಳಿದರು. ಯುವವಾಹಿನಿ ಕೂಳೂರು ಘಟಕವು ಯಶಸ್ವಿ ಘಟಕ ಎಂದು ಪ್ರಶಂಸಿತವಾಗಿದೆ. ಅತ್ಯಲ್ಪ ಅವಧಿಯಲ್ಲಿ ತನ್ನ ಸ್ವಂತ ಸಭಾಂಗಣದ ಅಭಿಲಾಷೆಯನ್ನು ಈಡೇರಿಸಿಕೊಂಡ ಕೂಳೂರು ಘಟಕದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಅನಿಲ್ ಕುಮಾರ್ ಮಾತನಾಡಿ ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಕಳೆದ 6 ವರುಷಗಳಿಂದ ಕೋವಿಡ್ ಸಮಯದಲ್ಲೂ ಕೂಳೂರು ಪರಿಸರದಲ್ಲಿ ಉತ್ತಮ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿರುವ ಕ್ರಿಯಾಶೀಲ ಘಟಕವಾಗಿದೆ, ಘಟಕವು ಇನ್ನಷ್ಟೂ ಸಮಾಜ ಮುಖಿ ಕೆಲಸಗಳನ್ನು ನಡೆಸಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕಾರ್ತಿಕೇಯ ಅಲ್ಯುಮಿನಿಯಂ ಇದರ ಪ್ರೊಪ್ರೈಟರ್ ಶ್ರೀಮತಿ ಜಯಂತಿ ಬಾಲಕೃಷ್ಣ ಮಾತನಾಡಿ ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂಬ ಬ್ರಹ್ಮಶ್ರೀ ನಾರಾಯಣಗುರುಗಳ ಸಿದ್ಧಾಂತದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವವಾಹಿನಿ ವಿದ್ಯೆ, ಉದ್ಯೋಗ, ಸಂಪರ್ಕದ ಧ್ಯೇಯ ಹೊಂದಿರುವ ಯುವವಾಹಿನಿ ಕುಟುಂಬಕ್ಕೆ ತನ್ನ ಮೊದಲ ಭೇಟಿ ಆಗಿದ್ದು ತುಂಬಾ ಸಂತಸ ತಂದಿದೆ ಎಂದು ಹೇಳಿದರು. ಯುವವಾಹಿನಿ (ರಿ.) ಕೂಳೂರು ಘಟಕಕ್ಕೆ ಸದಾ ತನ್ನ ಬೆಂಬಲ ಇರುತ್ತದೆ ಎಂದು ಹೇಳಿ ಘಟಕದ ಕೆಲಸ ಕಾರ್ಯಗಳನ್ನು ಶ್ಲಾಘಿಸಿದರು. ಲಯನ್ಸ್ ಕ್ಲಬ್ ಫಲ್ಗುಣಿ ಇದರ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಮಾತನಾಡಿ ಕೂಳೂರು ಪರಿಸರದಲ್ಲಿ ಯುವವಾಹಿನಿಯ ಒಂದು ಕ್ರಿಯಾಶೀಲ ಘಟಕ ಹಾಗೂ ಲಯನ್ಸ್ ಫಲ್ಗುಣಿ ಸಂಸ್ಥೆ ಸೃಷ್ಟಿಯಾಗಲು ಕಾರಣಿಕೃತರಾದ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಯಶವಂತ್ ಪೂಜಾರಿಯವರಿಗೆ ಅಭಿನಂದನೆ ಸಲ್ಲಿಸಿದರು. ಮುಂದಿನ ಹೆಜ್ಜೆಯನ್ನು ಈ ಕಟ್ಟಡಕ್ಕೆ ಸ್ಥಳಾಂತರಿಸಿ ಹೊಸಚಿಗುರು ಕನಸಿನ ಸೂರನ್ನು ನಿರ್ಮಾಣ ಮಾಡಿದ್ದೇವೆ, ಸಂಸ್ಥೆಯ ಮೂಲಕ ಇನ್ನಷ್ಟು ಉತ್ತಮ ಕೆಲಸ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸುಂದರ ಸಭಾಂಗಣ ನಿರ್ಮಾಣ ಮಾಡಲು ಅನುವು ಮಾಡಿಕೊಟ್ಟ ಲಯನ್ಸ್ ಫಲ್ಗುಣಿ ಇದರ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಹಾಗೂ ಕಾರ್ಯದರ್ಶಿ ಜಗದೀಶ್ ಸುವರ್ಣ ಸಂಚಾಲಕರಾದ ನಿಶಿತ್ ಪೂಜಾರಿ ಮತ್ತು ಸಹ ಸಂಚಾಲಕರಾದ ಯಶವಂತ್ ಪೂಜಾರಿ ಇವರನ್ನು ಗೌರವಿಸಲಾಯಿತು.. ಹಾಗೂ ಇಂತಹ ಸುಂದರ ಸಭಾಂಗಣ ನಿರ್ಮಾಣಕ್ಕೆ ಶ್ರಮಿಸಿದ ಮತ್ತು ಧನ ಸಹಾಯ ನೀಡಿದವರಿಗೆ ಗೌರವ ಸಲ್ಲಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ದೀಕ್ಷಿತ್ ಸಿ ಎಸ್ ವಹಿಸಿದ್ದರು. ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಫಲ್ಗುಣಿ ಇದರ ಕಾರ್ಯದರ್ಶಿ ಜಗದೀಶ್ ಸುವರ್ಣ, ಯುವವಾಹಿನಿ (ರಿ.) ಕೂಳೂರು ಘಟಕದ ಕಾರ್ಯದರ್ಶಿ ಸುಮಾ ಶಿವು ಕೋಡಿಕಲ್, ಕಾರ್ಯಕ್ರಮದ ಸಂಚಾಲಕರಾದ ಒಂದನೇ ಉಪಾಧ್ಯಕ್ಷರಾದ ನಿಶಿತ್ ಪೂಜಾರಿ ಉಪಸ್ಥಿತರಿದ್ದರು. ಘಟಕದ ಸದಸ್ಯರಾದ ಮಧುಶ್ರೀ ಪ್ರಶಾಂತ್ , ನಯನ ರಮೇಶ್, ಸ್ವಾತಿ, ಹರ್ಶಿತಾ ಪ್ರಾರ್ಥಿಸಿದರು. ಅಧ್ಯಕ್ಷರು ಸ್ವಾಗತಿಸಿದರು. ಸಂಚಾಲಕರಾದ ನಿಶಿತ್ ಪೂಜಾರಿ ಧನ್ಯವಾದ ಸಲ್ಲಿಸಿದರು. ಮಾಜಿ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್ ಮತ್ತು ವಿದ್ಯಾನಿಧಿ ನಿರ್ದೇಶಕರಾದ ಸುಮಂಗಲಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಮೊದಲು ಸಂಜೆ 6.00 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮದ ನಂತರ ಯಕ್ಷ ಶರಧಿ ಮಂಗಳೂರು ಇವರಿಂದ ಕಾಳಿಂಗ ಮರ್ಧನ ಎಂಬ ಯಕ್ಷಗಾನ ಕಾರ್ಯಕ್ರಮ ನಡೆಯಿತು.