ಕೂಳೂರು ಘಟಕದ ವತಿಯಿಂದ ಸ್ವಚ್ಛತಾ ಅಭಿಯಾನ

ಕೂಳೂರು : ಯುವ ವಾಹಿನಿ ಕೂಳೂರು ಘಟಕದ ವತಿಯಿಂದ ಸ್ವಚ್ಛತಾ ಅಭಿಯಾನವು ದಿನಾಂಕ 22/07/18ರಂದು ಬಂಗ್ರ ಕೂಳೂರಿನಲ್ಲಿ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ ಸಂಘಟನಾ ಕಾರ್ಯದರ್ಶಿಯಾದ ಪವಿತ್ರ ಅಮೀನ್ ಇವರ ನೇತೃತ್ವದಲ್ಲಿ ನಡೆಯಿತು .ಉಪಾಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್ ಈ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು . ಸುಮಾರು 40ರಿಂದ 45 ಸದಸ್ಯರು ಹಾಗೂ ಕೆಲವೊಂದು ಊರಿನ ಜನರು ಕೂಡ ಈ ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗಿದ್ದು ಬಂಗ್ರಕೂಳೂರಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು. ಈ ಸ್ವಚ್ಛತಾ ಅಭಿಯಾನದಲ್ಲಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಕಾರ್ಯದರ್ಶಿ ಪವಿತ್ರ ಅಂಚನ್,ಉಪಾಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್, ಸಂಘಟನಾ ಕಾರ್ಯದರ್ಶಿ ಪವಿತ್ರಾ ಅಮೀನ್ ಉಪಸ್ಥಿತರಿದ್ದು ,ಬೆಳಗಿನ ಚಹಾ ತಿಂಡಿ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಸಂಘಟನಾ ಕಾರ್ಯದರ್ಶಿ ಪವಿತ್ರ ಅವರ ಮನೆಯಲ್ಲಿ ವ್ಯವಸ್ಥೆ ಮಾಡಲಾಯಿತು. ಕೊನೆಗೆ ಸಂಘಟನಾ ಕಾರ್ಯದರ್ಶಿ ಪವಿತ್ರ ಅಮೀನ್ ಎಲ್ಲರನ್ನು ವಂದಿಸಿದರು .

One thought on “ಕೂಳೂರು ಘಟಕದ ವತಿಯಿಂದ ಸ್ವಚ್ಛತಾ ಅಭಿಯಾನ

Leave a Reply

Your email address will not be published. Required fields are marked *

error: Content is protected !!