ಉಡುಪಿ: ಯುವವಾಹಿನಿ(ರಿ.) ಉಡುಪಿ ಘಟಕದ ವತಿಯಿಂದ ಕುಟುಂಬೋತ್ಸವವು ಕಟಪಾಡಿ ಉದ್ಭವ್ ವಿಂಟೇಜ್ ರೆಸಾರ್ಟ್ ನಲ್ಲಿ ಆದಿತ್ಯವಾರ 02-06-2024 ರಂದು ಆಯೋಜಿಸಿತ್ತು.
ಕುಟುಂಬೋತ್ಸವಕ್ಕೆ ಹಾಜರಾದ ಸದಸ್ಯರನ್ನು ಆರತಿ ಬೆಳಗಿಸಿ ಉದ್ಘಾಟಿಸಿದರು. ಕುಂಕುಮ ಹಚ್ಚಿ, ಪುಷ್ಪ ಪಕಳೆಗಳಿಂದ ಸ್ವಾಗತಿಸಲಾಯಿತು. ಸಹಭೋಜನ ಸವಿಯನುಂಡು, ಸಂಘ ಜೀವನದ ಸುಖವನನುಭವಿಸಿ,
ಬೆಳಗಿನಿಂದ ಸಂಜೆಯವರೆಗೂ ಎಲ್ಲರೂ ಜೊತೆಗಿದ್ದು ಊಟ ಉಪಹಾರ, ಒಂದಷ್ಟು ಆಟೋಟ, ಪ್ರತಿಭಾ ಪ್ರದರ್ಶನ, ಬಹುಮಾನ ವಿತರಣೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸವಿ ನೆನಪುಗಳ ಬುತ್ತಿಯನ್ನು ಹೊತ್ತೊಯ್ದ ರಸಾನುಭವ.