ಸಸಿಹಿತ್ಲು : ಕ್ರೀಯಾಶೀಲ ಮನಸುಗಳು ಇದ್ದಾಗ ಕ್ರೀಯಾತ್ಮಕ ಕಲ್ಪನೆಗಳು ಹುಟ್ಟಿಕೊಳ್ಳುತ್ತದೆ, ಮಾಡುವ ಕೆಲಸದಲ್ಲಿ ಬದ್ದತೆ ಇದ್ದಾಗ ಲಭಿಸುವ ಫಲಿತಾಂಶವೂ ಫಲಪ್ರದವಾಗಿರುತ್ತದೆ ಇದಕ್ಕೆ ಯುವವಾಹಿನಿ ಸಸಿಹಿತ್ಲು ಘಟಕ ಹಮ್ಮಿಕೊಂಡಿರುವ ಶ್ರೀಕೃಷ್ಣ ವೇಷ ಸ್ಪರ್ಧೆಯೇ ಸಾಕ್ಷಿ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ ನಡುಬೈಲ್ ತಿಳಿಸಿದರು.
ಅವರು, ಯುವವಾಹಿನಿ (ರಿ) ಸಸಿಹಿತ್ಲು ಘಟಕದ ಆಶ್ರಯದಲ್ಲಿ ದಿನಾಂಕ 01.09.2018 ರಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಅಗ್ಗಿದಕಳಿಯ ಸಸಿಹಿತ್ಲು ಮತ್ತು ಲಯನ್ಸ್-ಲಯನೆಸ್ ಕ್ಲಬ್ ಮಂಗಳಾದೇವಿ ಇವರ ಸಹಕಾರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಶ್ರೀಕೃಷ್ಣ ವೇಷ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಚಿನ್ನದ ಉಂಗುರ ಪ್ರದಾನಿಸಿ ಮಾತನಾಡಿದರು.
ಮಕ್ಕಳು ದೇವ ಸ್ವರೂಪಿಗಳು ಅವರಲ್ಲಿ ಆನಂದವನ್ನು ಉಂಟುಮಾಡಬೇಕು ಏಕೆಂದರೆ ಮಕ್ಕಳು ಕ್ರೀಯಾಶೀಲರಾದಷ್ಟು ಚುರುಕುಗೊಳ್ಳುತ್ತಾರೆ, ಮಕ್ಕಳಿಗಾಗಿ ಹೆಚ್ಚುಹೆಚ್ಚು ಅವಕಾಶಗಳನ್ನು ಸೃಷ್ಠಿಸಿ ನೀಡೋಣ ಎಂದರು. ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಅಗ್ಗಿದಕಳಿಯ ಸಸಿಹಿತ್ಲು ಇದರ ಅಧ್ಯಕ್ಷರಾದ ಪ್ರಕಾಶ್ ಕುಮಾರ್ ಬಿ.ಎನ್ ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಯುವವಾಹಿನಿ ಸಸಿಹಿತ್ಲು ಘಟಕದ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.
ಲಯನ್ಸ್ ವಲಯ 1 ರ ವಲಯಾಧ್ಯಕ್ಷ ಅನಿಲ್ ಕುಮಾರ್, ಲಯನ್ಸ್ ಕ್ಲಬ್ ಮಂಗಳಾದೇವಿ ಇದರ ಅಧ್ಯಕ್ಷರಾದ ಯಶವಂತ್ ಪೂಜಾರಿ, ಲಯನೆಸ್ ಅಧ್ಯಕ್ಷೆ ಕುಶಲಾಕ್ಷಿ, ಯುವವಾಹಿನಿ ಸಸಿಹಿತ್ಲು ಘಟಕದ ಸಲಹೆಗಾರರಾದ ಲಕ್ಷ್ಮಣ್ ಸಾಲ್ಯಾನ್, ನಾರಾಯಣ ಗುರು ಮಹಿಳಾ ಮಂಡಳಿ ಅಧ್ಯಕ್ಷೆ ಶುಭಾ, ಧನ್ರಾಜ್ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು. ಯುವವಾಹಿನಿ ಸಸಿಹಿತ್ಲು ಘಟಕದ ಅಧ್ಯಕ್ಷ ಮಧು ಬಂಗೇರಾ ಅಧ್ಯಕ್ಷತೆ ವಹಿಸಿದ್ದರು. ನರೇಶ್ ಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ವೀಣಾ ವಂದಿಸಿದರು, ಶೈಲೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.