ಕಡಬ : ಯುವವಾಹಿನಿ (ರಿ) ಕಡಬ ಘಟಕದ ಆಶ್ರಯದಲ್ಲಿ ಹಾಗೂ ಕಡಬ ತಾಲೂಕು ಬಿಲ್ಲವ ಸಂಚಾಲನ ಸಮಿತಿ, ಕಡಬ ತಾಲೂಕಿನ ಎಲ್ಲಾ ಬಿಲ್ಲವ ಗ್ರಾಮ ಸಮಿತಿಯ ಸಹಕಾರದೊಂದಿಗೆ ಕಡಬದ ಜಯ ದುರ್ಗಾಪರಾಮೇಶ್ವರಿ ದೇವಸ್ಥಾನ ಪುಣ್ಯದ ಗದ್ದೆಯಲ್ಲಿ ದಿನಾಂಕ 22-09-2024ನೇ ಆದಿತ್ಯವಾರ ಬಿಲ್ಲವ ಬಂಧುಗಳ 3 ನೇ ವರ್ಷದ ಕೆಸರ್ದ ಕಂಡೊಡು ಬಿರುವೆರ್ನ ಗೊಬ್ಬುಲು ಬಹಳ ವಿಜ್ರಂಭಣೆಯಿಂದ ಯಶಸ್ವಿಯಾಗಿ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯರಾದ ಲಿಂಗಪ್ಪ ಪೂಜಾರಿ ಕೇಪುಳು ಉದ್ಘಾಟಿಸಿದರು, ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರು ಸುಂದರ ಪೂಜಾರಿ ಅಂಗಣ ವಹಿಸಿದ್ದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಜಯಂತ ನಡುಬೈಲು, ಚೇರಮ್ಯಾನ್. ಅಕ್ಷಯ ಕಾಲೇಜು ಪುತ್ತೂರು ಮಾತನಾಡಿ, ಘಟಕದ ಎಲ್ಲಾ ಪದಾಧಿಕಾರಿಗಳ ಮನಸಿನಲ್ಲಿ ಯಾವುದೆ ಕಲ್ಮಶ ಇಲ್ಲ. ಯಾವುದೇ ಹಣ ಮಾಡುವ ಉದ್ದೇಶದಿಂದ ಅಲ್ಲ, ಇಂತಹ ಕಾರ್ಯಕ್ರಮಗಳಿಂದ ನಮ್ಮ ಯುವಕರು ಮತ್ತು ಮಕ್ಕಳು ಉನ್ನತ ಮಟ್ಟಕ್ಕೆ ಬರಬೇಕು, ನಾವು ಅವರನ್ನು ಬೆನ್ನು ತಟ್ಟಿ ಹುರಿದುಂಬಿಸಿದರೆ ಸಮಾಜಕ್ಕೆ ಏನಾದರೂ ಕೆಲಸ ಮಾಡಬೇಕೆಂಬ ಹುಮ್ಮಸು ಬರುತ್ತದೆ ಎಂದರು.
ಶ್ರೀ ಸಂತೋಷ್ ಕುಮಾರ್, ಶಾಖಾ ವ್ಯವಸ್ಥಾಪಕರು SCDCC ಬ್ಯಾಂಕ್ ಬೆಳ್ಳಾರೆ, ಪ್ರದೀಪ್ ನಡುವಲ್, ಶಾಖಾ ವ್ಯವಸ್ಥಾಪಕರು, ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘ ಕಡಬ, ಶ್ರೀ ಅರುಣ್ ಕುಮಾರ್ ಜೆಡೆಮನೆ, (ಸ್ಥಳದಾನಿ ), ಶಿವಪ್ರಸಾದ್ ನೂಚಿಲ , ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು ಯುವವಾಹಿನಿ (ರಿ) ಕೇಂದ್ರ ಸಮಿತಿ, ಶ್ರೀಮತಿ ಪಿ ವೈ ಕುಸುಮ, ಮಾಜಿ ತಾಲೂಕು ಪಂಚಾಯತ್ ಸದಸ್ಯರು, ಶ್ರೀ ಅಶೋಕ್ ಕುಮಾರ್ , ನಿವೃತ್ತ ಪಶು ವೈದ್ಯಾಧಿಕಾರಿ ಕೊಯಿಲ, ಶ್ರೀ ಜಿನ್ನಪ್ಪ ಸಾಲಿಯನ್, ಸಂಚಾಲಕರು. ಕಡಬ ತಾಲೂಕು ಬಿಲ್ಲವ ಸಂಚಲನ ಸಮಿತಿ ಕಡಬ, ವಸಂತ ಬದಿಬಾಗಿಲು , ಸರಿತಾ ಉಂಡಿಲ, ಘಟಕದ ಕಾರ್ಯದರ್ಶಿ ಜಯಪ್ರಕಾಶ್ ಉಪಸ್ಥಿತರಿದ್ದರು.
ಕ್ರೀಡಾ ಸಾಧಕಿ ಮ್ಯಾರಥಾನ್ ಕ್ರೀಡಾಪಟು ಶ್ರೀಮತಿ ನೇತ್ರಾವತಿ ಹೊಪ್ಪಾಳೆ ಬಲ್ಪ ಸನ್ಮಾನಿಸಲಾಯಿತು.ಹಾಗೂ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ನಮ್ರತಾ ಲೋಕೇಶ್ ಪೂಜಾರಿ ಕೇರ್ಪುಡೆ ಇವರನ್ನು ಕಾರ್ಯಕ್ರಮದಲ್ಲಿ ಗೌರವಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮ ಪೂರ್ವಾಹ್ನ 9.00ಕ್ಕೆ ಗಂಟೆಯಿಂದ ಪ್ರಾರಂಭಗೊಂಡು ಹಲವು ರೀತಿಯ ಸ್ಪರ್ಧೆಗಳು ನಡೆಯಿತು.
ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಿತು. ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರು ಸುಂದರ ಪೂಜಾರಿ ಅಂಗಣ, ಮುಖ್ಯ ಅತಿಥಿಯಾಗಿ ಶ್ರೀ ಅಭಿಲಾಷ್ ಪಿ ಕೆ, ಯುವ ಉದ್ಯಮಿ, ರಮೇಶ್ ಸಾಲಿಯನ್ , ಅಧ್ಯಕ್ಷರು, ಕೋಟಿ- ಚೆನ್ನಯ್ಯ ಮಿತ್ರ ವೃಂದ ಅಲಂಕಾರು, ಶಿವಪ್ರಸಾದ್ ನೂಚಿಲ, ಶ್ರೀ ಅಶೋಕ್ ಕುಮಾರ್, ಉಮೇಶ್ ಬಲ್ಪ, ಘಟಕದ ಕ್ರೀಡಾ ನಿರ್ದೇಶಕರು ರಾಜು ಪದವು, ಘಟಕದ ಮಹಿಳಾ ನಿರ್ದೇಶಕರು ರೇಖಾ, ಘಟಕದ ಕಾರ್ಯದರ್ಶಿ ಜಯಪ್ರಕಾಶ್, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅರುಣ್ ಕುಮಾರ್ ಜೆಡೆಮನೆ ಇವರನ್ನು ಗೌರವಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದ ಸಹಕಾರಕ್ಕೆ ಲಕ್ಕಿ ಕೂಪನ್ ಮಾಡಲಾಗಿದ್ದು, ಲಕ್ಕಿ ಡ್ರಾ ನಡೆಯಿತು.
ಕಾರ್ಯಕ್ರಮದಲ್ಲಿ ಬಿಲ್ಲವ ಪ್ರಮುಖರು , ಘಟಕದ ನಿಕಟಪೂರ್ವ ಅಧ್ಯಕ್ಷರು ಕೃಷ್ಣಪ್ಪ ಅಮೈ, ಮಾಜಿ ಅಧ್ಯಕ್ಷ ಪ್ರವೀಣ್ ಕುಮಾರ್ ಒಂಕಲ್, ಬಿ ಎಲ್ ಜನಾರ್ದನ, ಉಪಸ್ಥಿತರಿದ್ದರು.
ಮಧ್ಯಾಹ್ನ 300 ಊಟದ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದ ಪ್ರಾರ್ಥನೆಯನ್ನು ಘಟಕದ ಉಪಾಧ್ಯಕ್ಷರಾದ ಪ್ರಶಾಂತ್ ಏನ್ ಎಸ್ ಕಡಬ ನೆರವೇರಿಸಿ, ನಿರೂಪಣೆಯನ್ನು ಕೃತಿಕಾ ಸದಾಶಿವ ಬಲ್ಯ ಇವರು ನೆರವೇರಿಸಿದರು. ಉದ್ಘಾಟನಾ ಸಮಾರಂಭದ ಪ್ರಾಸ್ತಾವಿಕ ಹಾಗೂ ಸ್ವಾಗತವನ್ನು ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ಕೃಷ್ಣಪ್ಪ ಅಮೈ ನೆರವೇರಿಸಿದರು.
ಸಮಾರೋಪದ ಸ್ವಾಗತವನ್ನು ಸುಪ್ರೀತಾ ಚರಣ್ ಪಾಲಪ್ಪೆ ನೆರವೇರಿಸಿ, ಘಟಕದ ಮಾಜಿ ಅಧ್ಯಕ್ಷರಾದ ಪ್ರವೀಣ್ ಒಂಕಲ್ ಹಾಗೂ ಘಟಕದ ಕಾರ್ಯದರ್ಶಿ ಜಯಪ್ರಕಾಶ್ ದೋಳ ವಂದನಾರ್ಪಣೆ ಸಲ್ಲಿಸಿದರು.